

ಮುಂಬೈ: ಕರೊನಾ COVID19 ವೈರಸ್ ಸೋಂಕಿನ ಕಾರಣಕ್ಕೆ ಜಗತ್ತಿನ ಅರ್ಥವ್ಯವಸ್ಥೆ ತಲ್ಲಣಗೊಂಡಿದ್ದು, ಷೇರುಪೇಟೆ ಮೇಲೂ ವ್ಯತಿರಿಕ್ತ ಪರಿಣಾಮವಾಗಿದೆ. ಗುರುವಾರದ ಟ್ರೇಡಿಂಗ್ ಆರಂಭವಾಗುತ್ತಿದ್ದಂತೆ ಭಾರತೀಯ ಷೇರುಪೇಟೆಯಲ್ಲಿ ಬಾಂಬೆ ಸ್ಟಾಕ್ ಎಕ್ಸ್ಚೇಂಜ್(ಬಿಎಸ್ಇ) ಸೂಚ್ಯಂಕ ಸೆನ್ಸೆಕ್ಸ್ 300ಕ್ಕೂ ಹೆಚ್ಚು ಅಂಶಗಳ ಕುಸಿತ ಕಂಡಿದೆ.
ಗುರುವಾರದ ಆರಂಭಿಕ ವಹಿವಾಟಿನಲ್ಲಿ ಸೆನ್ಸೆಕ್ಸ್ 30,016.17 ಅಂಶಕ್ಕೆ ಇಳಿದ ನಂತರದಲ್ಲಿ ಮತ್ತೆ ಕೊಂಚ ಏರಿಕೆ ದಾಖಲಿಸಿ 336.77 ಅಂಶ ಕುಸಿದು 30,043.04ರಲ್ಲಿ ವಹಿವಾಟು ಮುಂದುವರಿಸಿತ್ತು. ಇದೇ ರೀತಿ ನ್ಯಾಷನಲ್ ಸ್ಟಾಕ್ ಎಕ್ಸ್ಚೇಂಜ್ (ಎನ್ಎಸ್ಇ) ಸೂಚ್ಯಂಕ ನಿಫ್ಟಿ 81.10 ಅಂಶ ಕುಸಿದು 8,844.20 ಅಂಶದಲ್ಲಿ ವಹಿವಾಟು ಮುಂದುವರಿಸಿತ್ತು.
ಸೆನ್ಸೆಕ್ಸ್ ಪಟ್ಟಿಯಲ್ಲಿ ಇನ್ಫೋಸಿಸ್ ಕಂಪನಿಯ ಷೇರುಗಳು ಗರಿಷ್ಠ ಶೇಕಡ 4 ನಷ್ಟ ಅನುಭವಿಸಿದರೆ, ಕೊಟಾಕ್ ಬ್ಯಾಂಕ್, ಹೀರೋ ಮೋಟೋಕಾರ್ಪ್, ಟೆಕ್ ಮಹೀಂದ್ರಾ, ಟೈಟಾನ್ ಮತ್ತು ಏಕ್ಸಿಸ್ ಬ್ಯಾಂಕ್ ಷೇರುಗಳು ನಷ್ಟ ಅನುಭವಿಸಿವೆ. ಇನ್ನೊಂದೆಡೆ, ಎಲ್ಆ್ಯಂಡ್ಟಿ, ಪವರ್ಗ್ರಿಡ್, ಸನ್ಫಾರ್ಮಾ, ರಿಲಯನ್ಸ್ ಇಂಡಸ್ಟ್ರೀಸ್, ಒಎನ್ಜಿಸಿ ಷೇರುಗಳು ಲಾಭ ಗಳಿಸುವ ದಿಕ್ಕಿನಲ್ಲಿ ಸಾಗಿವೆ.
ಹಿಂದಿನ ದಿನದ ವಹಿವಾಟಿನಲ್ಲಿ ಸೆನ್ಸೆಕ್ಸ್ 310.21 ಅಂಶ (1.01%) ಇಳಿದು 30,379.81ರಲ್ಲಿ ವಹಿವಾಟು ಮುಗಿಸಿತ್ತು. ಇದೇ ರೀತಿ ನಿಫ್ಟಿ 50 ಕೂಡ 68.55 ಅಂಶ ಇಳಿದು 8,925.30 ಯಲ್ಲಿ ವಹಿವಾಟು ಕೊನೆಗೊಳಿಸಿತ್ತು. ಇನ್ನು ಫಾರಿನ್ ಪೋರ್ಟ್ಫೋಲಿಯೋ ಇನ್ವೆಸ್ಟರ್ಸ್ ಗಳು ಬಂಡವಾಳ ಮಾರುಕಟ್ಟೆಯಲ್ಲಿ ಕೊನೆಯ ಟ್ರೇಡಿಂಗ್ ಸೆಷನ್ನಲ್ಲಿ ನಿವ್ವಳ ಖರೀದಿದಾರರಾಗಿ ಕಂಡುಬಂದರು. ಅವರು ಒಟ್ಟು 1,358.66 ಕೋಟಿ ರೂಪಾಯಿ ಮೌಲ್ಯದ ಷೇರುಗಳನ್ನು ಖರೀದಿಸಿದರು. (ಏಜೆನ್ಸೀಸ್)