Maoist : ಛತ್ತೀಸ್‌ಗಢದಲ್ಲಿ ಭಾರೀ ಎನ್‌ಕೌಂಟರ್; 12 ಮಾವೋವಾದಿಗಳ ಹತ್ಯೆ

bhujmad encounter lasting hours
Published on

ಛತ್ತೀಸ್‌ಗಢ: (Maoist) ಅಬುಜ್ಮದ್ ಅರಣ್ಯ ಪ್ರದೇಶದಲ್ಲಿ ಗುರುವಾರ ಮುಂಜಾನೆ ಪೊಲೀಸರು ಮತ್ತು ಮಾವೋವಾದಿಗಳ ನಡುವೆ ಭಾರೀ ಎನ್‌ಕೌಂಟರ್ ನಡೆದಿದೆ. ಪೊಲೀಸ್ ಗುಂಡಿನ ದಾಳಿಯಲ್ಲಿ 12 ಮಾವೋವಾದಿಗಳು ಸಾವನ್ನಪ್ಪಿದ್ದಾರೆ.

ದಾಂತೇವಾಡ ಮತ್ತು ನಾರಾಯಣಪುರ ಗಡಿಯಲ್ಲಿರುವ ದಕ್ಷಿಣ ಅಬುಜಮದ್ ​​ಅರಣ್ಯದಲ್ಲಿ ಭದ್ರತಾ ಸಿಬ್ಬಂದಿ ಮಾವೋವಾದಿಗಳಿಗಾಗಿ ಶೋಧ ನಡೆಸಿದ್ದಾರೆ. ಈ ವೇಳೆ ಪೊಲೀಸರನ್ನು ಎದುರಿಸಿದ ಮಾವೋವಾದಿಗಳು ಗುಂಡಿನ ದಾಳಿ ನಡೆಸಿದ್ದಾರೆ. ಮಾವೋವಾದಿಗಳ ಭದ್ರಕೋಟೆಯಾಗಿರುವ ಇಡೀ ಅಬುಜ್ಮದ್ ಪ್ರದೇಶವೇ ಗುಂಡಿನ ಸದ್ದು ಮೊಳಗುತ್ತಿತ್ತು. ರಾತ್ರಿಯಿಂದಲೇ ಅಬುಜ್ಮದ್ ​​ಪ್ರದೇಶವನ್ನು ಭದ್ರತಾ ಪಡೆಗಳು ಸುತ್ತುವರಿದಿವೆ.

ಮಾವೋವಾದಿಗಳ ವಶದಲ್ಲಿರುವ ಈ ಪ್ರದೇಶದಲ್ಲಿ ಆಪರೇಷನ್ ಕದರ್ ಹೆಸರಿನಲ್ಲಿ 2026ರ ವೇಳೆಗೆ ಸಂಪೂರ್ಣ ಮಾವೋವಾದಿ ಮುಕ್ತ ರಾಜ್ಯವನ್ನಾಗಿ ಮಾಡುವುದಾಗಿ ಛತ್ತೀಸ್ ಗಢ ಪೊಲೀಸರು ಘೋಷಿಸಿರುವುದು ಗೊತ್ತೇ ಇದೆ. ಈ ಹಿನ್ನೆಲೆಯಲ್ಲಿ ಅಬುಜ್ಮದ್ ​​ಪ್ರದೇಶ ಮತ್ತು ದಂಡಕಾರಣ್ಯಂನಲ್ಲಿ ಕಳೆದ ಒಂದು ತಿಂಗಳಿನಿಂದ ಮಾವೋವಾದಿಗಳು ಮತ್ತು ಭದ್ರತಾ ಪಡೆಗಳ ನಡುವೆ ತೀವ್ರ ಗುಂಡಿನ ಚಕಮಕಿ ನಡೆಯುತ್ತಿದೆ.

ಗುರುವಾರ ಮುಂಜಾನೆ 3 ಗಂಟೆಯಿಂದ ಗುಂಡಿನ ಚಕಮಕಿ ನಡೆದಿದೆ ಎಂದು ಬಸ್ತಾರ್ ಪೊಲೀಸರು ಬಹಿರಂಗಪಡಿಸಿದ್ದಾರೆ. ಅಬುಜ್ಮದ್ ಅರಣ್ಯ ಪ್ರದೇಶದಲ್ಲಿ ಗುರುವಾರ ಬೆಳಗ್ಗೆ ಭದ್ರತಾ ಪಡೆಗಳು ಮತ್ತು ಮಾವೋವಾದಿಗಳ ನಡುವೆ ಭೀಕರ ಗುಂಡಿನ ಚಕಮಕಿ ನಡೆದಿದೆ. ಈ ಗುಂಡಿನ ಚಕಮಕಿಯಲ್ಲಿ 12 ಮಾವೋವಾದಿಗಳು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ. ಅಬುಜ್ಮದ್ ಅರಣ್ಯ ಪ್ರದೇಶದಲ್ಲಿ ಕೂಂಬಿಂಗ್‌ಗೆ ತೆರಳಿದ್ದ ಭದ್ರತಾ ಪಡೆಗಳ ಮೇಲೆ ಮಾವೋವಾದಿಗಳು ದಾಳಿ ನಡೆಸಿದಾಗ ಎನ್‌ಕೌಂಟರ್ ಆರಂಭವಾಗಿದೆ.. ಮುಂಜಾನೆ 3 ಗಂಟೆಯಿಂದ ಗುಂಡಿನ ಚಕಮಕಿ ನಡೆದಿದೆ. ಡಿಆರ್‌ಜಿ, ಎಸ್‌ಟಿಎಫ್ ಮತ್ತು ಸಿಆರ್‌ಪಿಎಫ್ ಪಡೆಗಳು ಇದರಲ್ಲಿ ಭಾಗವಹಿಸಿದ್ದವು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ನಕ್ಸಲೀಯರ ವಿರುದ್ಧದ ಕಾರ್ಯಾಚರಣೆಯ ಭಾಗವಾಗಿ,   ಕಳೆದ ತಿಂಗಳು ಕೂಡ ಹೆಚ್ಚಿನ ಸಂಖ್ಯೆಯ ಮಾವೋವಾದಿಗಳನ್ನು ಕೊಲ್ಲಲಾಯಿತು. ಈ ವರ್ಷದ ಮಾರ್ಚ್‌ನಿಂದ ಸುಮಾರು ಏಳು ಭಾರಿ ಎನ್‌ಕೌಂಟರ್‌ಗಳು ನಡೆದಿವೆ. 200ಕ್ಕೂ ಹೆಚ್ಚು ಮಾವೋವಾದಿಗಳು ಪ್ರಾಣ ಕಳೆದುಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net