ಮೂಖಹಳ್ಳಿ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ಆಯ್ಕೆ

IMG-20250413-WA0227
Selected for Mookhahalli Agricultural Cooperative Society
Published on

ಗುಂಡ್ಲುಪೇಟೆ: ತಾಲೂಕಿನ ಮೂಖಹಳ್ಳಿ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ಭಾನುವಾರ ಅಧ್ಯಕ್ಷ, ಉಪಾಧ್ಯಕ್ಷ ಹಾಗೂ ನಿರ್ದೇಶಕರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಅಧ್ಯಕ್ಷರಾಗಿ ತೆಂಕಲಹುಂಡಿ ಗ್ರಾಮದ ಕರಿಬಸವೇಗೌಡ, ಉಪಾಧ್ಯಕ್ಷರಾಗಿ ಹೊನ್ನಶೆಟ್ಟರಹುಂಡಿ ಗ್ರಾಮದ ಪುಟ್ಟಣ್ಣಗೌಡ ಆಯ್ಕೆಯಾದರು.

ಹೊನ್ನಶೆಟ್ಟರ ಹುಂಡಿಯ ವಿ.ಶ್ರೀನಿವಾಸ ಶೆಟ್ಟಿ, ಚೆಲುವಯ್ಯ ಮತ್ತು ಶಾಂತಮ್ಮ, ತೆಂಕಲಹುಂಡಿಯ ನಾಗೇಶ, ಬಿ.ರಮೇಶ, ದೊಡ್ಡೇಗೌಡ ಹಾಗೂ ಮೂಖಹಳ್ಳಿಯ ಮಹದೇವಪ್ಪ, ನಾಗಮ್ಮ, ವೆಂಕಟಯ್ಯ ಮತ್ತು ಮಹದೇವ ಅವರು ನಿರ್ದೇಶಕರಾಗಿ ಆಯ್ಕೆಯಾದರು. ಮುಖಂಡರಾದ ಗೌಡ್ರಟ್ಟಿ ಸಿದ್ದೇಶ್, ಮಹೇಶ್, ಮಹದೇವೇಗೌಡ, ಶಿವಣ್ಣ, ಪ್ರವೀಣ್‌ಕುಮಾರ್ ಮತ್ತು ಸತೀಶ ಅವರು ಆಡಳಿತ ಮಂಡಳಿಯು ಅವಿರೋಧವಾಗಿ ಆಯ್ಕೆಯಾಗಲು ಶ್ರಮಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net