ಮಠ ಎಂದರೆ ಸರ್ವಾಂಗೀಣ ಪ್ರಗತಿ

DSC_389233333
Published on

ಚಿತ್ರದುರ್ಗ: ಮಠ ಎಂದರೆ ಪರಂಪರೆ,ತಾಯಿ,ಸರ್ವಾಂಗೀಣ ಪ್ರಗತಿ ಎಂದು ಶ್ರೀ ಮಡಿವಾಳ ಗುರುಪೀಠದ ಶ್ರೀ ಬಸವ ಮಾಚಿದೇವ ಸ್ವಾಮೀಜಿ ಹೇಳಿದರು. ಶ್ರೀ ಮರುಘಾಮಠದ ಅನುಭವ ಮಂಟಪದದಲ್ಲಿ ಬುಧವಾರ ಏರ್ಪಡಿಸಿದ್ದ ಸಾಮೂಹಿಕ ವಿವಾಹ ಕಾರ್ಯಕ್ರಮದ ಸ ಮ್ಮುಖ ವಹಿಸಿ ಮಾತನಾಡಿದ ಅವರು, ಮಠ ಮಾನ್ಯಗಳು ಜನಕಲ್ಯಾಣವನ್ನು ಬಯಸುತ್ತವೆ. ಮುರುಘಾ ಮಠ ಎಲ್ಲ ಶೋಷಿತ ಸಮು ದಾಯಗಳ ತಾಯಿ ಎಂದರೆ ತಪ್ಪಾಗದು.

ನಿರಂತರ 33 ವರ್ಷಗಳಿಂದ ಕಲ್ಯಾಣ ಮಹೋತ್ಸ ನಡೆಸುತ್ತಾ ಬಂದಿರುವುದು ಒಂದು ಹೆಮ್ಮೆ. ಕಾಯ ಅಳಿಯುವುದು ಕಾಯಕ ಅಳಿ ಯದೆಂಬುದನ್ನು ಗಮನಿಸಿದರೆ ಮುಂದಿನ ದಿನಗಳಲ್ಲಿ ಈ ಕಲ್ಯಾಣ ಮಹೋತ್ಸವದ ಕಾರ್ಯ ಯಾವುದೇ ಕಾರಣಕ್ಕೂ ನಶಿಸದು. ಇದು ಸಾಮಾಜಿಕ ಸಾಮರಸ್ಯ,ಆರ್ಥಿಕ ಸಮಾನತೆಯ ಮಾರ್ಗವೆಂದರು.

ದಾವಣಗೆರೆ ವಿರಕ್ತ ಮಠದ ಶ್ರೀ ಬಸವಪ್ರಭು ಸ್ವಾಮೀಜಿ ಮಾತನಾಡಿ,ಸಾಮೂಹಿಕ ಕಲ್ಯಾಣ ಮಹೋತ್ಸವ ಭಾವೈಕ್ಯತೆಯ ಕೇಂದ್ರವಾ ಗಿದೆ. ಬಡವರ ಪಾಲಿನ ಸಂಜೀವಿನಿ,ಇದರಿಂದ ಆರ್ಥಿಕ ಹೊರೆ ನಿಯಂತ್ರಿಸಬಹುದಾಗಿದೆ. ಅಂದಾಜು 20 ಸಾವಿರ ವಿವಾಹಗಳಾಗಿವೆ ಎಂ ದ ಅವರು,ಹೊಂದಾಣಿಕೆಯಿಂದ ಜೀವನವನ್ನು ಸಾಗಿಸುವಂತೆ ನವ ದಂಪತಿಗೆ ಸಲಹೆ ನೀಡಿದರು.

ಚಿದರವಳ್ಳಿ ಶ್ರೀ ಶಿದ್ದರಹಳ್ಳಿ ಪಾರಮಾರ್ಥ ಗವಿಮಠದ ಶ್ರೀ ಮಲ್ಲಿಕಾರ್ಜುನ ಸ್ವಾಮೀಜಿ ಮಾತನಾಡಿ,ಅನೇಕರು ಅರಮನೆ ಮೈದಾನ ದಲ್ಲಿ ಮದುವೆಯಾಗಬೇಕೆಂದು ಬಯಸುತ್ತಾರೆ. ತಾವು ಗುರುಮನೆಯಲ್ಲಿ ವಿವಾಹವಾಗುತ್ತಿದ್ದೀರಿ. ದುಂದುವೆಚ್ಚ ಕಡಿಮೆ ಮಾಡಲು ಶ್ರೀ ಮಠ ಸಾಮೂಹಿಕ ಕಲ್ಯಾಣ ಕಾರ್ಯಕ್ರಮ ನಿರಂತರ ನಡೆಸುತ್ತಾ ಬಂದಿದೆ ಎಂದರು.

ಹೆಬ್ಬಾಳ ಶ್ರೀ ವಿರಕ್ತಮಠದ ಮಹಾಂತ ರುದ್ರೇಶ್ವರ ಸ್ವಾಮೀಜಿ ನೇತೃತ್ವ ವಹಿಸಿದ್ದರು. ಶರಣಸಂಸ್ಕೃತಿ ಉತ್ಸವ ಸಮಿತಿ ಗೌರವಾಧ್ಯಕ್ಷ ವಿಜ ಯಪುರ ಶ್ರೀ ಗಾಣಿಗ ಗುರುಪೀಠದ ಡಾ.ಬಸವಕುಮಾರಸ್ವಾಮೀಜಿ,ಕಾರ್ಯಾಧ್ಯಕ್ಷ ಎಸ್.ಲಿಂಗಮೂರ್ತಿ,ಎಸ್‌ಜೆಎಂ ವಿದ್ಯಾಪೀಠದ ಕಾರ‌್ಯ ದರ್ಶಿ ಎಸ್.ಬಿ.ವಸ್ತ್ರಮಠ,ವಿವಿಧ ಶಾಖಾ ಮಠಾಧೀಶರು,ಹರಗುರುಚರಮೂರ್ತಿಗಳು ಮತ್ತಿತರರು ಇದ್ದರು. ಜಮುರಾ ಕಲಾ ವಿದರು ವಚನ ಪ್ರಾರ್ಥಿಸಿದರು. ಪ್ರಕಾಶದೇವರು ನಿರೂಪಿಸಿದರು. ಶ್ರೀ ಬಸವಲಿಂಗದೇವರು ಸ್ವಾಗತಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net