

ನಾಪೋಕ್ಲು: ಇಲ್ಲಿನ ಶ್ರೀರಾಮ ಟ್ರಸ್ಟ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ನಡೆದ ತಾಲೂಕು ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಗಳಲ್ಲಿ ವಿವಿಧ ಶಾಲೆಯ ವಿದ್ಯಾರ್ಥಿಗಳು ಜಿಲ್ಲಾಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
5-7 ತರಗತಿ ವಿಭಾಗದಲ್ಲಿ ಕನ್ನಡ ಕಂಠಪಾಠ ವಿಭಾಗದಲ್ಲಿ ಪೆರಾಜೆ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಪ್ರತೀಕ್, ಮಕ್ಕಂದೂರು ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ರಕ್ಷಾ ಹಾಗೂ ಎಕ್ಸೆಲ್ ಶಾಲೆಯ ಲಕ್ಷನ್ ಎಂ ಕ್ರಮವಾಗಿ ಪ್ರಥಮ ,ದ್ವಿತೀಯ,ತೃತೀಯ ಸ್ಥಾನ ಪಡೆದಿದ್ದಾರೆ. ಇಂಗ್ಲಿಷ್ ಕಂಠಪಾಠ ಸ್ಪರ್ಧೆಯಲ್ಲಿ ಬೆಟ್ಟಗೇರಿಯ ಉದಯ ಆಂಗ್ಲ ಮಾಧ್ಯಮ ಶಾಲೆಯ ನಿಹಾರಿಕಾ ಬಿ. ಪ್ರಥಮ , ಹಿಂದಿ ಕಂಠಪಾಠದಲ್ಲಿ ಚೆರಂಬಾಣೆಯ ಅರುಣ ಆಂಗ್ಲ ಮಾಧ್ಯಮ ಶಾಲೆಯ ಸಾನ್ವಿ ಪ್ರಥಮ, ಧಾರ್ಮಿಕ ಪಠಣ ಸ್ಪರ್ಧೆಯಲ್ಲಿ ಸಂಸ್ಕೃತದಲ್ಲಿ ಸಿದ್ದಾಪುರ ಬಿಜಿಎಸ್ ಪಬ್ಲಿಕ್ ಶಾಲೆಯ ಆದಿತ್ಯ ಭಟ್ ಪ್ರಥಮ, ಅರೇಬಿಕ್ ಧಾರ್ಮಿಕ ಪಠಣದಲ್ಲಿ ಕಕ್ಕಬೆ ಕೆಸಿಎಸ್ ಶಾಲೆಯ ಮಹಮ್ಮದ್ ಜಹೀರ್ ಪ್ರಥಮ ಸ್ಥಾನ ಪಡೆದಿದ್ದಾರೆ
ದೇಶಭಕ್ತಿ ಗೀತೆ ಸ್ಪರ್ಧೆಯಲ್ಲಿ ಅಮೆಚೂರು ಪೆರಾಜೆ ಸರ್ಕಾರಿ ಪ್ರಾಥಮಿಕ ಶಾಲೆಯ ರಿಷಿಕಾ ಪ್ರಥಮ, ಪ್ರಬಂಧ ಸ್ಪರ್ಧೆಯಲ್ಲಿ ಮಡಿಕೇರಿಯ ಸಂತ ಜೋಸೆಫರ ಪ್ರೌಢಶಾಲೆಯ ಸಮೃದ್ಧ ಕೆ.ಯು ಪ್ರಥಮ, ಕಥೆ ಹೇಳುವ ಸ್ಪರ್ಧೆಯಲ್ಲಿ ಮೂರ್ನಾಡು ಜ್ಞಾನಜ್ಯೋತಿ ವಿದ್ಯಾಸಂಸ್ಥೆಯ ನಿಹಾರಿಕ ಭಟ್ ಪ್ರಥಮ ಸ್ಥಾನವನ್ನು ಗಳಿಸಿದ್ದಾರೆ. ಚಿತ್ರಕಲಾ ಸ್ಪರ್ಧೆಯಲ್ಲಿ ಉದಯ ಆಂಗ್ಲ ಮಾಧ್ಯಮ ಶಾಲೆಯ ಎ. ಮಾನ್ವಿ ಪ್ರಥಮ, ಅಭಿನಯ ಗೀತೆ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಗಳಿಸಿದ್ದಾರೆ.
ಪ್ರೌಢಶಾಲಾ ವಿಭಾಗದ ಸ್ಪರ್ಧೆಗಳಲ್ಲಿ ಕನ್ನಡ ಭಾಷಣ ಸ್ಪರ್ಧೆಯಲ್ಲಿ ಚೆಟ್ಟಳ್ಳಿ ಪ್ರೌಢ ಶಾಲೆಯ ಲಕ್ಷ್ಮೀ ಪ್ರಥಮ, ಇಂಗ್ಲಿಷ್ ಭಾಷಣ ಸ್ಪರ್ಧೆಯಲ್ಲಿ ಮರ್ಕಜ್ ಪಬ್ಲಿಕ್ ಶಾಲೆಯ ಶಾಜಾ ಫಾತಿಮಾ ಪ್ರಥಮ, ಹಿಂದಿ ಭಾಷಣ ಸ್ಪರ್ಧೆಯಲ್ಲಿ ಮಡಿಕೇರಿ ಸಂತ ಮೈಕಲ್ ಪ್ರೌಢಶಾಲೆಯ ಅವನಿಕಾ ಪ್ರಥಮ, ಸಂಸ್ಕೃತ ಧಾರ್ಮಿಕ ಪಠಣದಲ್ಲಿ ಜ್ಞಾನಜ್ಯೋತಿ ಪ್ರೌಢಶಾಲೆಯ ಭೂಮಿಕಾ ಪ್ರಥಮ, ಸ್ಥಾನ ಗಳಿಸಿದರು. ಅರೇಬಿಕ್ ಧಾರ್ಮಿಕ ಪಠಣ (ಅರೇಬಿಕ್ ) ನಲ್ಲಿ ಕೊಟ್ಟ ಮುಡಿ ಮರ್ಕಜ್ ಶಾಲೆಯ ರಾಯಿಜ ಪ್ರಥಮ, ಜಾನಪದ ಗೀತೆ ಸ್ಪರ್ಧೆಯಲ್ಲಿ ಮಡಿಕೇರಿ ಸಂತಮೈಕೆಲರ ಪದವಿ ಪೂರ್ವ ಕಾಲೇಜಿನ ಸಂಧ್ಯಾ ಪ್ರಥಮ, ಭಾವಗೀತೆ ಸ್ಪರ್ಧೆಯಲ್ಲಿ ಮಡಿಕೇರಿ ಸಂತ ಜೋಸೆಫರ ಪ್ರೌಢಶಾಲೆಯ ಚಿನ್ನಮ್ಮ ಪ್ರಥಮ, ಭರತನಾಟ್ಯ ಸ್ಪರ್ಧೆಯಲ್ಲಿ ಸಂತ ಮೈಕಲ್ ಶಾಲೆಯ ಸಿಂಧು ಪ್ರಥಮ, ಚಿತ್ರಕಲಾ ಸ್ಪರ್ಧೆಯಲ್ಲಿ ಮೂರ್ನಾಡು ಸರ್ಕಾರಿ ಪ್ರೌಢಶಾಲೆಯ ತಸ್ಮಿಕ ಕಡಗದ ಶಾಲೆಯ ಲಕ್ಷ್ಮೀ ಪ್ರಥಮ, ಮಿಮಿಕ್ರಿ ಸ್ಪರ್ಧೆಯಲ್ಲಿ ಕಡಗದಾಳು ಸರ್ಕಾರಿ ಪ್ರೌಢಶಾಲೆಯ ನಿಶಾನ್, ಪ್ರಥಮ, ಚರ್ಚಾಸ್ಪರ್ಧೆಯಲ್ಲಿ ಪ್ರೌಢಶಾಲೆಯ ಕೃತಿಕಾ ಪ್ರಥಮ, ರಂಗೋಲಿ ಸ್ಪರ್ಧೆಯಲ್ಲಿ ಅಂಬೇಡ್ಕರ್ ವಸತಿ ಶಾಲೆಯ ವಿಲನ ಸರ್ಕಾರಿ ಪ್ರೌಢಶಾಲೆ ಚಂಬುವಿನ ವನಶ್ರೀ ಪ್ರಥಮ, ಆಶುಭಾಷಣ ಸ್ಪರ್ಧೆಯಲ್ಲಿ ಸಂತ ಮೈಕಲ್ ಪ್ರೌಢಶಾಲೆಯ ಹೃತ್ಪೂರ್ವಕ ಪ್ರಥಮ, ರಸಪ್ರಶ್ನೆ ಸ್ಪರ್ಧೆಯಲ್ಲಿ ನಾಪೋಕ್ಲು ವಿನ ಎಕ್ಸೆಲ್ ಸ್ಕೂಲ್ ಆಫ್ ಎಜುಕೇಶನ್ ಪ್ರಥಮ ಸ್ಥಾನವನ್ನು ಭಾಗಮಂಡಲ ಅಟಲ್ ಬಿಹಾರಿ ವಾಜಪೇಯಿ ವಸತಿ ಶಾಲೆಯ ತಂಡ ದ್ವಿತೀಯ ಸ್ಥಾನವನ್ನು ಗಳಿಸಿತು. ಶಾಲೆಯ ಸಿದ್ದಾಪುರ ಇಕ್ರ ಪಬ್ಲಿಕ್ ಶಾಲೆಯ ಸಲ್ಮಾನ್ ಫಾರಿಸ್, ಪಾರಾಣೆ ಪ್ರೌಢಶಾಲೆಯ ಸಿಯಾದ್ ಕ್ರಮವಾಗಿ ಪ್ರಥಮ ದ್ವಿತೀಯ ತೃತೀಯ ಸ್ಥಾನ ಗಳಿಸಿದರು. ಪ್ರಥಮ ಸ್ಥಾನ ಗಳಿಸಿದ ವಿದ್ಯಾರ್ಥಿಗಳು ಜಿಲ್ಲಾಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಗಳಲ್ಲಿ ಪಾಲ್ಗೊಳ್ಳಲಿದ್ದಾರೆ.