ಗಾಂಜಾ ಮಿಶ್ರಿತ ಚಾಕಲೇಟ್ ಮಾರಾಟ! ಓರ್ವ ಬಂಧನ

ವಿಜಯವಾಣಿ - 2023-12-22T182716.217
Published on

ಬಳ್ಳಾರಿ: ಗಾಂಜಾ ಮಿಶ್ರಿತ ಚಾಕೊಲೇಟ್ ಮಾರಾಟ ಮಾಡುತ್ತಿದ್ದ ವ್ಯಕ್ತಿಯೊಬ್ಬನನ್ನು ಅಬಕಾರಿ ಇಲಾಖೆ ಅಧಿಕಾರಿಗಳು ಶುಕ್ರವಾರ ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ಪುನೀತ್ ಕುಮಾರ್ ಅಲಿಯಾಸ್ ರಾಜು ಗುಪ್ತ ಎಂದು ಗುರತಿಸಲಾಗಿದೆ.

ಆರೋಪಿ ಸಂಡೂರು ತಾಲೂಕಿನ ವಡ್ಡು ಗ್ರಾಮದ ಮುಖ್ಯರಸ್ತೆಯಲ್ಲಿ ಕಳೆದ ಒಂದು ವರ್ಷದಿಂದ ಪಾನ್‌ಶಾಪ್ ನಡೆಸುತ್ತಿದ್ದ ಎಂದು ಹೇಳಲಾಗಿದೆ. ಖಚಿತ ಮಾಹಿತಿ ಮೇರೆಗೆ ಅಬಕಾರಿ ಅಧಿಕಾರಿಗಳು ದಾಳಿ ನಡೆಸಿ, ಆತನಿಂದ 91 ಪ್ಯಾಕೇಟ್‌ಗಳಲ್ಲಿದ್ದ 36,400 ರೂ. ಮೌಲ್ಯದ 19.05 ಕೆಜಿಯ ಗಾಂಜಾ ಮಿಶ್ರಿತ ಚಾಕಲೇಟ್‌ಗಳನ್ನು ವಶಪಡಿಸಿಕೊಂಡಿದ್ದಾರೆ.

ಆರೋಪಿಯು ಉತ್ತರಪ್ರದೇಶದ ಕೌಶಂಬಿ ಜಿಲ್ಲೆಯ ಚಾಯಲ್ ತಾಲೂಕಿನ ಬಸೇಡಿ ಗ್ರಾಮದವನಾಗಿದ್ದು, ಸಂಡೂರು ತಾಲೂಕಿನ ವಡ್ಡು ಗ್ರಾಮದಲ್ಲಿ ಕಳೆದ ಒಂದು ವರ್ಷದಿಂದ ಪಾನ್‌ಶಾಪ್ ನಡೆಸಿಕೊಂಡು ಹೋಗುತ್ತಿದ್ದ.

ದಾಳಿಯಲ್ಲಿ ಅಬಕಾರಿ ಉಪ ಅಧೀಕ್ಷಕಿ (ಪ್ರಭಾರ) ಜ್ಯೋತಿಬಾಯಿ ಹಾಗೂ ಅಬಕಾರಿ ನಿರೀಕ್ಷಕರಾದ ಜಗದೀಶ್ ಕಬ್ಬೂರಿ, ಮಲ್ಲಿಕಾರ್ಜುನ್ ಗಸ್ತಿ ಮತ್ತು ದಿಲೀಪ್ ಸಿಂಗ್ ಠಾಕೂರ್, ಸಿಬ್ಬಂದಿ ಉರುಕುಂದಪ್ಪ, ರಾಘವೇಂದ್ರ ಮತ್ತು ಹರೀಶ್ ಪಾಲ್ಗೊಂಡಿದ್ದರು ಎಂದು ಪ್ರಕಟಣೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net