ಲೈಂಗಿಕ ದೌರ್ಜನ್ಯ ಪ್ರಕರಣ :22 ವರ್ಷದ ಯುವಕ ಬಂಧನ! | POCSO

Arrest
Published on

POCSO :  ಬಾಲಕಿಯ ಅಪಹರಣ ಮತ್ತು ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ 22 ವರ್ಷದ ವ್ಯಕ್ತಿಯನ್ನು ಪೋಕ್ಸೋ ಕಾಯ್ದೆ ಅಡಿ ಮುಂಬೈನ ಗಾಮ್ದೇವಿ ಪೊಲೀಸರು ಭಾನುವಾರ ಬಂಧಿಸಿದ್ದಾರೆ.

ಆರೋಪಗಳ ವಿವರ

ಆಕಾಶ್​ ಪ್ರಕಾಶ್​ ಪವಾರ್​ (22) ಆರೋಪಿ ಎಂದು ಗುರುತಿಸಲಾಗಿದೆ. ಇನ್ನು ಈತನನ್ನು ಗಾಮ್ದೇವಿ ಪೊಲೀಸರು ಬಂಧಿಸಿದ್ದು, 2022ರಲ್ಲಿ ಐಪಿಸಿಯ ಸೆಕ್ಸನ್​ 363, 366A, 376(2) (H) (N), 506 ಮತ್ತು POSCO ಕಾಯ್ದೆ, 2012 ರ ಸೆಕ್ಸನ್​ 4,8,12 ರ ಅಡಿಯಲ್ಲಿ ಎಫ್​ಐಆರ್​ ದಾಖಲಿಸಲಾಗಿದೆ. ಆರೋಪಿ ವಿಚಾರಣಾ ಸಮಯದಲ್ಲಿ ಹಾಜರಾಗಲು ವಿಫಲವಾದ ಕಾರಣ ಆತನ ವಿರುದ್ಧ ಮುಂಬೈ ಸೆಷನ್ಸ್​ ನ್ಯಾಯಾಲಯವು ಜಾಮೀನು ರಹಿತ ವಾರೆಂಟ್​ನ್ನು ಹೊರಡಿಸಿತ್ತು.

ಆರೋಪಿ ಆಕಾಶ್​ನನ್ನು ಭಾನುವಾರ (ಆಗಸ್ಟ್ 24) ಗ್ರಾಂಟ್​ ರೈಲ್ವೆ ನಿಲ್ದಾಣ ಬಳಿ ಅಧಿಕಾರಿಗಳ ತಂಡ ಆತನನ್ನು ಪತ್ತೆಹಚ್ಚಿ ಬಂಧಿಸಿದ್ದಾರೆ. ಇನ್ನು ಆರೋಪಿ ಕೆಲವು ವರ್ಷಗಳಿಂದ ತಲೆಮರೆಸಿಕೊಂಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಮಂಗಳವಾರ ಆತನನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದು, ನ್ಯಾಯಾಲಯ ಆತನ್ನು ಬಂಧಿಸುವಂತೆ ಆದೇಶ ಹೊರಡಿಸಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net