ಊಟ ಇಲ್ಲದಿದ್ದರೂ ಓಕೆ..ಶಾರುಖ್ ಖಾನ್​ಗೆ ಅದೊಂದು ಇದ್ರೆ ಸಾಕು! ಬಾಲಿವುಡ್ ಬಾದ್​​ಷಾ ಸೀಕ್ರೆಟ್​​ ರಿವೀಲ್​

ShahRukh Khan
Published on

ಮುಂಬೈ: ಅಭಿಮಾನಿಗಳು ಸೆಲೆಬ್ರಿಟಿಗಳ ಬಗ್ಗೆ ತಿಳಿದುಕೊಳ್ಳಲು ಬಯಸುತ್ತಾರೆ. ಸಂದರ್ಶನಗಳಲ್ಲಿ, ನಮ್ಮ ನಾಯಕರು ಮತ್ತು ನಾಯಕಿಯರು ತಮ್ಮ ಬಗ್ಗೆ ಹೇಳಿಕೊಳ್ಳುತ್ತಾರೆ ಅಥವಾ ಅವರ ಹತ್ತಿರ ಇರುವವರು ತಮ್ಮ ಬಗ್ಗೆ ಹೇಳುತ್ತಾರೆ.

ಇತ್ತೀಚೆಗೆ ಬಾಲಿವುಡ್ ನಿರ್ದೇಶಕ ಆನಂದ್ ರೈ ಶಾರುಖ್ ಖಾನ್ ಬಗ್ಗೆ ಸಂದರ್ಶನವೊಂದರಲ್ಲಿ ಮಾತನಾಡಿದ್ದು, ಶಾರುಖ್ ಅವರ ನೆಚ್ಚಿನ ಆಹಾರ ಯಾವುದು ಎಂದು ಹೇಳಿದ್ದಾರೆ.

ಇತ್ತೀಚಿನ ಸಂದರ್ಶನವೊಂದರಲ್ಲಿ ಆನಂದ್ ರಾಯ್ ಅವರು ಮಾತನಾಡಿ, ಶಾರುಖ್ ಜೊತೆ ಜೀರೋ ಎಂಬ ಸಿನಿಮಾ ಮಾಡಿದ್ದರು. ಈ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಡಿಸಾಸ್ಟರ್ ಆಗಿತ್ತು. ಆದರೆ ಶಾರುಖ್ ಜೊತೆ ಒಳ್ಳೆಯ ಆಪ್ತತೆ ಇತ್ತು.  ಶಾರುಖ್​​ ಅವರಿಗೆ ಕೆಲವು ಆಹಾರಗಳು ಎಂದರೆ ತುಂಬಾ ಇಷ್ಟ ಎಂದು ಹೇಳಿದ್ದಾರೆ

ಶಾರುಖ್ ಖಾನ್ ಅವರಿಗೆ ತಂದೂರಿ ಚಿಕನ್ ತುಂಬಾ ಇಷ್ಟಪಡುತ್ತಾರೆ. ಕಾಫಿ ಮತ್ತು ಕೂಲ್ ಡ್ರಿಂಕ್ಸ್ ಕೂಡ ಇಷ್ಟ. ಚಿಕನ್, ಕಾಫಿ, ಕೂಲ್ ಡ್ರಿಂಕ್ಸ್ ಇದ್ದರೆ ಊಟ ಇಲ್ಲದಿದ್ದರೂ ಪರವಾಗಿಲ್ಲ ಎನ್ನುತ್ತಾರೆ ಶಾರುಖ್. ಆದರೆ ನಾವು ಪ್ರೀತಿಯಿಂದ ವಿಶೇಷವಾದದ್ದನ್ನು ಕೊಟ್ಟರೆ ಅವರು ಅದನ್ನು ತಿನ್ನುತ್ತಾನೆ ಎಂದು ಶಾರುಖ್​​ ಅವರ ಆಹಾರದ ಕುರಿತಾಗಿ ಹೇಳಿದ್ದಾರೆ.

ನಟ ಶಾರುಖ್ ಖಾನ್ ಬಾಲಿವುಡ್ನಲ್ಲಿ ಮಾತ್ರವಲ್ಲದೆ ಭಾರತೀಯ ಚಿತ್ರರಂಗದಲ್ಲೂ ದೊಡ್ಡ ಅಭಿಮಾನಿಗಳನ್ನು ಹೊಂದಿದ್ದಾರೆ. ಬಾಲಿವುಡ್ ನಲ್ಲಿ ಹಲವು ಬ್ಲಾಕ್ ಬಸ್ಟರ್ ಸಿನಿಮಾಗಳನ್ನು ನೀಡಿದ ಯಶಸ್ವಿ ನಟನಾಗಿದ್ದಾರೆ. 4 ವರ್ಷ ಬ್ರೇಕ್ ತೆಗೆದುಕೊಂಡು ಎಂಟ್ರಿ ಕೊಟ್ಟ ಬಾದ್ ಷಾ, ಪಠಾಣ್ ಸಿನಿಮಾ ಮೂಲಕ ಅಬ್ಬರಿಸಿದ್ರು. ಸೌತ್ ಡೈರೆಕ್ಟರ್ ಅಟ್ಲಿ ಜೊತೆ ಜವಾನ್ ಸಿನಿಮಾ ಮಾಡಿ ನಾನೇ ಬಾಕ್ಸ್ ಆಫೀಸ್ ಕಿಂಗ್ ಎಂದು ಎದ್ದು ನಿಂತಿದ್ದಾರೆ.

ಪಠಾಣ್ ಹಾಗೂ ಜವಾನ್ ಸಿನಿಮಾ ಸಾವಿರಾರು ಕೋಟಿ ಹಣ ಗಳಿಸಿತು. ಬಳಿಕ ಶಾರುಖ್ ನಟಿಸಿದ ಡಂಕಿ ಚಿತ್ರ ಕೂಡ ಹಿಟ್ ಆಯ್ತು. ಒಂದೇ ವರ್ಷದಲ್ಲಿ ಮೂರು ಸೂಪರ್ ಹಿಟ್ ಸಿನಿಮಾಗಳನ್ನು ಶಾರುಖ್ ನೀಡಿದ್ರು. ನಟ ಶಾರುಖ್ ಅತಿ ಹೆಚ್ಚು ಸಂಭಾವನೆ ಪಡೆಯುವ ನಟನಾಗಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net