ಮಕ್ಕಳು ಗುರಿ ತಲುಪಲು ಆತ್ಮಗೌರವ ಅಗತ್ಯ

bannikuppe
ಬನ್ನಿಕುಪ್ಪೆ ಪ್ರೌಢಶಾಲಾ ಆವರಣದಲ್ಲಿ ಆಯೋಜಿಸಿದ್ದ ಮಕ್ಕಳ ಗ್ರಾಮ ಸಭೆಯನ್ನು ಗಣ್ಯರು ಉದ್ಘಾಟಿಸಿದರು. ಗೋವಿಂದನಾಯಕ್, ವೇದಮೂರ್ತಿ, ಲಕ್ಷ್ಮೀಕಾಂತ್, ಶಿವಕುಮಾರ್ ಇದ್ದರು.
Published on

ಬನ್ನಿಕುಪ್ಪೆ: ಮಕ್ಕಳಲ್ಲಿ ಆತ್ಮಗೌರವ ಎಂಬುದು ಬಂದಾಗ ಜೀವನದ ಗುರಿ ತಲುಪಲು ಸಾಧ್ಯ ಎಂದು ಶಿಕ್ಷಕ ಶಿವಕುಮಾರ್ ತಿಳಿಸಿದರು.

ಇಲ್ಲಿನ ಪ್ರೌಢಶಾಲಾ ಆವರಣದಲ್ಲಿ ಬುಧವಾರ ಆಯೋಜಿಸಿದ್ದ ಮಕ್ಕಳ ಗ್ರಾಮ ಸಭೆಯಲ್ಲಿ ಮಾತನಾಡಿದ ಅವರು, ಪಾಲಕರಿಗೆ ಗೌರವ ನೀಡುವಂತೆ ಶಿಕ್ಷಕರಿಗೂ ಕೊಡಬೇಕು. ಕುಂದುಕೊರತೆಗಳನ್ನು ಶಿಕ್ಷಕರ ಬಳಿ ಹೇಳಿಕೊಂಡು ಸಮಸ್ಯೆ ಬಗೆಹರಿಸಿಕೊಳ್ಳಬೇಕು ಎಂದು ಮಕ್ಕಳಿಗೆ ಕಿವಿಮಾತು ಹೇಳಿದರು.

ಗ್ರಾಮ ಪಂಚಾಯಿತಿ ಅಧ್ಯಕ್ಷ ಬಿ.ಆರ್.ಗೊವಿಂದನಾಯಕ ಮಾತನಾಡಿ, ಪ್ರೌಢಶಾಲೆಗೆ ಅಗತ್ಯವಿರುವ ಸೌಕರ್ಯಗಳನ್ನು ಪಂಚಾಯಿತಿ ವತಿಯಿಂದ ದೊರಕಿಸಿಕೊಡಲಾಗುವುದು ಎಂದು ತಿಳಿಸಿದರು.

ಕಾರ್ಯದರ್ಶಿ ಸಿ.ಎಸ್.ವೇದಮೂರ್ತಿ ಮಾತನಾಡಿದರು. ಬಸ್, ಕಾಂಪೌಂಡ್ ವ್ಯವಸ್ಥೆ, ಆಟದ ಮೈದಾನ, ದೈಹಿಕ ಶಿಕ್ಷಕರ ಕೊರತೆ, ಡಿ ಗ್ರೂಪ್ ನೌಕರರ ಕೊರತೆ ಹಾಗೂ ಆಟದ ಮೈದಾನದಲ್ಲಿ ರಾತ್ರಿ ವೇಳೆ ಮದ್ಯಪಾನ ಮಾಡುವುದು, ದನಕರುಗಳನ್ನು ಉದ್ಯಾನದಲ್ಲಿ ಬಿಡುವುದು, ಶಾಲೆಯ ಕಿಟಕಿಗಳಿಗೆ ಹಾನಿ ಮಾಡಿರುವ ಬಗ್ಗೆ ವಿದ್ಯಾರ್ಥಿಗಳು ಸಭೆಯ ಗಮನ ಸೆಳೆದರು.

ಸಮಸ್ಯೆಗಳನ್ನು ಆಲಿಸಿದ ಗ್ರಾಪಂ ಅಧ್ಯಕ್ಷ ಗೋವಿಂದ ನಾಯಕ್, ಎಲ್ಲವನ್ನೂ ಪರಿಹರಿಸುವ ನಿಟ್ಟಿನಲ್ಲಿ ಸಂಬಂಧಪಟ್ಟ ಇಲಾಖೆ ಹಾಗೂ ಶಾಸಕರ ಗಮನಕ್ಕೆ ತರಲಾಗುವುದು ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net