ಸೆಲ್ಫಿ ತೆಗೆಯುತ್ತಿದ್ದ ವೇಳೆ ಅವಘಡ; ಸಮುದ್ರದಲ್ಲಿ ಮುಳುಗಿ ನಾಲ್ವರ ಜೀವವೇ ಹೋಯ್ತು!

Goa Beach
Published on

ಗೋವಾ: ಸೆಲ್ಫಿ ತೆಗೆಯುತ್ತಿದ್ದ ವೇಳೆ ನಾಲ್ವರು ನೀರನಿಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ಕ್ವೆರಿಮ್ ಬೀಚ್​ನಲ್ಲಿ ನಡೆದಿದೆ. ಸಕೀನಾ ಖಾತುಮ್ (17), ಮೊಹಮ್ಮದ್ ವಕೀಲ್ ಅಲಿ (25), ಥಬ್ಸುನ್ ಖಾತುನ್ (12) ಮತ್ತು ಮೊಹಮ್ಮದ್ ಅಲಿ (16) ಮೃತಪಟ್ಟವರು.

ರಭಸವಾಗಿ ಅಪ್ಪಳಿಸಿದ ಅಲೆ

ಸಮುದ್ರದ ದಡದ ಬಂಡೆಯ ಮೇಲೆ ನಿಂತು ಸೆಲ್ಫಿ ತೆಗೆದುಕೊಳ್ಳುತ್ತಿದ್ದರು. ಈ ವೇಳೆ ರಭಸವಾಗಿ ಅಪ್ಪಳಿಸಿದ ತೆರೆಯಿಂದಾಗಿ ನಾಲ್ವರು ಸಮುದ್ರ ನೀರಿಗೆ ಬಿದ್ದು ಸಾವನ್ನಪ್ಪಿದ್ದಾರೆ. ಈ ಬಗ್ಗೆ ಮಾಹಿತಿ ದೊರಕುತ್ತಿದ್ದಂತೆ ನಾಲ್ವರ ರಕ್ಷಣಾ ಕಾರ್ಯಾಚರಣೆ ಆರಂಭಿಸಲಾಗಿದೆ. ಸ್ಥಳೀಯ ಮೀನುಗಾರರ ಸಹಾಯದಿಂದ ಮೃತದೇಹಗಳನ್ನು ಪತ್ತೆಮಾಡಿ ಹೊರತೆಗೆಯಲಾಗಿದೆ ಎಂದು ಉತ್ತರ ಗೋವಾ ಎಸ್‌ಪಿ ನಿಧಿನ್ ವಲ್ಸನ್ ಹೇಳಿದ್ದಾರೆ.

ನೋ ಸೆಲ್ಫಿ ಜೋನ್!

20-22 ವ್ಯಕ್ತಿಗಳನ್ನು ಒಳಗೊಂಡ ಗುಂಪು ಕ್ವೆರಿಮ್ ಬೀಚ್‌ನಿಂದ ಅರಂಬೋಲ್ ಸ್ವೀಟ್ ಸರೋವರದ ಕಡೆಗೆ ನಡೆದುಕೊಂಡು ಹೋಗುತ್ತಿದ್ದಾಗ ನಾಲ್ಕು ವ್ಯಕ್ತಿಗಳು ದಡದ ಹತ್ತಿರ ಸೆಲ್ಫಿ ತೆಗೆದುಕೊಳ್ಳಲು ಬಂಡೆಗಳ ಮೇಲೆ ಹತ್ತಿದ್ದರು. ಅಲ್ಲಿ 'ನೋ ಸೆಲ್ಫಿ ಜೋನ್' ಎಂದು ಬೋರ್ಡ್ ಹಾಕಲಾಗಿತ್ತು. ಸೂಚನೆಯನ್ನು ನಿರಾಕರಿಸಿ ಸೆಲ್ಫಿ ತೆಗೆಯುವ ವೇಳೆ ಅವಘಡ ಸಂಭವಿಸಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಸಿದ್ದಾರೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net