'ಮನೆಗೆ ಕರೆದುಕೊಂಡು ಹೋಗಿ ಮಾಡಬಾರದ್ದು ಮಾಡಿದ...': ಠಾಣೆ ಮೆಟ್ಟಿಲೇರಿದ ಯುವತಿ

harasment
Published on

ಬೆಂಗಳೂರು: ವಿವಾಹವಾಗುವುದಾಗಿ ನಂಬಿಸಿ ಲೈಂಗಿಕ ದೌರ್ಜನ್ಯ ಎಸಗಿ ವಂಚಿಸಿದ ಖಾಸಗಿ ಕಂಪನಿ ನೌಕರನ ವಿರುದ್ಧ ಮಾರ್ಕೆಟಿಂಗ್​​ ಎಕ್ಸಿಕ್ಯೂಟಿವ್ ಉದ್ಯೋಗಿಯೋರ್ವಳು ಪೊಲೀಸರಿಗೆ ದೂರು ನೀಡಿದ್ದಾಳೆ.

ಖಾಸಗಿ ಕಂಪನಿಯಲ್ಲಿ ಮಾರ್ಕೆಟಿಂಗ್​​ ಎಕ್ಸಿಕ್ಯೂಟಿವ್ ಆಗಿರುವ ನಾಗರಬಾವಿ ನಿವಾಸಿ 26 ವರ್ಷದ ಯುವತಿ ನೀಡಿದ ದೂರಿನ ಆಧಾರದ ಮೇಲೆ ಖಾಸಗಿ ಕಂಪನಿ ಉದ್ಯೋಗಿ ಪ್ರದೀಪ್ ಶೆಟ್ಟಿ ಎಂಬಾತನ ವಿರುದ್ಧ ಅನ್ನಪೂರ್ಣೇಶ್ವರಿ ನಗರ ಪೊಲೀಸರು ಎಫ್​​​​ಐಆರ್ ದಾಖಲಿಸಿಕೊಂಡಿದ್ದಾರೆ.

ಕಳೆದ 5 ವರ್ಷಗಳ ಹಿಂದೆ ಯುವತಿ ಕೆಲಸ ಮಾಡುತ್ತಿದ್ದಾಗ ಪ್ರದೀಪ್ ಪರಿಚಯವಾಗಿತ್ತು. ಈಕೆಯ ಮೊಬೈಲ್ ನಂಬರ್ ಪಡೆದುಕೊಂಡಿದ್ದ ಪ್ರದೀಪ್ ಪ್ರತಿ ದಿನ ಆಕೆಗೆ ಸಂದೇಶ ಕಳಿಸುತ್ತಿದ್ದ. ನಂತರ ಪ್ರೇಮ ನಿವೇದನೆ ಮಾಡಿ ವಿವಾಹವಾಗುವುದಾಗಿ ನಂಬಿಸಿದ್ದ. ಈತನ ಮಾತಿಗೆ ಮರುಳಾದ ಯುವತಿ ವಿವಾಹವಾಗಲು ಒಪ್ಪಿಗೆ ಸೂಚಿಸಿದ್ದಳು. ನನ್ನ ಅಣ್ಣನಿಗೆ ವಿವಾಹವಾದ ಬಳಿಕ ನಾವು ವಿವಾಹವಾಗೋಣ ಎಂದು ಹೇಳಿದ್ದ. ಇತ್ತಿಚೆಗೆ ಪ್ರದೀಪ್ ಆತನ ಮನೆಗೆ ಕರೆದುಕೊಂಡು ಹೋಗಿ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಇದಾದ ಬಳಿಕ ವಿವಾಹವಾಗುವಂತೆ ಒತ್ತಾಯಿಸಿದಾಗ ನನ್ನನ್ನು ನಿರ್ಲಕ್ಷಿಸಲು ಆರಂಭಿಸಿದ್ದ. ಕೆಲ ದಿನಗಳ ಹಿಂದೆ ಅವಾಚ್ಯ ಶಬ್ದಗಳಿಂದ ನಿಂದಿಸಿ, ಹಲ್ಲೆ ನಡೆಸಿ ಬೆದರಿಸಿದ್ದಾನೆ. ಜತೆಗೆ ವಿವಾಹವಾಗಲು ನಿರಾಕರಿಸಿ ವಂಚಿಸಿದ್ದಾನೆ ಎಂದು ಸಂತ್ರಸ್ತೆ ದೂರಿನಲ್ಲಿ ಉಲ್ಲೇಖಿಸಿದ್ದಾಳೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net