ಸ್ವಯಂ ಉದ್ಯೋಗದಿಂದ ಬದುಕು ಸುಂದರ

4kdl2
Published on

ಕುಂದಗೋಳ: ಮಹಿಳಾ ಸ್ವಸಹಾಯ ಸಂಘಗಳಿಗೆ ಸರ್ಕಾರ ಸಹಾಯಧನ ಹಾಗೂ ಕಡಿಮೆ ಬಡ್ಡಿದರದಲ್ಲಿ ಸಾಲ ನೀಡುತ್ತಿದ್ದು, ಪ್ರತಿ ಸಂಘಗಳು ಇದನ್ನು ಸದುಪಯೋಗ ಪಡಿಸಿಕೊಂಡು ಸ್ವಉದ್ಯೋಗ ಪ್ರಾರಂಭಿಸಿ ಸುಂದರ ಬದುಕು ಕಟ್ಟಿಕೊಳ್ಳಬೇಕು ಎಂದು ಪಟ್ಟಣ ಪಂಚಾಯಿತಿ ಅಧ್ಯಕ್ಷ ವಾಸು ಗಂಗಾಯಿ ಹೇಳಿದರು

ಪಟ್ಟಣ ಪಂಚಾಯಿತಿ ಕಾರ್ಯಾಲಯದಲ್ಲಿ ದೀನದಯಾಳ ಅಂತ್ಯೋದಯ(ಡೇ ನೆಲ್ಮ್ ) ಯೋಜನೆಯಡಿ 4 ಲಕ್ಷ ರೂ.ಗಳ ಸಹಾಯಧನದ ಚೆಕ್ ಅನ್ನು ಮಹಿಳಾ ಸಂಘದ ಅಧ್ಯಕ್ಷೆ ನೀಲಾವತಿ ಕಲಾಲಗೆ ವಿತರಿಸಿ ಅವರು ಮಾತನಾಡಿದರು. ಡೇ ನೆಲ್ಮ್ ಯೋಜನೆಯಡಿ ಸ್ವಯಂ ಉದ್ಯೋಗ ಪ್ರಾರಂಭಿಸಲು ಸಾಲ ನೀಡಲಾಗುತ್ತಿದ್ದು, ಸರಿಯಾದ ಸಮಯಕ್ಕೆ ಬ್ಯಾಂಕ್​ಗಳಿಗೆ ಹಣ ಸಾಲ ಮರುಪಾವತಿಸುವ ಮೂಲಕ ಸಹಾಯಧನದ ಪ್ರಯೋಜನ ಪಡೆದುಕೊಳ್ಳಬೇಕು ಎಂದರು. ಪಪಂ ಸದಸ್ಯರಾದ ಶ್ಯಾಮ್ುಂದರ ದೇಸಾಯಿ, ದಿಲೀಪ್ ಕಲಾಲ, ಪ್ರಕಾಶ ಕಟಗಿ ಇತರರು ಉಪಸ್ಥಿತರಿದ್ದರು.

EndFragment

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net