ಲಿಂಗಾನುಪಾತ ಗ್ರಾಮೀಣದಲ್ಲಿ ಇಳಿಕೆ

Linganupatha new
Published on

ನವದೆಹಲಿ: ಗ್ರಾಮೀಣ ಭಾರತದಲ್ಲಿ ಹೆಣ್ಣು ಭ್ರೂಣ ಹತ್ಯೆ ಹೆಚ್ಚಾಗಿದ್ದು, ಲಿಂಗಾನುಪಾತದ ಪ್ರಮಾಣದಲ್ಲಿ (ಎಸ್​ಆರ್​ಬಿ) ತೀವ್ರ ಏರುಪೇರು ಉಂಟಾಗಿದೆ. ಭಾರತದ ಲಿಂಗಾನುಪಾತದ ಸರಾಸರಿ 1000 ಗಂಡು ಮಕ್ಕಳಿಗೆ 924 ಹೆಣ್ಣು ಮಕ್ಕಳು ಇದ್ದರೆ, ಗ್ರಾಮೀಣ ಭಾಗದಲ್ಲಿ ಈ ಪ್ರಮಾಣ 918 ಇದೆ.

2020ರ ವರದಿಯ ಪ್ರಕಾರ ತಮಿಳುನಾಡಿನ ನಗರ ಭಾಗದಲ್ಲಿ ಸಾವಿರ ಗಂಡು ಮಕ್ಕಳಿಗೆ 939 ಹೆಣ್ಣು ಮಕ್ಕಳ ಜನನವಾಗುತ್ತಿದ್ದರೆ ಗ್ರಾಮೀಣ ಪ್ರದೇಶದಲ್ಲಿ 901 ಹೆಣ್ಣು ಮಕ್ಕಳ ಜನನವಾಗುತ್ತಿದೆ. ಉಳಿದಂತೆ ರಾಜಸ್ಥಾನ ಮತ್ತು ಆಂಧ್ರ ಪ್ರದೇಶದಲ್ಲಿಯೂ ಅನುಪಾತದ ಅಂತರ 30ಕ್ಕೂ ಹೆಚ್ಚಿದೆ. ಮಹಾರಾಷ್ಟ್ರ, ಅಸ್ಸಾಂ, ಮಧ್ಯಪ್ರದೇಶ ಮತ್ತು ಕೆಲ ರಾಜ್ಯಗಳಲ್ಲೂ ಹೆಣ್ಣು ಮಕ್ಕಳ ಜನನ ಸಂಖ್ಯೆ ಕಡಿಮೆಯಾಗಿದೆ. ಅದರ ಅರ್ಥ ಹೆಣ್ಣು ಭ್ರೂಣ ಹತ್ಯೆ ಸಂಖ್ಯೆ ಹೆಚ್ಚಾಗಿದೆ. ಇದಕ್ಕೆ ಕಾನೂನುಬಾಹಿರವಾಗಿ ನಡೆಯುತ್ತಿರುವ ಭ್ರೂಣ ಲಿಂಗಪತ್ತೆಯೂ ಕಾರಣವಾಗಿದೆ.

ಕೆಲವು ರಾಜ್ಯದಲ್ಲಿ ನಗರ ಪ್ರದೇಶಗಳಿಗಿಂತ ಗ್ರಾಮೀಣ ಭಾಗದಲ್ಲಿ ಹೆಣ್ಣು ಮಕ್ಕಳ ಸಂಖ್ಯೆ ಹೆಚ್ಚಿದೆ. ಒಡಿಶಾದಲ್ಲಿ ನಗರ ಮತ್ತು ಗ್ರಾಮೀಣದಲ್ಲಿ ಸಮಾನ ಅನುಪಾತ ಇದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net