Casting Couch : ಹರಿಯಾಣದಲ್ಲಿ ತನ್ನ ಗೆಳತಿಗೆ ಟಿಕೆಟ್​ ಕೊಡಿಸಲು ಕೆಸಿ ವೇಣುಗೋಪಾಲ್ ..!

Casting Couch
Published on

ನವದೆಹಲಿ: ಹರ್ಯಾಣ ವಿಧಾನಸಭಾ ಚುನಾವಣೆಯಲ್ಲಿ ಸೋಲು ಕಾಂಗ್ರೆಸ್ ಗೆ ಅನಿರೀಕ್ಷಿತ ಹೊಡೆತ ಕೊಟ್ಟಿದೆ. ಇನ್ನೇನು ಆತ್ಮಾವಲೋಕನ ಮಾಡಿಕೊಳ್ಳಬೇಕು ಎನ್ನುವಷ್ಟರಲ್ಲಿ ಪತ್ರಕರ್ತ ಅಶೋಕ್​ ವಾಂಖೆಡೆ ಕಾಂಗ್ರೆಸ್​ ನಾಯಕರ ವಿರುದ್ಧ ಕಾಸ್ಟಿಂಗ್​ ಕೌಚ್(Casting Couch) ಆರೋಪ ಮಾಡಿದ್ದು, ಆ ಪಕ್ಷ ಮತ್ತಷ್ಟು ಜರ್ಜರಿತವಾಗುವಂತಾಗಿದೆ.

ಹರಿಯಾಣ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್​ನಿಂದ ಟಿಕೆಟ್ ಹಂಚಿಕೆ ಮಾಡುವಾಗ ನಾಯಕರು ಕಾಸ್ಟಿಂಗ್ ಕೌಚ್ ನಲ್ಲಿ ತೊಡಗಿದ್ದರು ಎಂದು ವಾಂಖೆಡೆ ಗಂಭೀರ ಆರೋಪ ಮಾಡಿದ್ದಾರೆ. ಬಿಜೆಪಿಯ ಮಾಧ್ಯಮ ಕೋಶದ ಮುಖ್ಯಸ್ಥ ಅಮಿತ್ ಮಾಳವಿಯಾ ಅವರು ತಮ್ಮ ಎಕ್ಸ್ ಖಾತೆಯಲ್ಲಿ ಇದರ ವೀಡಿಯೊವನ್ನು ಹಂಚಿಕೊಂಡಿದ್ದಾರೆ, "ಹರಿಯಾಣದ ಜನರು ಪ್ರಧಾನ ಕಾರ್ಯದರ್ಶಿಯ ಗೆಳತಿಯನ್ನು ಏಕೆ ಆರಿಸಬೇಕು? ನಿಮ್ಮ ಸಂಬಂಧವನ್ನು ನಿಮ್ಮ ಮನೆಯಲ್ಲಿಯೇ ಇರಿಸಿ" ಎಂದು ಹೇಳಿದ್ದಾರೆ. ಇದು ಕಾಮಗ್ರೆಸ್​ ಮತ್ತು ಕೆ.ಸಿ.ವೇಣುಗೋಪಾಲ್​ಗೆ ಮುಜುಗರ ಅನುಭವಿಸುವಂತಾಗಿದೆ.

ಮಾಳವೀಯ ಅವರು ಕಾಂಗ್ರೆಸ್ ಪಕ್ಷದ ವಿರುದ್ಧ ವಾಗ್ದಾಳಿ ನಡೆಸಿದ್ದು, ತಮ್ಮ ಪೋಸ್ಟ್ ಮೂಲಕ ಗಂಭೀರ ಆರೋಪಗಳ ಬಗ್ಗೆ ಕಾಂಗ್ರೆಸ್​ ಹೈಕಮಾಂಡ್​ ಮೌನವನ್ನು ಪ್ರಶ್ನಿಸಿದ್ದಾರೆ.

ಇದರ ನಡುವೆ ಹಿರಿಯ ಪತ್ರಕರ್ತ ಅಶೋಕ್ ವಾಂಖೆಡೆ, ಕೆ.ಸಿ. ವೇಣುಗೋಪಾಲ್ ವಿರುದ್ಧ ಕಾಸ್ಟಿಂಗ್ ಕೌಚ್ ಆರೋಪವನ್ನು ಸಮರ್ಥಿಸಿಕೊಂಡಿದ್ದಾರೆ. ಹೈಕಮಾಂಡ್​ ಏಕೆ ಕಿವುಡುತನ ಪ್ರದರ್ಶಿಸುತ್ತಿದೆ. ವೇಣುಗೋಪಾಲ್​ ವಿಚಾರದಲ್ಲಿ ಮೌನದಿಂದ ಇರುವುದೇಕೆ? ಎಂದು ಪ್ರಶ್ನಿಸುತ್ತಿದ್ದಾರೆ.

ಕೆ.ಸಿ.ವೇಣುಗೋಪಾಲ್​ ವೈಯಕ್ತಿಕ ಸಂಬಂಧವು ಟಿಕೆಟ್​ ನೀಡುವುದರ ಮೇಲೆ ಪ್ರಭಾವ ಬೀರಿದೆ. ಪಕ್ಷದ ಹಿತಾಸಕ್ತಿಗಳಿಗಿಂತ ತನ್ನ ಸ್ನೇಹಿತೆಗೆ ಟಿಕೆಟ್ ನೀಡುವುದರ ಬಗ್ಗೆ ಅವರು ಹೆಚ್ಚು ಕಾಳಜಿ ವಹಿಸಿದ್ದರು ಎಂಬುದು ವಾಂಖೆಡೆ ಆರೋಪವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net