ಪೆಂಕಾಕ್ ಸಿಲತ್ ಕ್ರೀಡಾಕೂಟಕ್ಕೆ ಆಯ್ಕೆ

karate
ಕೊಪ್ಪಳದಲ್ಲಿ ಜರುಗಲಿರುವ ರಾಷ್ಟ್ರೀಯ ಪೆಂಕಾಕ್ ಸಿಲತ್ ಚಾಂಪಿಯನ್‌ಶಿಪ್‌ನಲ್ಲಿ ಭಾಗವಹಿಸಲಿರುವ ಜೆ.ಜಿಶ್ಯಾಂತ್, ಅರ್ಜುನ್ ಜಿ. ಸ್ವಾಮಿ, ಅರುಣ್ ಶ್ರೀಧರ್, ಸಿ.ಗೌರೀಶ್.
Published on

ಶಿವಮೊಗ್ಗ: ಕೊಪ್ಪಳದ ಖೇಲೋ ಇಂಡಿಯಾ ಒಳಾಂಗಣ ಕ್ರೀಡಾಂಗಣದಲ್ಲಿ ಸೆ.26ರಿಂದ 28ರವರೆಗೆ ಆಯೋಜಿಸಿರುವ 13ನೇ ರಾಷ್ಟ್ರೀಯ ಪೆಂಕಾಕ್ ಸಿಲತ್ ಚಾಂಪಿಯನ್‌ಶಿಪ್‌ನಲ್ಲಿ ಶಿವಮೊಗ್ಗ ಹಾಗೂ ಉತ್ತರ ಕನ್ನಡ ಜಿಲ್ಲೆಯ ಸ್ಪರ್ಧಿಗಳು ಭಾಗವಹಿಸುತ್ತಿದ್ದಾರೆ ಎಂದು ಜಿಲ್ಲಾ ಪೆಂಕಾಕ್ ಸಿಲತ್ ಸ್ಪೋರ್ಟ್ಸ್ ಸಂಸ್ಥೆ ಪ್ರಧಾನ ಕಾರ್ಯದರ್ಶಿ ಚಂದ್ರಕಾಂತ್ ಜಿ. ಭಟ್ ಹೇಳಿದರು.

ಕರ್ನಾಟಕ ರಾಜ್ಯ ಪೆಂಕಾಕ್ ಸಿಲತ್ ಸಂಸ್ಥೆ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಜಿಲ್ಲಾ ಪಂಚಾಯಿತಿ ಕೊಪ್ಪಳ ಆಶ್ರಯದಲ್ಲಿ ರಾಷ್ಟ್ರಮಟ್ಟದ ಸ್ಪರ್ಧೆ ನಡೆಯಲಿದೆ. ಅತಿಥೇಯ ಕರ್ನಾಟಕ ಸೇರಿ ಎಲ್ಲ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶದ ಕ್ರೀಡಾಪಟುಗಳು ಭಾಗವಹಿಸುತ್ತಿದ್ದಾರೆ. ಒಟ್ಟು ಐದು ವಿಭಾಗಗಳಲ್ಲಿ ಈ ಸ್ಪರ್ಧೆ ನಡೆಯಲಿದೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಶಿವಮೊಗ್ಗದ ಜೆ.ಜಿಶ್ಯಾಂತ್ ಟ್ಯಾಡಿಂಗ್ ವಿಭಾಗದಲ್ಲಿ, ಅರ್ಜುನ್ ಜಿ. ಸ್ವಾಮಿ ಪ್ರೀ ಜೂನಿಯರ್ ವಿಭಾಗದಲ್ಲಿ, ಅರುಣ್ ಶ್ರೀಧರ್ ಜೂನಿಯರ್ ವಿಭಾಗದಲ್ಲಿ ಹಾಗೂ ಉತ್ತರ ಕನ್ನಡ ಜಿಲ್ಲೆಯ ಸಿ.ಗೌರೀಶ್ ಸಿಂಗಾ ವಿಭಾಗದಲ್ಲಿ ಸ್ಪರ್ಧಿಸಲಿದ್ದಾರೆ. ಪೆಂಕಾಕ್ ಕ್ರೀಡೆಗೆ ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದ ಮನ್ನಣೆ ಸಿಕ್ಕಿದೆ ಎಂದರು.

ಸಂಸ್ಥೆಯ ಅಧ್ಯಕ್ಷ ಕುಮಾರ್ ವಿ. ನಾಯ್ಡು, ಉಪಾಧ್ಯಕ್ಷ ಚಂದನ್ ಎಂ. ಪಾಟೀಲ್, ಖಜಾಂಚಿ ಚಂದ್ರು ಎಚ್. ಬನ್ನೀಕೆರೆ, ನಿರ್ದೇಶಕ ಜಿ.ಕೆ.ರಾಘವೇಂದ್ರ, ಜನಾದರ್ನ್ ಸುದ್ದಿಗೋಷ್ಠಿಯಲ್ಲಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net