ಕುರ್ಬಾನ್​ ನೀಡಲು 4 ಕೋಟಿ ರೂ. ಕೊಟ್ಟು ಗೂಳಿ ಖರೀದಿಸಿದ ಶಾಹಿದ್ ಅಫ್ರೀದಿ!

shahid afreedi'
Published on

ಪಾಕಿಸ್ತಾನ: ವಿಶ್ವದೆಲ್ಲೆಡೆ ಬಕ್ರೀದ್ ಹಬ್ಬವನ್ನು ಆಚರಿಸಲಾಗುತ್ತಿದೆ. ಭಾರತ ತಂಡದ ಕ್ರಿಕೆಟಿಗ ಮೊಹಮ್ಮದ್ ಶಮಿ ಅಲ್ಲದೆ ಅಫ್ಘಾನಿಸ್ತಾನದ ಆಟಗಾರ ರಶೀದ್ ಖಾನ್ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿ ಅಭಿಮಾನಿಗಳಿಗೆ ಬಕ್ರೀದ್ ಶುಭಾಶಯ ಕೋರಿದ್ದಾರೆ. ಆದರೆ, ಇದೀಗ ಪಾಕಿಸ್ತಾನದ ಮಾಜಿ ಆಲ್‌ರೌಂಡರ್ ಶಾಹಿದ್ ಅಫ್ರಿದಿ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗೆ ಗ್ರಾಸವಾಗಿದ್ದಾರೆ. ವಾಸ್ತವವಾಗಿ, ಶಾಹಿದ್ ಅಫ್ರಿದಿ ಕುರ್ಬಾನ್​ ನೀಡಲು ಕೋಟಿ ರೂ. ಮೌಲ್ಯದ ಗೂಳಿಯನ್ನು ನೀಡಿದ್ದಾರೆ.

ಬಲಿಗಾಗಿ ಶಾಹಿದ್ ಅಫ್ರಿದಿ ಖರೀದಿಸಿದ್ದು 4 ಕೋಟಿ ಮೌಲ್ಯದ ಗೂಳಿಯನ್ನು!

ಶಾಹಿದ್ ಅಫ್ರಿದಿ ಬಲಿ ಕೊಟ್ಟಿರುವ ಗೂಳಿ ಪಾಕಿಸ್ತಾನದ ಕರೆನ್ಸಿಯಲ್ಲಿ ಸುಮಾರು 4 ಕೋಟಿ ರೂ. ಪಾಕಿಸ್ತಾನದ ಆಲ್ ರೌಂಡರ್ ಶಾಹಿದ್ ಅಫ್ರಿದಿ ಬಡವರಿಗೆ ಕೈಮುಗಿದು ಗೂಳಿಯನ್ನು ನೀಡಿದ್ದಾರೆ. ಪಾಕಿಸ್ತಾನದ ಕರೆನ್ಸಿಯಲ್ಲಿ ಈ ಗೂಳಿಯ ಬೆಲೆ 4 ಕೋಟಿ ರೂಪಾಯಿ ಎಂದು ಅಂದಾಜಿಸಲಾಗಿದೆ. ಶಾಹಿದ್ ಅಫ್ರಿದಿ, ಈ ಗೂಳಿಯೊಂದಿಗೆ ಅವರ ತೋಟದಲ್ಲಿ ಕಾಣಿಸಿಕೊಂಡಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್!

ಪಾಕಿಸ್ತಾನದ ಆಲ್‌ರೌಂಡರ್ ಶಾಹಿದ್ ಅಫ್ರಿದಿ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಶೇರ್ ಮಾಡುವ ಮೂಲಕ ಅಭಿಮಾನಿಗಳಿಗೆ ಬಕ್ರೀದ್ ಶುಭಾಶಯ ಕೋರಿದ್ದಾರೆ. ಶಾಹಿದ್ ಅಫ್ರಿದಿ ಅವರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಸಾಮಾಜಿಕ ಮಾಧ್ಯಮ ಬಳಕೆದಾರರು ನಿರಂತರವಾಗಿ ಕಾಮೆಂಟ್ ಮಾಡುವ ಮೂಲಕ ತಮ್ಮ ಪ್ರತಿಕ್ರಿಯೆಯನ್ನು ನೀಡುತ್ತಿದ್ದಾರೆ.

ಅನೇಕರು ಪಾಕಿಸ್ತಾನ ಭಿಕ್ಷೆ ಬೇಡುವ ಪರಿಸ್ಥಿತಿಯಲ್ಲಿ ಇರುವಾಗ ಪ್ರಾಣಿ ಬಲಿ ನೀಡಬಾರದು ಎಂದೆಲ್ಲಾ ಕಾಮೆಂಟ್ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net