

ಮುಂಬೈ: ಕಳೆದ ವರ್ಷ ಬಾಲಿವುಡ್ಗೆ ಅದ್ದೂರಿ ವರ್ಷವೇ ಆಗಿತ್ತು ಎಂಬುದಕ್ಕೆ ಬಾಕ್ಸ್ ಆಫೀಸ್ನಲ್ಲಿ ಅಬ್ಬರಿಸಿದ ಸ್ಟಾರ್ ನಟರ ಸಿನಿಮಾಗಳೇ ಸಾಕ್ಷಿ. ಈ ಪೈಕಿ ಕಿಂಗ್ ಖಾನ್, ನಟ ಶಾರುಖ್ ಖಾನ್ ಅಭಿನಯದ ಮೂರು ಚಿತ್ರಗಳು ಬ್ಲಾಕ್ಬಸ್ಟರ್ ಹಿಟ್ ಆಗುವ ಮೂಲಕ ಗಲ್ಲಾಪೆಟ್ಟಿಗೆಯಲ್ಲಿ ಅಬ್ಬರಿಸುವುದರ ಜತೆಗೆ ಹೆಚ್ಚಿನ ವೀಕ್ಷಣೆಗೆ ಕಾರಣವಾಯಿತು. ಇದೀಗ ಈ ಸಿನಿಮಾಗಳನ್ನು ವೀಕ್ಷಿಸಿದವರ ಸಂಖ್ಯೆ ರಿವೀಲ್ ಆಗಿದ್ದು, ಎಷ್ಟು ಕೋಟಿ ಜನ ಎಂಬುದನ್ನು ಕೇಳಿದ್ರೆ ಖಂಡಿತ ನೀವು ಅಚ್ಚರಿಗೊಳ್ತೀರಿ.
ಇದನ್ನೂ ಓದಿ: ಮಕ್ಕಳು ನಮ್ಮ ಸಂಸ್ಕೃತಿ, ಆಚಾರ ವಿಚಾರ ತಿಳಿದುಕೊಳ್ಳಲಿ
ಕಿಂಗ್ ಈಸ್ ಆಲ್ ವೆಸ್ ಕಿಂಗ್ ಹೀಗಂತ ನಾವ್ ಹೇಳ್ತಿಲ್ಲ. ಬಾಲಿವುಡ್ ಬಾದ್ ಷಾ ಶಾರುಖ್ ಖಾನ್ ಅಭಿಮಾನಿಗಳು ಹೆಮ್ಮೆಯಿಂದ ಸಾರುತ್ತಿದ್ದಾರೆ. ಅದಕ್ಕೆ ಕಾರಣ ಶಾರುಖ್ ಅಭಿನಯದ ಚಿತ್ರಗಳು ಮತ್ತೊಂದು ದಾಖಲೆಗೆ ಸೇರ್ಪಡೆಯಾಗಿದೆ. 2023ರಲ್ಲಿ ಬಾಕ್ಸ್ ಆಫೀಸ್ ಧೂಳಿಪಟ ಮಾಡಿದ 'ಡಂಕಿ', 'ಜವಾನ್' ಹಾಗೂ 'ಪಠಾಣ್' ಸಿನಿಮಾಗಳ ಮೂಲಕ ಒಂದೇ ವರ್ಷದಲ್ಲಿ ಹ್ಯಾಟ್ರಿಕ್ ಹಿಟ್ ಬಾರಿಸಿದ ರೆಕಾರ್ಡ್ ಇದೀಗ ಶಾರುಖ್ ಪಾಲಾಗಿದೆ.
ಕೇವಲ ಕಲೆಕ್ಷನ್ ಅಷ್ಟೇ ಅಲ್ಲ! ಈ ಮೂರು ಚಿತ್ರಗಳನ್ನು ವೀಕ್ಷಿಸಿದ್ದು, ಬರೋಬ್ಬರಿ ಎಂಟು ಕೋಟಿ ಪ್ರೇಕ್ಷಕರು ಎಂಬುದು ಸದ್ಯ ಅಚ್ಚರಿಯ ಸಂಗತಿಯಾಗಿದೆ. ಒಂದು ವರ್ಷದಲ್ಲಿಯೇ ಇಷ್ಟು ಮಂದಿ ಸಿನಿಮಾ ವೀಕ್ಷಿಸಿರುವುದು ದಾಖಲೆಯೇ ನಿಜ. ಜವಾನ್ 3.93 ಕೋಟಿ ಟಿಕೆಟ್ ಮಾರಾಟವಾಗಿದ್ದು, ಪಠಾಣ್ 3.20 ಕೋಟಿ, ಡಂಕಿ 1 ಕೋಟಿ ಟಿಕೆಟ್ ಸೇಲ್ ಆಗಿದೆ. ಈ ಮೂಲಕ ಈ ಸಾಧನೆ ಮಾಡಿದ ಮೊದಲ ಬಾಲಿವುಡ್ ತಾರೆ ಎಂಬ ಹೆಗ್ಗಳಿಕೆಗೆ ಶಾರುಖ್ ಪಾತ್ರರಾಗಿದ್ದಾರೆ.
2023ರಲ್ಲಿ ಜವಾನ್ ಹಾಗೂ ಪಠಾಣ್ ಗಳಿಕೆಯಲ್ಲಿ ದಾಖಲೆ ಬರೆದಿದ್ದು, ಇದೀಗ ಡಂಕಿ ಕೂಡ ಆ ಸಾಲಿಗೆ ಸೇರ್ಪಡೆಯಾಗಿದೆ. 2023ರ ಆರಂಭದಲ್ಲಿ ಪಠಾಣ್ ಬಾಕ್ಸ್ ಆಫೀಸ್ ಬ್ಯಾಂಗ್ ಮಾಡಿತು. ಈ ಚಿತ್ರ ಕೇವಲ ಹಿಂದಿಯಲ್ಲಿಯೇ 524 ಕೋಟಿ ರೂ. ಬಾಚಿತ್ತು. ದೇಶಾದ್ಯಂತ 545 ಕೋಟಿ ರೂ. ಲೂಟಿ ಮಾಡಿದ್ದ ಪಠಾಣ್ ಒಟ್ಟಾರೆ ವಿಶ್ವಾದ್ಯಂತ 1055 ಕೋಟಿ ರೂ. ಗಳಿಕೆ ಕಂಡಿತ್ತು.
ತದನಂತರ ಜೂನ್ನಲ್ಲಿ ತೆರೆಕಂಡ ಜವಾನ್ ಹಿಂದಿ ಚಿತ್ರರಂಗದಲ್ಲಿ 643 ಕೋಟಿ ರೂ. ಕಲೆಕ್ಷನ್ ಮಾಡಿದರೆ, ವಿಶ್ವಾದ್ಯಂತ 580 ಕೋಟಿ ರೂ. ಕಬಳಿಸಿತ್ತು. ಡಿಸೆಂಬರ್ನಲ್ಲಿ ಬಿಡುಗಡೆಯಾದ ಡಂಕಿ ಕೇವಲ 13 ದಿನದಲ್ಲಿ 410 ಕೋಟಿ ರೂ. ಗಳಿಸಿತ್ತು. ರಾಜ್ ಕುಮಾರ್ ಹಿರಾನಿ ನಿರ್ದೇಶಿಸಿದ ಈ ಚಿತ್ರದಲ್ಲಿ ಶಾರುಖ್ ಖಾನ್, ತಾಪ್ಸಿ ಪನ್ನು, ವಿಕ್ಕಿ ಕೌಶಲ್, ಬೊಮನ್ ಇರಾನಿ, ವಿಕ್ರಂ ಕೊಚ್ಚರ್, ಅನಿಲ್ ಗ್ರೋವರ್ ಮುಂತಾದವರ ತಾರಾಗಣವಿದೆ,(ಏಜೆನ್ಸೀಸ್).