

ಚಾಮರಾಜನಗರ: ಕೊಳ್ಳೇಗಾಲ ಪಟ್ಟಣದ ಬರ್ಡ್ ಮೆಮೋರಿಯಲ್ (ಬಿಎಂಎಚ್‌ಪಿ) ಪ್ರೌಢಶಾಲೆಯ ಕನ್ನಡ ಮಾಧ್ಯಮದ ವಿದ್ಯಾರ್ಥಿನಿಯರು ದಸರಾ ಹಾಗೂ ಜಿಲ್ಲಾ ಮಟ್ಟದ ಕ್ರೀಡಾಕೂಟದ ಬಾಲ್ ಬ್ಯಾಡ್ಮಿಂಟನ್ ಸ್ಪರ್ಧೆಯಲ್ಲಿ ಭಾಗವಹಿಸಿ ಪ್ರಥಮ ಸ್ಥಾನ ಗಳಿಸುವ ಮೂಲಕ ವಿಭಾಗೀಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಚಾಮರಾಜನಗರ ತಾಲೂಕು ಸಂತೇಮರಳ್ಳಿ ಜೆಎಸ್‌ಎಸ್ ಪ್ರೌಢಶಾಲೆಯ ಮೈದಾನದಲ್ಲಿ ಇತ್ತೀಚೆಗೆ ನಡೆದ ಜಿಲ್ಲಾ ಮಟ್ಟದ ಕ್ರೀಡಾಕೂಟದ ಬಾಲ್ ಬ್ಯಾಡ್ಮಿಂಟನ್ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದು ವಿಭಾಗೀಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಅಂತೆಯೇ, ಜಿಲ್ಲಾ ಮಟ್ಟದ ದಸರಾ ಕ್ರೀಡಾಕೂಟದಲ್ಲೂ ಮೊದಲ ಸ್ಥಾನಗಳಿಸಿ ವಿಜೇತರಾಗಿ ವಿಭಾಗೀಯ ಮಟ್ಟಕ್ಕೆ ಆಯ್ಕೆಗೊಂಡಿದ್ದಾರೆ.
ಸಾಧಕ ವಿದ್ಯಾರ್ಥಿನಿಯರಾದ ವರ್ಷಿತಾ, ಬಿ.ಬಿ.ಐಷಾ, ಕೀರ್ತನಾ, ಲತಾಶ್ರೀ, ಮೀನಾಕ್ಷಿ, ಸೋನು, ಸುಫೀಯಾ, ಖುಷಿ, ಸಂಧ್ಯಾ, ಕಾವ್ಯ ಅವರಿಗೆ ಬಿ.ಎಂ.ಎಚ್.ಪಿ. ಶಾಲೆ ಅಧ್ಯಕ್ಷ ಕಿರಣ್ ಡಿ.ಕುನ್ನ, ಕಾರ್ಯದರ್ಶಿ ಕರುಣಾಕರನ್, ಖಜಾಂಚಿ ಫ್ರಾನ್ಸಿಸ್, ಆಡಳಿತ ಮಂಡಳಿ ಸದಸ್ಯ ಪ್ರದೀಪ್ ಇತರರು ಅಭಿನಂದಿಸಿದ್ದಾರೆ.