ಲೈಂಗಿಕ ಕಿರುಕುಳ ಆರೋಪ; ಪೊಲೀಸರಿಂದ ತಪ್ಪಿಸಿಕೊಳ್ಳಲು 40 ದಿನಗಳಲ್ಲಿ 13 ಹೋಟೆಲ್‌ ಬದಲಾಯಿಸಿದ್ದ ಚೈತನ್ಯಾನಂದ ಸರಸ್ವತಿ| delhi

chaitanyananda saraswati
Published on

ನವದೆಹಲಿ; ದೆಹಲಿಯಲ್ಲಿ 17 ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಎದುರಿಸುತ್ತಿದ್ದ ಸ್ವಾಮಿ ಚೈತನ್ಯಾನಂದ ಸರಸ್ವತಿ ಅಲಿಯಾಸ್ ಪಾರ್ಥ ಸಾರಥಿಯನ್ನು ಉತ್ತರ ಪ್ರದೇಶದ ಆಗ್ರಾದಲ್ಲಿ ಪೊಲೀಸರು ಬಂಧಿಸಿದ್ದಾರೆ.

62 ವರ್ಷದ ಚೈತನ್ಯಾನಂದ ಪರಾರಿಯಾಗಿದ್ದರೂ ಸಹ ತನ್ನ ಸಂಸ್ಥೆಯ ಚಟುವಟಿಕೆಗಳ ಮೇಲೆ ನಿಗಾ ಇಟ್ಟಿದ್ದ. ಎಂದು ದೆಹಲಿ ಪೊಲೀಸರು ಮಾಹಿತಿ ಹಂಚಿಕೊಂಡಿದ್ದಾರೆ. ಚೈತನ್ಯಾನಂದ ಪರಾರಿಯಾದಾಗ ಸಿಸಿಟಿವಿ ಕಣ್ಗಾವಲು ಇಲ್ಲದ ಕಡಿಮೆ ಬೆಲೆಯ ಹೋಟೆಲ್‌ಗಳಲ್ಲಿ ತಂಗಿದ್ದರು ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ. ಹೋಟೆಲ್​ ಬುಕಿಂಗ್‌ಗಳನ್ನು ಹೆಚ್ಚಾಗಿ ಅವರ ಆಪ್ತ ಶಿಷ್ಯರೇ ನಿರ್ವಹಿಸುತ್ತಿದ್ದರು ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ದೆಹಲಿಯ ಐಷಾರಾಮಿ ವಸಂತ್ ಕುಂಜ್ ಪ್ರದೇಶದಲ್ಲಿರುವ ಖಾಸಗಿ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯನ್ ಮ್ಯಾನೇಜ್‌ಮೆಂಟ್‌ನ ನಿರ್ದೇಶಕರಾಗಿದ್ದ ಸ್ವಾಮಿ ಚೈತನ್ಯಾನಂದ ಸರಸ್ವತಿ ವಿರುದ್ಧ ವಿದ್ಯಾರ್ಥಿನಿಯರಿಗೆ ಅಶ್ಲೀಲ ಭಾಷೆ ಬಳಕೆ, ಅಶ್ಲೀಲ ಸಂದೇಶಗಳನ್ನು ಕಳುಹಿಸಿದ ಹಾಗೂ ಅತ್ಯಾಚಾರದ ಆರೋಪವಿದ್ದು, ಈ ಹಿನ್ನೆಲೆ ಬಂಧಿಸಲಾಗಿದೆ. ಆರ್ಥಿಕವಾಗಿ ದುರ್ಬಲ ವರ್ಗಗಳ (EWS) ವಿಭಾಗದಲ್ಲಿ ವಿದ್ಯಾರ್ಥಿವೇತನದೊಂದಿಗೆ ಸ್ನಾತಕೋತ್ತರ ನಿರ್ವಹಣಾ ಡಿಪ್ಲೊಮಾ ಕೋರ್ಸ್‌ಗಳನ್ನು ಕಲಿಯುತ್ತಿರುವ ವಿದ್ಯಾರ್ಥಿನಿಯರನ್ನು ಗುರಿಯಾಗಿಸಿ, ವಿದೇಶ ಪ್ರವಾಸದ ಆಸೆ ತೋರಿಸಿ ಕಿರುಕುಳ ನೀಡಿದ್ದಾರೆ. ಅದಕ್ಕೆ ಕಾಲೇಜಿನ ಪ್ರಾಧ್ಯಪಕರು, ಹಾಸ್ಟೆಲ್ ವಾರ್ಡನ್​ಗಳು ಸಾಥ್ ನೀಡಿದ್ದಾರೆ ಎಂದು ವಿದ್ಯಾರ್ಥಿನಿಯರು ಆರೋಪಿಸಿದ್ದಾ.

ಇನ್ನೂ ಈ ಬಾಬಾ ಪೊಲೀಸರ ಬಂಧನದಿಂದ ತಪ್ಪಿಸಿಕೊಳ್ಳಲು ಕಳೆದ 40 ದಿನಗಳಲ್ಲಿ 13 ಹೋಟೇಲ್‌ಗಳನ್ನು ಬದಲಾಯಿಸಿದ್ದಲ್ಲದೆ, ತಲೆಮರೆಸಿಕೊಂಡಿದ್ದ ಅವಧಿಯಲ್ಲಿ ಮಥುರಾ ಮತ್ತು ವೃಂದಾವನದಲ್ಲಿ ಸಾಧುಗಳೊಂದಿಗೆ ಅನೇಕ ಆಶ್ರಮಗಳಲ್ಲಿ ಆಶ್ರಯ ಪಡೆದಿದ್ದ ಎನ್ನಲಾಗಿದೆ. ಸಾಮಾನ್ಯ ಟ್ಯಾಕ್ಸಿಯಲ್ಲಿ ಪ್ರಯಾಣಿಸುತ್ತಿದ್ದ ಈ ಬಾಬಾ ಸಣ್ಣ ಸಣ್ಣ ಹೋಟೇಲ್‌ಗಳಲ್ಲಿ ಉಳಿದುಕೊಳ್ಳುತ್ತಿದ್ದ ಅನ್ನೋದು ಪೊಲೀಸರ ತನಿಖೆ ಬಳಿಕ ಗೊತ್ತಾಗಿದೆ.

(ಏಜೆನ್ಸೀಸ್)

ಇಂದಿನ ವಿಚಾರಣೆಯ ಸಮಯದಲ್ಲಿ, ವಶಪಡಿಸಿಕೊಂಡ ಮೂರು ಫೋನ್‌ಗಳು ಮತ್ತು ಐಪ್ಯಾಡ್‌ನ ಪಾಸ್‌ವರ್ಡ್‌ಗಳನ್ನು ಮರೆತಿರುವುದಾಗಿ ಆತ ಹೇಳಿದ್ದಾರೆ. ಇನ್ನೂ ಪರೀಕ್ಷೆಗಾಗಿ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ (ಎಫ್‌ಎಸ್‌ಎಲ್) ಕಳುಹಿಸಲಾಗಿದೆ ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ. ಬಂಧನದಿಂದ ತಪ್ಪಿಸಿಕೊಳ್ಳಲು ಸಹಾಯ ಮಾಡಿದ ಅವರ ಸಹಾಯಕರ ಮೇಲೆ ನಾವು ಸೂಕ್ತ ಗಮನಹರಿಸುತ್ತಿದ್ದೇವೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.

ನಿನ್ನೆ ಭಾನುವಾರ ಆಗ್ರಾದಲ್ಲಿ ಚೈತನ್ಯಾನಂದರನ್ನು ಬಂಧಿಸಲಾಗಿದ್ದು, ವಿಶ್ವಸಂಸ್ಥೆಯ ಖಾಯಂ ರಾಯಭಾರಿ ಎಂದು ಘೋಷಿಸಿದ ನಕಲಿ ರಾಜತಾಂತ್ರಿಕ ಗುರುತಿನ ಚೀಟಿಗಳನ್ನು ಹೊಂದಿದ್ದರು. ಆಗಸ್ಟ್ ಆರಂಭದಲ್ಲಿ ಎಫ್‌ಐಆರ್ ದಾಖಲಾದ ಬಳಿಕ ಪೊಲೀಸರು ಅವರ ಬ್ಯಾಂಕ್ ಖಾತೆಗಳಲ್ಲಿ 8 ಕೋಟಿ ರೂ.ಗಳನ್ನು ಸ್ಥಗಿತಗೊಳಿಸಿ, 50 ಲಕ್ಷ ರೂ. ಹಿಂಪಡೆಯುವುದನ್ನು ಪತ್ತೆಹಚ್ಚಿದರು ಎಂಬುದಾಗಿ ತಿಳಿದು ಬಂದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net