ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ಆಯ್ಕೆ

SRP_16-03jpj
ಶ್ರೀರಂಗಪಟ್ಟಣ ತಾಲೂಕಿನ ಚಿಕ್ಕಅಂಕನಹಳ್ಳಿ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ಅವಿರೋಧವಾಗಿ ಆಯ್ಕೆಯಾದ ಅಧ್ಯಕ್ಷ ನಾಗರಾಜು ಹಾಗೂ ಉಪಾಧ್ಯಕ್ಷ ವೆಂಕಟಾಚಲ(ನಾರಾಯಣ) ಸದಸ್ಯರು ಅಭಿನಂದಿಸಿದರು.
Published on

ಶ್ರೀರಂಗಪಟ್ಟಣ: ತಾಲೂಕಿನ ಚಿಕ್ಕಅಂಕನಹಳ್ಳಿ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ನೂತನ ಅಧ್ಯಕ್ಷರಾಗಿ ನಾಗರಾಜು ಹಾಗೂ ಉಪಾಧ್ಯಕ್ಷರಾಗಿ ವೆಂಕಟಾಚಲ(ನಾರಾಯಣ) ಅವರು ಬುಧವಾರ ಅವಿರೋಧವಾಗಿ ಆಯ್ಕೆಯಾದರು.

ಗ್ರಾಮದಲ್ಲಿನ ಸಂಘಕ್ಕೆ ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ತೀವ್ರ ಹಣಾಹಣಿಯ ಪೈಪೋಟಿ ನಡೆದಿದ್ದು, 11 ಸ್ಥಾನಗಳಿಗೂ ಕಾಂಗ್ರೆಸ್ ಬೆಂಬಲಿತ ಸದಸ್ಯರೇ ಷೇರುದಾರರಿಂದ ಆಯ್ಕೆಗೊಂಡಿದ್ದರು. ಇದೀಗ ಬುಧವಾರ ನಡೆದ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ನಾಗರಾಜು ಮತ್ತು ವೆಂಕಟಾಚಲ ಹೊರತುಪಡಿಸಿ, ಬೇರಾರೂ ಸ್ಪರ್ಧಿಸದ ಹಿನ್ನೆಲೆಯಲ್ಲಿ ಚುನಾವಣಾಧಿಕಾರಿ ಯು.ಕೆ.ಪಾರ್ವತಮ್ಮ ಅವಿರೋಧ ಆಯ್ಕೆಯನ್ನು ಘೋಷಿಸಿದರು.

ಸಂಘದ ಸದಸ್ಯರಾದ ಗಿರೀಶ್, ಶಿವಣ್ಣ, ಸಿದ್ದೇಗೌಡ, ಪ್ರದೀಪ್, ನಂಜೇಗೌಡ, ರಾಮಕೃಷ್ಣ, ಚಾಮುಂಡಯ್ಯ, ರಜಿನಿ, ಲೀಲಾವತಿ ಅವರನ್ನು ಚಿಕ್ಕ ಅಂಕನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಾಂಗ್ರೆಸ್ ಎಸ್.ಕೆ.ಕೃಷ್ಣ, ಎಚ್.ಎಸ್.ಶಿವಕುಮಾರ್, ದೇಸೀಗೌಡ, ಅಭಿಷೇಕ್, ಸುನೀಲ್, ಪ್ರವೀಣ್, ಸುನೀಲ್, ಶಿವಸ್ವಾಮಿ ಇತರರು ಜತೆಗಿದ್ದು, ಹೂಮಾಲೆ ಹಾಕಿ ಸನ್ಮಾನಿಸಿ ಅಭಿನಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net