

ಥಾಣೆ: ನವೀ ಮುಂಬೈನ ವಸತಿ ಸಮುಚ್ಚಯದ 40 ವರ್ಷದ ಸೆಕ್ಯುರಿಟಿ ಗಾರ್ಡ್ ಒಬ್ಬ, ತಾನು ಸಂಬಂಧ ಹೊಂದಿದ್ದ ವಿವಾಹಿತ ಮಹಿಳೆಯನ್ನು ಕೊಂದು ಶವವನ್ನು ಪೊದೆಗಳಲ್ಲಿ ಎಸೆದಿದ್ದಾನೆ ಎಂದು ಪೊಲೀಸರು ಗುರುವಾರ ಮಾಹಿತಿ ನೀಡಿದ್ದಾರೆ.
ಪೊಲೀಸರ ಪ್ರಕಾರ ಆರೋಪಿ ರಾಜ್ ಕುಮಾರ್ ಬಾಬುರಾಮ್ ಪಾಲ್ ನನ್ನು ಮಂಗಳವಾರ ಬಂಧಿಸಲಾಗಿದ್ದು, ತನ್ನನ್ನು ಮದುವೆಯಾಗುವಂತೆ ನಿರಂತರವಾಗಿ ಒತ್ತಾಯಿಸುತ್ತಿದ್ದ ಮಹಿಳೆಯಿಂದ ಮುಕ್ತಿ ಸಿಗಲಿ ಎಂದು ಆತ ಬಯಸಿದ್ದ.
ಫೆಬ್ರವರಿ 12ರಂದು ಥಾಣೆ ಜಿಲ್ಲೆಯ ನವಿ ಮುಂಬೈ ಪಟ್ಟಣದ ಕೊಪರ್ಖೈರ್ನೆ ಪ್ರದೇಶದ ಹೌಸಿಂಗ್ ಸೊಸೈಟಿಯ ಬಳಿಯ ಪೊದೆಗಳಲ್ಲಿ 35 ರಿಂದ 40 ವರ್ಷ ವಯಸ್ಸಿನ ಅಪರಿಚಿತ ಮಹಿಳೆಯ ಶವ ಪತ್ತೆಯಾಗಿದೆ ಎಂದು ಹಿರಿಯ ಪೊಲೀಸ್ ಇನ್ಸ್ಪೆಕ್ಟರ್ ವಿಶ್ವನಾಥ್ ಕೋಲೇಕರ್ ತಿಳಿಸಿದ್ದಾರೆ.
ಮಹಿಳೆಯನ್ನು ಶಾಲ್ ನಿಂದ (ಕುತ್ತಿಗೆಗೆ ಧರಿಸುವ ಉದ್ದನೆಯ ಬಟ್ಟೆಯ ತುಂಡು) ನಿಂದ ಉಸಿರುಗಟ್ಟಿಸಿ ಕೊಲೆ ಮಾಡಲಾಗಿದ್ದು ಸಾಕ್ಷ್ಯಗಳನ್ನು ನಾಶಪಡಿಸಲು ಶವವನ್ನು ಪೊದೆಗಳಲ್ಲಿ ಎಸೆಯಲಾಗಿದೆ ಎಂದು ಅವರು ಹೇಳಿದರು.
ಕೊಪರ್ಖೈರ್ನೆ ಪೊಲೀಸರು ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದು ಅಪರಿಚಿತ ವ್ಯಕ್ತಿಯ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 302 (ಕೊಲೆ) ಮತ್ತು 201 (ಅಪರಾಧದ ಪುರಾವೆಗಳು ಕಣ್ಮರೆಯಾಗಲು ಕಾರಣ) ಅಡಿಯಲ್ಲಿ ಪ್ರಕರಣ ದಾಖಲಿಸಿದ್ದರು.
ನಂತರ, ನವೀ ಮುಂಬೈ ಪೊಲೀಸರು ಶವವನ್ನು ಕಂಡುಹಿಡಿಯುವ ಬಗ್ಗೆ ಮಹಾರಾಷ್ಟ್ರದ ಎಲ್ಲಾ ಪೊಲೀಸ್ ಠಾಣೆಗಳಿಗೆ ಸಂದೇಶವನ್ನು ಕಳುಹಿಸಿದಾಗ ನೆರೆಯ ಮುಂಬೈನ ಟ್ರಾಂಬೆ ಪೊಲೀಸ್ ಠಾಣೆಯಲ್ಲಿ ಕಾಣೆಯಾದ ಮಹಿಳೆಯ ಪ್ರಕರಣ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.
ನವೀ ಮುಂಬೈನಲ್ಲಿ ಪತ್ತೆಯಾದ ಶವ ಮತ್ತು ಕಾಣೆಯಾದ ಮಹಿಳೆಯ ವಿವರಣೆ ಹೋಲಿಕೆಯಾದ ನಂತರ ಪೊಲೀಸರು ತಮ್ಮ ತನಿಖೆಯನ್ನು ತೀವ್ರಗೊಳಿಸಿದ್ದರು.
ಪೊಲೀಸರು ಕಾಣೆಯಾದ ಮಹಿಳೆಯ ಕುಟುಂಬ ಸದಸ್ಯರನ್ನು ವಿಚಾರಿಸಿದರು. ಈ ಸಂದರ್ಭ ಆಕೆಯ ಪತಿ, ಮುಂಬೈನ ಮಂಖುರ್ದ್ ಪ್ರದೇಶದಲ್ಲಿ ಕ್ಲೀನರ್ ಆಗಿ ಕೆಲಸ ಮಾಡುತ್ತಿದ್ದ ಆಕೆ ನಾಪತ್ತೆಯಾಗಿದ್ದಳು ಎಂದು ಪೊಲೀಸರಿಗೆ ತಿಳಿಸಿದ್ದಾನೆ.
ಪೊಲೀಸರು ನಂತರ ಸಂತ್ರಸ್ತೆಯ ಮೊಬೈಲ್ ಫೋನ್ ಅನ್ನು ಪಡೆದಾಗ ಆಕೆ ಭದ್ರತಾ ಸಿಬ್ಬಂದಿ ಪಾಲ್ ನನ್ನು ಪ್ರೀತಿಸುತ್ತಿದ್ದಳು ಎಂದು ತಿಳಿದುಬಂದಿದೆ. ಪಾಲ್ ನನ್ನು ಬಂಧಿಸಿದ ನಂತರ, ಆ ಮಹಿಳೆ ತನ್ನನ್ನು ಮದುವೆಯಾಗುವಂತೆ ಪದೇ ಪದೇ ಕೇಳುತ್ತಿದ್ದಳು ಎಂದು ವಿಚಾರಣೆಯ ಸಮಯದಲ್ಲಿ ಅವನು ಪೊಲೀಸರಿಗೆ ತಿಳಿಸಿದ್ದಾನೆ.
ನಿರಂತರ ಬೇಡಿಕೆಯಿಂದ ಬೇಸತ್ತ ಭದ್ರತಾ ಸಿಬ್ಬಂದಿ, ಅವಳನ್ನು ತೊಡೆದುಹಾಕಲು ನಿರ್ಧರಿಸಿದರು. ಅವನು ಆ ಮಹಿಳೆಯನ್ನು ತಾನು ಕೆಲಸ ಮಾಡುತ್ತಿದ್ದ ವಸತಿ ಸಂಕೀರ್ಣದ ಬಳಿಯ ಸ್ಥಳಕ್ಕೆ ಕರೆದು ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ನಂತರ ಆರೋಪಿ ಆ ಮಹಿಖೆಯ ಶವವನ್ನು ಹೌಸಿಂಗ್ ಸೊಸೈಟಿ ಬಳಿಯ ಪೊದೆಗಳಲ್ಲಿ ಎಸೆದಿದ್ದಾರೆ ಎಂದು ಅಧಿಕಾರಿ ಹೇಳಿದರು, ಪ್ರಕರಣದ ಬಗ್ಗೆ ಹೆಚ್ಚಿನ ತನಿಖೆ ನಡೆಯುತ್ತಿದೆ. (ಏಜೆನ್ಸೀಸ್)