

Mannat: ಮುಂಬೈನ ಬಾಂದ್ರದಲ್ಲಿರುವ ಬಾಲಿವುಡ್ ಬಾದ್ಷಾ ಶಾರುಖ್ ಖಾನ್ ಕುಟುಂಬಕ್ಕೂ ಮತ್ತು ಅವರ ಅಭಿಮಾನಿಗಳ ನಡುವೆ ಸೇತುವೆಯಂತಿರುವ 'ಮನ್ನತ್' ಹೆಸರಿನ ಬೃಹತ್ ಬಂಗ್ಲೆಯನ್ನು ಬಿಟ್ಟು ನಟ ಶಾರುಖ್ ಕುಟುಂಬ ಇದೀಗ ಹೊರ ನಡೆಯುತ್ತಿದ್ದಾರೆ.
ಹೌದು, 'ಮನ್ನತ್'ನ ಅವಿನಾಭಾವ ಸಂಬಂಧ ಕಳೆದುಕೊಳ್ಳುತ್ತಿರುವುದು ಶಾರುಖ್ ಕುಟುಂಬ ಬೇಸರದಲ್ಲಿ ಹೊರನಡೆಯುತ್ತಿದ್ದಾರೆ. ಆದರೆ, ಖಾಯಂ ಅಲ್ಲ, ತಾತ್ಕಾಲಿಕವಷ್ಟೇ. ಹೌದು, ಮನೆ ರಿಪೇರಿ(ನವೀಕರಣ) ಕೆಲಸಗಳ ಇರುವ ಕಾರಣ ಕೆಲ ಕಾಲ(2 ವರ್ಷ) ಬೇರೆಡೆಗೆ ಸ್ಥಳಾಂತರಗೊಳ್ಳುತ್ತಿದ್ದಾರೆ ಎಂದು ಹಿಂದೂಸ್ಥಾನ ಟೈಮ್ಸ್ ವರದಿ ಮಾಡಿದೆ.
ವರದಿ ಪ್ರಕಾರ, ಮನ್ನತ್ ಗ್ರೇಡ್ III ಪರಂಪರೆಯ ಕಟ್ಟಡವಾಗಿರುವುದರಿಂದ, ಯಾವುದೇ ಬದಲಾವಣೆಗಳಿಗೆ ಸರಿಯಾದ ಅನುಮತಿಗಳು ಬೇಕಾಗುತ್ತವೆ. ಹೀಗಾಗಿ, ನವೀಕರಣಕ್ಕೆ ಕೋರ್ಟ್ ಅನುಮತಿ ನೀಡಿದ ಹಿನ್ನೆಲೆ, ಕೆಲವು ತಿಂಗಳುಗಳಲ್ಲಿ ನವೀಕರಣ ಕಾರ್ಯಗಳು ಪ್ರಾರಂಭವಾಗುತ್ತಿದ್ದಂತೆ. ಶಾರುಖ್ ಮತ್ತು ಅವರ ಕುಟುಂಬವು ತಾತ್ಕಾಲಿಕವಾಗಿ ಹೊಸ ಸ್ಥಳಕ್ಕೆ ಸ್ಥಳಾಂತರಗೊಳ್ಳುತ್ತಿದ್ದಾರೆ.
ಸದ್ಯಕ್ಕೆ ಶಾರಖ್ ಅವರು, ಮುಂಬೈನ ಪಾಲಿಹಿಲ್ ಪ್ರದೇಶದಲ್ಲಿರುವ ಅಪಾರ್ಟಮೆಂಟ್ವೊಂದರಲ್ಲಿ ವರ್ಷಕ್ಕೆ 2.9 ಕೋಟಿ ರೂ. ಕೊಟ್ಟು ವಾಸವಾಗಲಿದ್ದಾರೆ ಎಂದು ವರದಿ ಉಲ್ಲೇಖಿಸಿದೆ.(ಏಜೆನ್ಸೀಸ್)