ಪಂಚೆ, ಧೋತಿ ಧರಿಸಿ ತಿರುಪತಿ ತಿಮ್ಮಪ್ಪನ ದರ್ಶನ ಪಡೆದ ಶಾರುಖ್‌ ಖಾನ್; ಮಗಳು ಸುಹಾನಾ, ನಟಿ ನಯನತಾರಾ ಸಾಥ್

shahrukh
Published on

ಮುಂಬೈ: ಬಾಲಿವುಡ್​​ ನಟ ಶಾರುಖ್‌ ಇಂದು ಮುಂಜಾನೆ ತಿರುಪತಿ ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ.ಮಗಳು ಸುಹಾನಾ ಖಾನ್ ಮತ್ತು ಜವಾನ್ ಸಿನಿಮಾ ಸಹನಟಿ ನಯನತಾರಾ ಕೂಡ ಶಾರುಖ್‌ ಜತೆ ಇದ್ದಾರೆ. ಈ ವಿಡಿಯೋಗಳು ಸೋಶಿಯಲ್​​ ಮೀಡಿಯಾದಲ್ಲಿ ವೈರಲ್​ ಆಗಿದೆ.

ಜವಾನ್ ಸಿನಿಮಾ ರಿಲೀಸ್​​ಗೆ ಕೌಂಟ್​ಡೌನ್​ ಶುರುವಾಗಿದೆ. ಇತ್ತ ಶಾರುಖ್ ಟೆಂಪಲ್ ರನ್ ಸಹ ಶುರು ಮಾಡಿದ್ದಾರೆ. ತಿರುಪತಿ ತಿರುಮಲಕ್ಕೆ ಮೊದಲ ಬಾರಿಗೆ ಆಗಮಿಸಿದ ಕಿಂಗ್ ಖಾನ್, ವೆಂಕಟೇಶ್ವರನ ದರ್ಶನ ಪಡೆದಿದ್ದಾರೆ.

ಶಾರುಖ್ ಖಾನ್ ಅವರೊಂದಿಗೆ ನಾಯಕಿ ನಯನತಾರಾ ಮತ್ತು ನಿರ್ದೇಶಕ ವಿಘ್ನೇಶ್ ಶಿವನ್ ಬೆಳಗ್ಗೆ ಸುಪ್ರಭಾತ ಸೇವೆಯಲ್ಲಿ ವೆಂಕಟೇಶ್ವರ ಸ್ವಾಮಿಯ ದರ್ಶನ ಪಡೆದರು. ಬಾಲಿವುಡ್ ಮತ್ತು ಸೌತ್ ಸಿನಿ ಸೆಲೆಬ್ರಿಟಿಗಳಿಗೆ ವೇದ ವಿದ್ವಾಂಸರು ವೇದ ಆಶೀರ್ವಾದ ಮಾಡಿದ್ದಾರೆ.

ಬಾಲಿವುಡ್ ಸ್ಟಾರ್ ಹೀರೋ ಶಾರುಖ್ ಖಾನ್ ಶೀಘ್ರದಲ್ಲೇ ಜವಾನ್ ಚಿತ್ರದ ಮೂಲಕ ಪ್ರೇಕ್ಷಕರ ಮುಂದೆ ಬರಲಿದ್ದಾರೆ. ಈ ಚಿತ್ರ ಸೆಪ್ಟೆಂಬರ್ 1 ರಂದು ಭಾರತದಾದ್ಯಂತ  ಬಿಡುಗಡೆಯಾಗಲಿದ್ದು, ಇದರಲ್ಲಿ ನಯನತಾರಾ ನಾಯಕಿಯಾಗಿ, ವಿಜಯ್ ಸೇತುಪತಿ ವಿಲನ್ ಆಗಿ ನಟಿಸಿದ್ದಾರೆ. ಪ್ರಿಯಾಮಣಿ, ದೀಪಿಕಾ ಪಡುಕೋಣೆ..ಇನ್ನು ಕೆಲವು ತಾರೆಯರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net