ಮಗುವಿಗೆ ಹಿಂದೂ ಸಂಪ್ರದಾಯದಂತೆ ನಾಮಕರಣ ಮಾಡಿ, ವಿಶೇಷ ಹೆಸರಿಟ್ಟ ಸೀಮಾ ಹೈದರ್! Seema Haider

Seema Haider 
Published on

Seema Haider   : ಭಾರತೀಯ ಮೂಲದ ಪ್ರೇಮಿಗಾಗಿ ಪಾಕಿಸ್ತಾನ ಬಿಟ್ಟು ಓಡಿ ಬಂದ ಸೀಮಾ ಹೈದರ್ ಮೊನ್ನೆಯಷ್ಟೇ  ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಈಗ ಅವರು ತಮ್ಮ ಮಗುವಿಗೆ ಭಾರ್ತಿ ಮೀನಾ ಎಂದು ಹೆಸರಿಟ್ಟಿದ್ದಾರೆ.

ಮಾರ್ಚ್ 18 ರಂದು ಸೀಮಾ ಗ್ರೇಟರ್ ನೋಯ್ಡಾದ ಆಸ್ಪತ್ರೆಯೊಂದರಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಈಗ ಮಗುವಿಗೆ  ನಾಮಕರಣ ಸಮಾರಂಭವೂ ನಡೆದಿದ್ದು, ರಬುಪುರ ಗ್ರಾಮದಲ್ಲಿ ಹಿಂದೂ ಸಂಪ್ರದಾಯಗಳಂತೆ ಹೆಣ್ಣು ಮಗುವಿಗೆ ನಾಮಕರಣ ಸಮಾರಂಭ ಆಚರಿಸಿ ಹೆಣ್ಣು ಮಗುವಿಗೆ ಭಾರ್ತಿ ಮೀನಾ ಎಂದು ಹೆಸರಿಡಲಾಯ್ತು. ಈ ಕಾರ್ಯಕ್ರಮದಲ್ಲಿ ಸುಪ್ರೀಂ ಕೋರ್ಟ್‌ನ ಹಿರಿಯ ವಕೀಲ ಎಪಿ ಸಿಂಗ್ ಕೂಡ ಉಪಸ್ಥಿತರಿದ್ದರು ಎಂದು ವರದಿಯಾಗಿದೆ.

ಶ್ರೀಕೃಷ್ಣನ ಭಕ್ತೆ ಮೀರಾ ಬಾಯಿ ಅವರಿಂದ ಪ್ರೇರಿತರಾಗಿ ತಮ್ಮ ಮಗಳಿಗೆ ಮೀರಾ ಅಥವಾ ಮೀರು ಎಂಬ ಅಡ್ಡಹೆಸರನ್ನು ಇಟ್ಟಿದ್ದೇನೆ ಎಂದು ಸೀಮಾ ಇದೇ ವೇಳೆ ಹೇಳಿಕೊಂಡಿದ್ದಾರೆ. ತನಗೆ ಹೆಣ್ಣು ಮಗುವಾದರೆ  ಮಗಳಿಗೆ ಮೀರಾ ಎಂದು ಹೆಸರಿಡಬೇಕೆಂದು ಮೊದಲಿನಿಂದಲೂ ಬಯಸುತ್ತಿದ್ದೆ ಎಂದು ಅವರು ಹೇಳಿಕೊಂಡಿದ್ದಾರೆ ಎಂದು ವರದಿಯಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net