

ಮುಂಬೈ: ನಾಲ್ಕು ದಿನಗಳ ಏರಿಕೆಯ ನಂತರ ಭಾರತೀಯ ಷೇರುಪೇಟೆ ಸೋಮವಾರ ಇಳಿಕೆಯಾಗಿದೆ. ದಿನವಿಡೀ ಋಣಾತ್ಮಕವಾಗಿದ್ದ ಸೆನ್ಸೆಕ್ಸ್, ವಹಿವಾಟಿನ ಮಧ್ಯೆ 576.77 ಅಂಕ ಕುಸಿದು 83,482.13ಕ್ಕೆ ತಲುಪಿತ್ತು.
ಕೊನೆಯಲ್ಲಿ 452.44 ಅಂಕ ಕಡಿಮೆಯಾಗಿ 83,606.46ಕ್ಕೆ ಸ್ಥಿರಗೊಂಡಿತು. ನಿಫ್ಟಿ 120.75 ಅಂಕ ಕಡಿಮೆಯಾಗಿ 25,517.05ಕ್ಕೆ ಮುಟ್ಟಿತು. ಕಳೆದ ನಾಲ್ಕು ವಹಿವಾಟು ದಿನಗಳಲ್ಲಿ, ಸೆನ್ಸೆಕ್ಸ್ 2,162.11 ಅಂಕ (ಶೇ. 2.64) ಮತ್ತು ನಿಫ್ಟಿ 665.9 ಅಂಕ (ಶೇ. 2.66) ಏರಿಕೆಯಾಗಿತ್ತು. ವಿದೇಶಿ ಸಾಂಸ್ಥಿಕ ಹೂಡಿಕೆದಾರರು ಶುಕ್ರವಾರ 1,397.02 ಕೋಟಿ ರೂ. ಮೌಲ್ಯದ ಈಕ್ವಿಟಿಗಳನ್ನು ಖರೀದಿಸಿದ್ದಾರೆ. ಜಾಗತಿಕ ತೈಲ ಮಾನದಂಡ ಬ್ರೆಂಟ್ ಕ್ರೂಡ್ ಶೇ. 0.15ರಷ್ಟು ಕಡಿಮೆಯಾಗಿ ಬ್ಯಾರೆಲ್ಗೆ 67.67 ಡಾಲರ್ ಆಗಿದೆ.
ಬ್ಯಾಂಕ್ ಷೇರು ಇಳಿಮುಖ: ಕರ್ಣಾಟಕ ಬ್ಯಾಂಕ್ನ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ಶ್ರೀಕೃಷ್ಣನ್ ಹರಿಹರ ಶರ್ಮಾ ಮತ್ತು
ಕಾರ್ಯನಿರ್ವಾಹಕ ನಿರ್ದೇಶಕ ಶೇಖರ್ರಾವ್ ರಾಜೀನಾಮೆ ಹಿನ್ನೆಲೆಯಲ್ಲಿ ಸೋಮವಾರ ಕರ್ಣಾಟಕ ಬ್ಯಾಂಕ್ನ ಷೇರುಗಳ ಬೆಲೆ ಶೇ. 6ರಷ್ಟು ಕುಸಿಯಿತು. ಬಿಎಸ್ಇಯಲ್ಲಿ ಶೇ. 5.75 ಕಡಿಮೆಯಾಗಿ 195.75 ರೂ.ಗೆ ತಲುಪಿದರೆ, ಎನ್ಎಸ್ಇಯಲ್ಲಿ ಶೇ. 5.65ರಷ್ಟು ಕಡಿಮೆಯಾಗಿ 195.90 ರೂ.ಗೆ ಸ್ಥಿರಗೊಂಡಿತು.
ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ಚಿನ್ನದ ಬೆಲೆ ಸೋಮವಾರ 200 ರೂ. ಇಳಿಕೆಯಾಗಿದೆ. ಶೇ. 99.9 ಶುದ್ಧತೆಯ ಚಿನ್ನ ಶುಕ್ರವಾರ ಪ್ರತಿ 10 ಗ್ರಾಂಗೆ 97,670 ರೂ. ಇದ್ದದ್ದು ಸೋಮವಾರ 97,470ರೂ.ಗೆ ತಲುಪಿದೆ. ಶೇ. 99.5 ಶುದ್ಧತೆಯ ಚಿನ್ನ 150 ರೂ. ಕಡಿಮೆಯಾಗಿದೆ. ಶುಕ್ರವಾರ 97,200 ರೂ. ಇದ್ದದ್ದು ಸೋಮವಾರ 97,050 ರೂ.ಗೆ ತಲುಪಿದೆ. ಬೆಳ್ಳಿ ಬೆಲೆ 200 ರೂ. ಕಡಿಮೆಯಾಗಿ ಪ್ರತಿ ಕಿಲೋಗ್ರಾಮ್ೆ 1,02,800 ರೂ.ಗೆ ಮುಟ್ಟಿದೆ. ಶುಕ್ರವಾರ ಇದು 1,03,000 ರೂ. ಇತ್ತು.