ಹುಣಸೂರಿನಲ್ಲಿ ಐವರು ಅದೃಷ್ಟಶಾಲಿಗಳ ಆಯ್ಕೆ

HUN-DEC-5-6(VIJAYAVANI PROGRAMME)
ಹುಣಸೂರು ನಗರದ ಸರ್ಕಾರಿ ಮಹಿಳಾ ಕಾಲೇಜಿನಲ್ಲಿ ಮಂಗಳವಾರ ವಿಜಯವಾಣಿ ಪತ್ರಿಕೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಲಕ್ಕಿಡಿಪ್ ಮೂಲಕ ವಿಜೇತ ಮಹಿಳೆಯರನ್ನು ಗಣ್ಯರು ಆರಿಸಿದರು. ಎಂ.ಆರ್.ಸತ್ಯನಾರಾಯಣ, ಪ್ರಾಂಶುಪಾಲ ಪುಟ್ಟಶೆಟ್ಟಿ, ಸಿಡಿಸಿ ಉಪಾಧ್ಯಕ್ಷ ಮೋದೂರು ಮಹೇಶಾರಾಧ್ಯ, ರೊ.ಚನ್ನಕೇಶವ ಇತರರಿದ್ದರು.
Published on

ಹುಣಸೂರು: ವಿಜಯವಾಣಿ ಪತ್ರಿಕೆ ಮಹಿಳಾ ಓದುಗರಿಗಾಗಿ ಆಯೋಜಿಸಿದ್ದ ನಾರಿ ನಿನಗೊಂದು ಸ್ಯಾರಿ ಲಕ್ಕಿ ಡ್ರಾ ಸ್ಪರ್ಧೆಯಲ್ಲಿ ತಾಲೂಕಿನ ಐವರು ಮಹಿಳೆಯರು ಆಯ್ಕೆಯಾದರು.

ನಗರದ ಸರ್ಕಾರಿ ಮಹಿಳಾ ಕಾಲೇಜಿನಲ್ಲಿ ಮಂಗಳವಾರ ಆಯೋಜಿಸಿದ್ದ ಲಕ್ಕಿಡಿಪ್ ಡ್ರಾ ಕಾರ್ಯಕ್ರಮದಲ್ಲಿ ಕಾಲೇಜು ಅಭಿವೃದ್ಧಿ ಮಂಡಳಿಯ ಕಾರ್ಯಾಧ್ಯಕ್ಷರು ಸೇರಿದಂತೆ ಸದಸ್ಯರು ಮತ್ತು ಗಣ್ಯರು ಅದೃಷ್ಟವಂತ ಮಹಿಳೆಯರ ಹೆಸರುಳ್ಳ ಕೂಪನ್‌ಗಳನ್ನು ಲಕ್ಕಿಡಿಪ್ ಮೂಲಕ ಎತ್ತಿದರು.
ವಿಜಯವಾಣಿ ಮೈಸೂರು ಬ್ಯೂರೋ ಮುಖ್ಯಸ್ಥ ಎಂ.ಆರ್.ಸತ್ಯನಾರಾಯಣ ಮಾತನಾಡಿ, ಆಧುನಿಕ ಜೀವನಶೈಲಿ ಮತ್ತು ತಂತ್ರಜ್ಞಾನಗಳ ಬಳಕೆಯಿಂದಾಗಿ ಪತ್ರಿಕೆಗಳನ್ನು ಓದುವ ಸಂಸ್ಕೃತಿ ಕಡಿಮೆಯಾಗುತ್ತಿದೆ ಎನ್ನುವ ಆತಂಕ ಎಲ್ಲರಲ್ಲೂ ಇದೆ. ಈ ನಡುವೆ ಪತ್ರಿಕೆಗಳ ನೆಚ್ಚಿನ ಓದುಗರಾಗಿದ್ದ ಮಹಿಳೆಯರೂ ಓದುವ ಸಂಸ್ಕೃತಿಯಿಂದ ವಿಮುಖರಾಗುತ್ತಿದ್ದಾರೆ ಎನ್ನುವ ಮಾತುಗಳು ಕೇಳಿಬಂದಿದ್ದವು. ಇಂತಹ ಮಹಿಳಾ ವರ್ಗವನ್ನು ಮತ್ತೆ ಓದುವತ್ತ ತೊಡಗಿಸುವ ಸದುದ್ದೇಶದಿಂದ ವಿಜಯವಾಣಿ ಮಹಿಳೆಯರನ್ನೇ ಮುಖ್ಯವಾಗಿರಿಸಿಕೊಂಡು 40 ದಿನಗಳು ವಿಜಯವಾಣಿ ಪತ್ರಿಕೆಯಲ್ಲಿ ಪ್ರತಿದಿನ ಪ್ರಶ್ನೆ ಮತ್ತು ಆಯ್ಕೆ ಉತ್ತರಗಳನ್ನು ನೀಡುತ್ತ ಬಂದಿತ್ತು. ಪ್ರಶ್ನೆಗಳಿಗೆ ಸಮಾಜದ ವಿವಿಧ ಸ್ತರಗಳಲ್ಲಿರುವ ಹೆಣ್ಣುಮಕ್ಕಳು ಉತ್ತರ ಬರೆದು ಕಳುಹಿಸಿದ್ದಾರೆ. ಇವರಲ್ಲಿ ಅಡುಗೆ ಮಾಡುವವರು, ಕೃಷಿಕರು, ಗೃಹಿಣಿಯರು ಹೀಗೆ ವಿವಿಧ ಕ್ಷೇತ್ರದ ಮಹಿಳೆಯರು ಪಾಲ್ಗೊಂಡಿರುವುದು ಸಂತಸ ತಂದಿದೆ. ಕಾರ್ಯಕ್ರಮ ರೂಪಿಸಿದ್ದಕ್ಕೂ ಸಾರ್ಥಕ್ಯ ಸಿಕ್ಕಿದೆ ಎಂದು ಹೇಳಿದರು.

ಸಿಡಿಸಿ ಉಪಾಧ್ಯಕ್ಷ ಮೋದೂರು ಮಹೇಶಾರಾಧ್ಯ, ಸದಸ್ಯೆ ಜ್ಯೋತಿ ವಿಶ್ವನಾಥ್, ಪ್ರಾಧ್ಯಾಪಕಿ ಡಾ.ಕಾವ್ಯಾ ಮತ್ತಿತರರು ಲಕ್ಕಿಡಿಪ್ ಮೂಲಕ ಅದೃಷ್ಟವಂತರನ್ನು ಆರಿಸಿದರು.

ಪ್ರಾಂಶುಪಾಲ ಪುಟ್ಟಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ರೋಟರಿ ಅಧ್ಯಕ್ಷ ಚನ್ನಕೇಶವ, ನಗರಸಭೆ ಸದಸ್ಯ ವಿವೇಕಾನಂದ, ವಿಜಯವಾಣಿ ಜಾಹೀರಾತು ವಿಭಾಗದ ವ್ಯವಸ್ಥಾಪಕ ದೀಪಕ್ ಘಾಟ್ಕೆ, ವರದಿಗಾರ ಶಿವಕುಮಾರ್ ವಿ.ರಾವ್ ಹಾಗೂ ವಿದ್ಯಾರ್ಥಿನಿಯರು ಹಾಜರಿದ್ದರು.

ವಿಜೇತರಿವರು: ಹುಣಸೂರು ನಗರದ ಶಾಂತಿ ಜೆ.ರಾವ್, ಹಬ್ಬನಕುಪ್ಪೆ ಗ್ರಾಮದ ಕೆ.ಶ್ವೇತಾ, ನಗರದ ಬಿ.ಎಂ.ರಸ್ತೆಯ ಶಕುಂತಲಾ, ಕಟ್ಟೆಮಳಲವಾಡಿ ಗ್ರಾಮದ ಪುಟ್ಟರತ್ನಾ, ಮುಳ್ಳೂರು ಗ್ರಾಮದ ವಾರಣಾಸಿಬಾಯಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net