

ಮುಂಬೈ: ಬಾಲಿವುಡ್ ಬಾದ್ ಶಾ ಎಂದೇ ಕರೆಸಿಕೊಳ್ಳುವ ಶಾರುಖ್ ಖಾನ್ ಲಕ್ಷಾಂತರ ಅಭಿಮಾನಿಗಳನ್ನು ಹೊಂದಿದ್ದಾರೆ. ತಮ್ಮ ನೆಚ್ಚಿನ ನಟನನ್ನು ನೋಡಲು ಅಭಿಮಾನಿಗಳು ಅವರ ಮನೆಯ ಬಳಿ ಪ್ರತಿನಿತ್ಯ ಬರುತ್ತಿರುತ್ತಾರೆ.
ಶಾರುಖ್ನನ್ನು ನೋಡಿ ಕಣ್ತುಂಬಿಕೊಳ್ಳುತ್ತಿದ್ದ ಅಭಿಮಾನಿಗಳು ಅವರ ಮನೆಯ ಮೇಲೂ ಒಂದು ಕಣ್ಣಾಯಿಸುವುದು ಸಾಮಾನ್ಯ. ದೊಡ್ಡ ಸ್ಟಾರ್ ನಟನ ಮನೆ ಎಂದರೆ ಸಾಮಾನ್ಯವೇ... ಶಾರುಖ್ನಷ್ಟೇ ಅವರ ಮನೆಯೂ ಅಷ್ಟೇ ಜನಪ್ರಿಯತೆಯನ್ನು ಪಡೆದಿದೆ.
ಹೀಗೆ ಶಾರೂಕ್ ಮನೆ ಮುಂದೆ ಹೋದ ಕೆಲ ಅಭಿಮಾನಿಗಳಿಗೆ ಶಾಕ್ ಕಾದಿತ್ತು. ಅದೇನೆಂದರೆ ಮನೆಯ ನೇಮ್ಪ್ಲೇಟ್ ಇಲ್ಲದಿರುವುದು ಅಭಿಮಾನಿಗಳ ಗೊಂದಲಕ್ಕೆ ಕಾರಣವಾಗಿದೆ. ಇದನ್ನು ಕದ್ದಿದ್ದಾರೋ.. ಅಥವಾ ಬೇಕೆಂತಲೇ ತೆಗೆದಿದ್ದಾರೆಯೇ ಎಂಬ ವಾದ-ವಿವಾದಗಳು ಸಾಮಾಜಿಕ ಜಾಲತಾಣದಲ್ಲಿ ಚರ್ಚೆಯಾಗುತ್ತಿದೆ.
ಶಾರುಖ್ ಮನೆಯ ಹೆಸರು ಮನ್ನತ್, ಇದರ ನೇಮ್ಪ್ಲೇಟ್ ಬೆಲೆ ಕೇಳಿದರೆ ಮಧ್ಯಮ ವರ್ಗದವರು ಒಂದು ಮನೆಯನ್ನೇ ಕಟ್ಟಿಕೊಳ್ಳಬಹುದು. ಇದರ ಬೆಲೆ ಬರೋಬ್ಬರಿ 25 ಲಕ್ಷವಂತೆ. ಇಷ್ಟು ಭಾರೀ ಮೊತ್ತದ ನೇಮ್ಪ್ಲೇಟ್ ಅನ್ನು ಇತ್ತೀಚೆಗೆ ತೆಗೆಯಲಾಗಿದೆ. ಯಾವ ಕಾರಣಕ್ಕೆ ತೆಗೆಯಲಾಗಿದೆ ಎಂಬುದರ ಬಗ್ಗೆ ಶಾರುಖ್ ತಮ್ಮ ಅಭಿಮಾನಿಗಳಿಗೆ ಮಾಹಿತಿ ನೀಡುತ್ತಾರಾ ಎಂಬುದನ್ನು ಕಾದುನೋಡಬೇಕಿದೆ. (ಏಜೆನ್ಸೀಸ್)