ಬಾಲಕಿ ಮೇಲೆ ಲೈಂಕಿಗ ದೌರ್ಜನ್ಯ, ಅಪರಾಧಿಗೆ 20 ವರ್ಷ ಜೈಲು

CONVICTION_
Published on

ಬೆಂಗಳೂರು: ನಿರ್ಮಾಣ ಹಂತದ ಕಟ್ಟಡ ಬಳಿ ಆಟವಾಡುತ್ತಿದ್ದ ಬಾಲಕಿಯನ್ನು ಶೆಡ್ ಒಳಗೆ ಕರೆದೊಯ್ದು ಅತ್ಯಾಚಾರ ಎಸಗಿದ ಅಪರಾಧಿಗೆ 20 ವರ್ಷ ಜೈಲು ಶಿಕ್ಷೆ ವಿಧಿಸಿ ಎ್ಟಿಎಸ್‌ಸಿ-3ನೇ ಕೋರ್ಟ್ ತೀರ್ಪು ನೀಡಿದೆ.

ಪರಪ್ಪನ ಅಗ್ರಹಾರ ಪಿಳ್ಳಾರೆಡ್ಡಿ ನಿವಾಸಿ ಉಮಾಕಾಂತ್ ಬೆಹೆರಾ ಅಲಿಯಾಸ್ ಬಿಡಿ ಬಾಯ್ ಜೈಲು ಸೇರಿದ ಅಪರಾಧಿ. ಸೆಕ್ಯುರಿಟಿ ಗಾರ್ಡ್ ಉಮಾಕಾಂತ್, ಪಿಳ್ಳಾರೆಡ್ಡಿಯಲ್ಲಿ ಶೆಡ್‌ನಲ್ಲಿ ನೆಲೆಸಿದ್ದ. 2022ರ ಏಪ್ರಿಲ್ 28ರಂದು ನಿರ್ಮಾಣ ಹಂತದ ಕಟ್ಟಡ ಸಮೀಪದ ಬಾಲಕಿ ಆಟವಾಡುತ್ತಿದ್ದಳು. ಗಮನಿಸಿದ ಉಮಾಕಾಂತ್, ಅಪ್ರಾಪ್ತೆಯನ್ನು ಶೆಡ್ ಒಳಗೆ ಎಳೆದೊಯ್ದು ಆಕೆಯನ್ನು ಬೆತ್ತಲೆ ಮಾಡಿ ದೌರ್ಜನ್ಯ ಎಸಗಿದ್ದ. ನೊಂದ ಬಾಲಕಿ ತನ್ನ ಪಾಲಕರ ಬಳಿ ಅಳಲು ತೋಡಿಕೊಂಡಿದ್ದಳು.

ಈ ಬಗ್ಗೆ ಬಾಲಕಿ ಪಾಲಕರು ಕೊಟ್ಟ ದೂರಿನ ಮೇರೆಗೆ ಪರಪ್ಪನ ಅಗ್ರಹಾರ ಠಾಣೆ ಪೊಲೀಸರು ಎ್ಐಆರ್ ದಾಖಲಿಸಿ ಉಮಾಕಾಂತ್‌ನನ್ನು ಬಂಧಿಸಿದ್ದರು. ತನಿಖೆ ನಡೆಸಿದ ಇನ್‌ಸ್ಪೆಕ್ಟರ್ ಎಸ್. ಸಂದೀಪ್, ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸಿದ್ದರು. ಸಂತ್ರಸ್ತೆ ಪರವಾಗಿ ಪಬ್ಲಿಕ್ ಪ್ರಾಸಿಕ್ಯೂಟರ್ ಗೀತಾ ರಾಮಕೃಷ್ಣ ಗೊರವರ ವಾದ ಮಂಡಿಸಿದ್ದರು.

ನ್ಯಾಯಾಧೀಶರಾದ ಇಷ್ರತ್ ಜಹಾನ್ ಅರ ಅವರು, ವಾದ-ಪ್ರತಿವಾದ ಆಲಿಸಿ ಆರೋಪಗಳು ಸಾಬೀತಾದ ಹಿನ್ನೆಲೆಯಲ್ಲಿ ಉಮಾಕಾಂತ್ ಅಪರಾಧಿ ಎಂದು  20 ವರ್ಷ ಜೈಲು ಶಿಕ್ಷೆ, 20 ಸಾವಿರ ರೂ. ದಂಡ ವಿಧಿಸಿದೆ. ಸರ್ಕಾರದಿಂದ 2 ಲಕ್ಷ ರೂ.ಪರಿಹಾರ ಮತ್ತು ಅಪರಾಧಿ ದಂಡದ ಮೊತ್ತವನ್ನು ಬಾಲಕಿಗೆ ನೀಡುವಂತೆ ತೀರ್ಪಿನಲ್ಲಿ ಉಲ್ಲೇಖಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net