

ಲಂಡನ್: ಇಂಗ್ಲೆಂಡ್ನ ಮಾಡೆಲ್ ಒಬ್ಬಳು ತನ್ನ ಮಾಜಿ ಪ್ರೇಮಿಗಳಿಂದ ಪ್ರತಿ ವರ್ಷದ ಪ್ರೇಮಿಗಳ ದಿನಾಚರಣೆಯಂದು ಭಾರಿ ಉಡುಗೊರೆಯನ್ನು ಪಡೆದುಕೊಳ್ಳುತ್ತಾರಂತೆ.
ಹೌದು, ಹೇಲೇ ಲಿಯಾನ್ನಾ(37) ಎಂಬ ಕೇಂಬ್ರಿಡ್ಜ್ಶೈರ್ನ ಪೀಟರ್ಬರೋ ಮೂಲದ ಮಾಡೆಲ್ ಪ್ರತಿ ವರ್ಷದ ಪ್ರೇಮಿಗಳ ದಿನಾಚರಣೆಯಂದು ಮಾಜಿ ಪ್ರೇಮಿಗಳಿಂದ 10 ಸಾವಿರ ಪೌಂಡ್(9,21,451 ರೂ.) ಅನ್ನು ಗಿಫ್ಟ್ ರೂಪದಲ್ಲಿ ಪಡೆದುಕೊಳ್ಳುತ್ತಾರಂತೆ. ಅದಕ್ಕೆ "ಪಾಪಪ್ರಜ್ನೆ ಉಡುಗೊರೆ" ಎಂದು ಹೆಸರಿಸಲಾಗಿದ್ದು, ಪತ್ನಿಗಾಗಿ ಪ್ರೇಯಸಿಯನ್ನು ದೂರಮಾಡಿಕೊಂಡ ಅಪರಾಧ ಪ್ರಜ್ನೆಗೆ ದುಬಾರಿ ಉಡುಗೊರೆಯನ್ನು ಆಕೆಯ ಪ್ರೇಮಿಗಳು ನೀಡುತ್ತಿದ್ದಾರೆ ಎಂದು ಹೇಳಿದರೆ ನೀವು ನಂಬಲೇಬೇಕು.
ಚಿನ್ನಾಭರಣ, ಡಿಸೈನರ್ ವಾಚ್ಗಳು ಮತ್ತು ಮಾಜಿ ಪ್ರೇಮಿಗಳಿಂದ ಒಳ್ಳೆಯ ಸ್ಥಳಗಳಿಗೆ ಭೇಟಿಯಂತಹ ದುಬಾರಿ ಉಡುಗೊರೆಯನ್ನು ಲಿಯನ್ನಾ ಪ್ರತಿ ವರ್ಷ ಪಡೆದುಕೊಳ್ಳುತ್ತಿದ್ದಾರೆ. ಪ್ರತಿ ವರ್ಷ ಡೇಟಿಂಗ್ ಸೈಟ್ ಮೂಲಕ ತನ್ನ ಮಾಜಿ ಪ್ರೇಮಿಗಳನ್ನು ಲಿಯಾನ್ನಾ ಸಂಪರ್ಕ ಮಾಡುತ್ತಾರೆ. ತನ್ನ ಪತ್ನಿಗಾಗಿ ಲಿಯನ್ನಾರನ್ನು ದೂರ ಮಾಡಿಕೊಂಡ ಅಪರಾಧ ಪ್ರಜ್ನೆಯಿಂದ ಮಾಜಿ ಪ್ರೇಮಿಗಳು ನೀಡುವ ಉಡುಗೊರೆಯನ್ನು ಲಿಯನ್ನಾ ಪಡೆದುಕೊಳ್ಳುತ್ತಾರೆ.
ಇತ್ತೀಚಿನ ವರ್ಷಗಳಲ್ಲಿ ತನ್ನ ಪ್ರೇಮಿಗಳ ಪಟ್ಟಿಯಲ್ಲಿರುವ ಓರ್ವ 3 ಸಾವಿರ ಪೌಂಡ್ ಮೌಲ್ಯದ ಚಿನ್ನದ ಸರ ನೀಡಿದ್ದಾನೆ. ಬಿಜಿನೆಸ್ ಮ್ಯಾನ್, ವ್ಯಾಪಾರಿ ಹೀಗೆ ಮುಂತಾದವರು ಲಿಯನ್ನಾ ಪ್ರೇಮಿಗಳ ಪಟ್ಟಿಯಲ್ಲಿದ್ದು, ಪ್ರತಿ ವರ್ಷ ಉಡುಗೊರೆಯನ್ನು ನೀಡುತ್ತಾರೆ.
ಈ ಬಗ್ಗೆ ಮಾತನಾಡಿರುವ ಲಿಯನ್ನಾ ನಾನು ಒಳ್ಳೆಯ ಆಭರಣಗಳು ಹಾಗೂ ವಾಚ್ಗಳನ್ನು ಉಡುಗೊರೆಯಾಗಿ ಪಡೆದುಕೊಂಡಿದ್ದೇನೆ. ಅಲ್ಲದೆ, ಶ್ರೀಮಂತ ಪ್ರೇಮಿಗಳೊಬ್ಬರೊಂದಿಗೆ ಫೆಬ್ರವರಿಯಲ್ಲಿ ಡೇಟಿಂಗ್ಗಾಗಿ ಒಳ್ಳೆಯ ಸ್ಥಳಗಳಿಗೆ ಹೋಗುತ್ತೇವೆ ಎಂದಿದ್ದಾರೆ. (ಏಜೆನ್ಸೀಸ್)