ವಿಭಾಗ ಮಟ್ಟದ ಕಬಡ್ಡಿ ಸ್ಪರ್ಧೆಗೆ ಆಯ್ಕೆ

IMG_20231011_164344
Published on

ಧರ್ಮಾಪುರ: ಮೈಸೂರು ಜಿಲ್ಲಾ ಮಟ್ಟದ 14 ವರ್ಷದೊಳಗಿನ ಹಿರಿಯ ಪ್ರಾಥಮಿಕ ಶಾಲೆಗಳ ಬಾಲಕ- ಬಾಲಕಿಯರ ಕಬಡ್ಡಿ ಪಂದ್ಯಾವಳಿಯಲ್ಲಿ ಧರ್ಮಾಪುರ ಸಮೀಪದ ರತ್ನಪುರಿಯ ಓಂ ಶ್ರೀಸಾಯಿ ಶಾಲೆಯ ಕ್ರೀಡಾಪಟುಗಳು ಎರಡು ವಿಭಾಗದಲ್ಲೂ ಜಯ ಗಳಿಸಿ ವಿಭಾಗ ಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ.

ನಂಜನಗೂಡು ತಾಲೂಕಿನ ಗೀಕಳ್ಳಿಯ ಸಮುದ್ರ ಪ್ರೌಢಶಾಲೆ ಆಶ್ರಯದಲ್ಲಿ ನಡೆದ ಪಂದ್ಯಾವಳಿಯ ಬಾಲಕಿಯರ ಅಂತಿಮ ಪಂದ್ಯಾಟದಲ್ಲಿ ನಂಜನಗೂಡು ತಾಲೂಕಿನ ತಂಡವನ್ನು 20-18 ಅಂಕದ ಅಂತರದಲ್ಲಿ ಸೋಲಿಸಿತು. ಇದಕ್ಕೂ ಮುನ್ನ ಸೆಮಿಫೈನಲ್‌ನಲ್ಲಿ ತಿ.ನರಸೀಪುರ ತಾಲೂಕಿನ ತಂಡವನ್ನು 40-18 ಅಂಕಗಳಿಂದ ಸೋಲಿಸಿತ್ತು.

ಬಾಲಕರ ವಿಭಾಗದ ಫೈನಲ್ ಪಂದ್ಯದಲ್ಲಿ ತಿ.ನರಸೀಪುರ ತಂಡವನ್ನು 33-3 ಅಂತರದಲ್ಲಿ ಸೋಲಿಸಿದ ರತ್ನಪುರಿಯ ಓಂ ಶ್ರೀಸಾಯಿ ಶಾಲೆಯ ಬಾಲಕರ ತಂಡ, ಸೆಮಿಫೈನಲ್‌ನಲ್ಲಿ ಎಚ್.ಡಿ.ಕೋಟೆ ತಾಲೂಕು ತಂಡವನ್ನು 38-22 ಅಂಕಗಳ ಅಂತರದಲ್ಲಿ ಸೋಲಿಸಿತ್ತು. ಬೆಸ್ಟ್ ರೈಡರ್‌ಗಳಾಗಿ ಶಾಲೆಯ ಸುಭಾಷಿಣಿಬಾಯಿ, ನಕುಲ್ ಪ್ರಶಸ್ತಿ ಗಿಟ್ಟಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net