ಸ್ವ ಸಹಾಯ ಸಂಘಗಳೇ ಮಹಿಳೆಯರ ಶಕ್ತಿ

skp sangha
ಶಿಕಾರಿಪುರದಲ್ಲಿ ಅಕ್ಕಮಹಾದೇವಿ ಮಹಿಳಾ ಕಿಸಾನ್ ಪ್ರೊಡ್ಯೂಸರ್ ಕಂಪನಿಯ ವಾರ್ಷಿಕ ಸಭೆಯನ್ನು ಅಧ್ಯಕ್ಷೆ ಕವಿತಾ ಉದ್ಘಾಟಿಸಿದರು. ಎನ್.ಹೇಮಂತ್, ಕಿರಣ್‌ಕುಮಾರ್ ಹರ್ತಿ, ಬದರೀಶ್, ಪಾಂಡುರಂಗ ರಾವ್ ಇತರರಿದ್ದರು.
Published on

ಶಿಕಾರಿಪುರ: ಮಹಿಳೆಯರನ್ನು ಆರ್ಥಿಕ ಸಶಕ್ತರನ್ನಾಗಿಸಲು ಸ್ವ ಸಹಾಯ ಸಂಘಗಳು ಅತ್ಯವಶ್ಯ. ಮಹಿಳಾ ಅಭ್ಯುದಯವೇ ಸರ್ಕಾರದ ಮುಖ್ಯ ಧ್ಯೇಯ ಎಂದು ಜಿಪಂ ಸಿಇಒ ಎನ್.ಹೇಮಂತ್ ಹೇಳಿದರು.

ಸಾಂಸ್ಕೃತಿಕ ಭವನದಲ್ಲಿ ಅಕ್ಕಮಹಾದೇವಿ ಮಹಿಳಾ ಕಿಸಾನ್ ಪ್ರೊಡ್ಯೂಸರ್ ಕಂಪನಿಯಿಂದ ಆಯೋಜಿಸಿದ್ದ ವಾರ್ಷಿಕ ಸಭೆಯಲ್ಲಿ ಮಾತನಾಡಿದರು.
ಶಿಕಾರಿಪುರ ತಾಲೂಕಿನಲ್ಲಿ ಪ್ರಥಮ ಬಾರಿಗೆ ಸ್ವ ಸಹಾಯ ಸಂಘದ ಮಹಿಳೆಯರಿಂದ ಅಕ್ಕಮಹಾದೇವಿ ಮಹಿಳಾ ಕಿಸಾನ್ ಪ್ರೊಡ್ಯೂಸರ್ ಕಂಪನಿ ರಚಿಸಲಾಗಿದೆ. ಗ್ರಾಮೀಣ ಪ್ರದೇಶದಲ್ಲಿ ವಿವಿಧ ರೀತಿಯ ಸ್ವಸಹಾಯ ಸಂಘಗಳಿದ್ದು, ಮಹಿಳಾ ಸ್ವ ಸಹಾಯ ಸಂಘಗಳ ರೈತ ಮಹಿಳೆಯರಿಂದ ಷೇರು ಸಂಗ್ರಹಿಸಿ ಕಂಪನಿ ಸ್ಥಾಪಿಸಲಾಗಿದೆ. 1000 ಮಹಿಳೆಯರು ಷೇರು ನೀಡಿದ್ದು, ಸರ್ಕಾರ ತನ್ನ ವಂತಿಕೆ ನೀಡುತ್ತದೆ ಎಂದರು.
ಸ್ವಸಹಾಯ ಸಂಘಗಳಲ್ಲಿ ಸಂಘದ ಸದಸ್ಯರಿಂದ ಹಣ ತೊಡಗಿಸಿ ಆ ಹಣವನ್ನು ಬಡ್ಡಿಗೆ ಅಗತ್ಯ ಇದ್ದವರಿಗೆ ಸಾಲದ ರೂಪದಲ್ಲಿ ನೀಡಲಾಗುತ್ತದೆ. ಆದರೆ ಅಕ್ಕಮಹಾದೇವಿ ಮಹಿಳಾ ಕಿಸಾನ್ ಪ್ರೊಡ್ಯೂಸರ್ ಸಂಸ್ಥೆಯಲ್ಲಿ ಮಹಿಳೆಯರಿಂದ ಷೇರು ರೂಪದಲ್ಲಿ ಹಣ ಸಂಗ್ರಹಿಸಿ ಬಂದಂತಹ ಹಣದಿಂದ ಮಹಿಳೆಯರಿಗೆ ಸ್ವ ಉದ್ಯೋಗ ಸೃಷ್ಟಿಸಿ ಅವರನ್ನ ಉದ್ಯಮಶೀಲರನ್ನಾಗಿ ಮಾಡುವುದು ಸಂಸ್ಥೆಯ ಧೈಯ ಎಂದರು.
ತಾಪಂ ಇಒ ಕಿರಣ್‌ಕುಮಾರ್ ಹರ್ತಿ, ಸಹಾಯಕ ನಿರ್ದೇಶಕರಾದ ಪಾಂಡುರಂಗರಾವ್, ಸಿ.ಜಿ.ರಾಜು, ಸಂಪನ್ಮೂಲ ವ್ಯಕ್ತಿ ಬದರೀಶ್, ಜಿಲ್ಲಾ ಕಾರ್ಯಕ್ರಮ ವ್ಯವಸ್ಥಾಪಕ ದೇವರಾಜ್, ನಿರ್ದೇಶಕರಾದ ಕರಿಬಸಮ್ಮ, ವಸಂತ, ಶಶಿಕಲಾ, ಸುಜಾತಾ, ಪ್ರೇಮಾ, ಮಂಜುಳಾ, ಶಿಲ್ಪಾ, ಜ್ಯೋತಿಬಾಯಿ, ಶಂಷಸ್ ಬಾನು ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net