

ಬೆಂಗಳೂರು: ಸಂಚಾರ ನಿಯಮ ಉಲ್ಲಂಘನೆ ದಂಡ ಪಾವತಿಗೆ ಶೇ.50 ರಿಯಾಯಿತಿ ಸೆ.9ರವರೆಗೆ ಮಾತ್ರ ಅವಕಾಶ ಇದ್ದು, ಸೌಲಭ್ಯ ಬಳಸಿಕೊಳ್ಳುವಂತೆ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರಿ ಸಲಹೆ ನೀಡಿದೆ.
ಫೆಬ್ರವರಿ.11ರ ಒಳಗೆ ವಿಧಿಸಿರುವ ಟ್ರಾಫಿಕ್ ಫೈನ್ ಮೇಲೆ ಶೇ.50 ರಿಯಾಯಿತಿ ನೀಡಿ ಜುಲೈ 4ರಿಂದ ಸೆ.9 ವರೆಗೆ ಪಾವತಿಗೆ ಸಾರಿಗೆ ಇಲಾಖೆ ಸೂಚಿಸಿದೆ. ಕೇವಲ 5 ದಿನಗಳು ಉಳಿದಿದ್ದು, ಸಾರ್ವಜನಿಕರು ಸದುಪಯೋಗ ಪಡಿಸಿಕೊಳ್ಳಬೇಕೆಂದು ಪ್ರಾಧಿಕಾರಿ ತಿಳಿಸಿದೆ.
ಈ ಮೊದಲು ಎರಡು ಬಾರಿ ಡಿಸ್ಕೌಂಟ್ ಕೊಟ್ಟಾಗ ವಾಹನ ಮಾಲೀಕರು, ಸ್ವಯಂ ಪ್ರೇರಿತವಾಗಿ ಸಂಚಾರ ಪೊಲೀಸರ ಬಳಿ ಮತ್ತು ಆನ್‌ಲೈನ್‌ನಲ್ಲಿ ದಂಡ ಪಾವತಿ ಮಾಡಿದ್ದರು. ನೂರಾರು ಕೋಟಿ ರೂ. ಸಂಗ್ರಹವಾಗಿತ್ತು. 3ನೇ ಬಾರಿ ಅವಕಾಶ ಕೊಟ್ಟಾಗ ಜನರಿಂದ ಸ್ಪಂಧನೆ ಲಭಿಸಿಲ್ಲ.
ಫೆಬ್ರವರಿ.11ರ ಒಳಗೆ ವಿಧಿಸಿರುವ ದಂಡದ ಮೇಲೆ ಡಿಸ್ಕೌಂಟ್ ಕೊಟ್ಟಿರುವುದರಿಂದ ಬಹುತೇಕರು 2ನೇ ಬಾರಿ ಅವಕಾಶ ಕೊಟ್ಟಾಗಲೇ ಪಾವತಿ ಮಾಡಿದ್ದರು. ಅದಕ್ಕಾಗಿ 3ನೇ ಬಾರಿ ರಿಯಾಯಿತಿ ನೀಡಿದಾಗ ಸ್ಪಂಧನೆ ಲಭಿಸಿಲ್ಲ ಎಂದು ಸಂಚಾರ ಪೊಲೀಸರು ತಿಳಿಸಿದ್ದಾರೆ.