

Seema Haider : ಪಹಲ್ಗಾಮ್ ಭಯೋತ್ಪಾದಕ ದಾಳಿಯ ನಂತರ ಭಾರತ ಪಾಕಿಸ್ತಾನದ ವಿರುದ್ಧ ಕಠಿಣ ಕ್ರಮ ಕೈಗೊಂಡಾಗ ಪಾಕ್ನಿಂದ ಭಾರತಕ್ಕೆ ಬಂದಿರುವ ಸೀಮಾ ಹೈದರ್ ಭಾರತವನ್ನು ತೊರೆಯಬೇಕಾಗುತ್ತದೆ ಎಂಬ ವರದಿಗಳು ಹೊರಬಿದ್ದವು. ಸೀಮಾ ಹೈದರ್ ಈ ಹಿಂದೆ ಭಾರತದಲ್ಲಿ ವಾಸಿಸಲು ಅವಕಾಶ ನೀಡಬೇಕು ಮತ್ತು ಪಾಕಿಸ್ತಾನದ ಮಗಳಾಗಿದ್ದ ಅವರು ಈಗ ಭಾರತದ ಸೊಸೆ ಎಂದು ಹೇಳಿದ್ದರು. ಈ ಕುರಿತಾಗಿ ಆಕೆ ಪರ ವಕೀಲರು ಕೂಡ ಮಾತನಾಡಿದ್ದಾರೆ.
ಸೀಮಾ ಹೈದರ್ 2023 ರಲ್ಲಿ ಭಾರತೀಯ ವ್ಯಕ್ತಿ ಸಚಿನ್ ಮೀನಾ ಅವರನ್ನು ಮದುವೆಯಾಗಲು ಪಾಕಿಸ್ತಾನವನ್ನು ತೊರೆದಾಗ ಸುದ್ದಿಯಾದರು. ಭಾರತೀಯ ವ್ಯಕ್ತಿಯನ್ನು ವಿವಾಹವಾಗಿರುವ ಸೀಮಾ, ತನ್ನ ನಾಲ್ವರು ಮಕ್ಕಳೊಂದಿಗೆ ನೇಪಾಳದ ಮೂಲಕ ಅಕ್ರಮವಾಗಿ ಭಾರತವನ್ನು ಪ್ರವೇಶಿಸಿದಳು. ಸೀಮಾ ಹೈದರ್ ಕರಾಚಿಯಲ್ಲಿರುವ ತನ್ನ ಮನೆಯನ್ನು ತೊರೆದು ಮೇ 2023 ರಲ್ಲಿ ಭಾರತಕ್ಕೆ ಬಂದರು. ಜುಲೈನಲ್ಲಿ, ಅಧಿಕಾರಿಗಳು ಅವರು ಉತ್ತರ ಪ್ರದೇಶದ ಗೌತಮ್ ಬುದ್ಧ ನಗರ ಜಿಲ್ಲೆಯ ರಬುಪುರ ಪ್ರದೇಶದಲ್ಲಿ ಮೀನಾ ಅವರೊಂದಿಗೆ ವಾಸಿಸುತ್ತಿರುವುದನ್ನು ಕಂಡುಕೊಂಡರು. 2019 ರಲ್ಲಿ ಆನ್‌ಲೈನ್ ಆಟಗಳನ್ನು ಆಡುವಾಗ ಇಬ್ಬರೂ ಭೇಟಿಯಾದರು ಮತ್ತು ನಂತರ ಪ್ರೀತಿಯಲ್ಲಿ ಬಿದ್ದೆವು ಎಂದು ಸೀಮಾ ಬಹಿರಂಗವಾಗಿ ಹೇಳಿದ್ದರು.
ಪಹಲ್ಗಾಮ್ ಭಯೋತ್ಪಾದಕ ದಾಳಿಯ ನಂತರ ಭಾರತ ಪಾಕಿಸ್ತಾನದ ವಿರುದ್ಧ ಕಠಿಣ ಕ್ರಮ ಕೈಗೊಂಡಾಗ ಪಾಕ್ನಿಂದ ಭಾರತಕ್ಕೆ ಬಂದಿರುವವರು ಭಾರತವನ್ನು ತೊರೆಯಬೇಕಾಗುತ್ತದೆ ಎನ್ನುವ ನಿಯಮವನ್ನು ತರಲಾಗಿತ್ತು. ಈ ವೇಳೆ ಸೀಮಾ ಹೈದರ್ ಹೆಸರೂ ಕೂಡಾ ಮುನ್ನೆಲೆಗೆ ಬಂದಿತ್ತು.
ಸನಾತನ ಧರ್ಮದ ಎಲ್ಲಾ ನಿಯಮಗಳು ಮತ್ತು ಪದ್ಧತಿಗಳಿಗೆ ಅನುಸಾರವಾಗಿ ಸೀಮಾ ಹಿಂದೂ ಧರ್ಮಕ್ಕೆ ಮತಾಂತರಗೊಂಡರು. ವಿವಾದ ತೀವ್ರಗೊಳ್ಳುತ್ತಿದ್ದಂತೆ ಪಾಕಿಸ್ತಾನಕ್ಕೆ ಹೋಗುವ ಆಸಕ್ತಿ ಇಲ್ಲ ಎಂದು ಅವರು ಹೇಳಿದರು. ಆಕೆ ಪ್ರಧಾನಿ ನರೇಂದ್ರ ಮೋದಿ ಮತ್ತು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು ಭಾರತದಲ್ಲಿ ಉಳಿಯಲು ಅವಕಾಶ ನೀಡುವಂತೆ ವಿನಂತಿಸುವ ವೀಡಿಯೊವನ್ನು ಪೋಸ್ಟ್ ಮಾಡಿದ್ದಳು.