

ಬೆಂಗಳೂರು: ಸಿಎಂ ಸಿದ್ದರಾಮಯ್ಯ ಅವರ 14ನೇ ಬಜೆಟ್ ಮಂಡನೆ ಮುಕ್ತಾಯವಾಗಿದೆ. ಸಿದ್ದರಾಮಯ್ಯ ಅವರು ಸುಮಾರು 2 ಗಂಟೆ 5೦ ನಿಮಿಷಗಳ ಕಾಲ ಸುಧೀರ್ಘವಾಗಿ ಬಜೆಟ್ ಮಂಡಿಸಿದ್ದು, ಸಿಎಂ ಬಜೆಟ್ ಮುಂಡನೆ ಮುಗಿಯತ್ತಿದ್ದ ಹಾಗೆ ಕಾಂಗ್ರೆಸ್ ಸದಸ್ಯರು ಮೇಜು ಕುಟ್ಟಿ ಸ್ವಾಗತ ವ್ಯಕ್ತಪಡಿಸಿದರು.
ಭದ್ರತಾ ಲೋಪ
ಬಜೆಟ್ ಮಂಡನೆ ವೇಳೆ ವಿಧಾನಸಭೆಯಲ್ಲಿ ಭದ್ರತಾ ಲೋಪ ಭದ್ರತಾ ಲೋಪವಾಗಿರುವುದು ಇದೀಗ ಬೆಳಕಿಗೆ ಬಂದಿದೆ. ಇಂದು ವಿಧಾನಸಭೆ ಪ್ರವೇಶ ಮಾಡಿರುವ ಅನಾಮಿಕ ವ್ಯಕ್ತಿ ಸುಮಾರು ಹದಿನೈದು ನಿಮಿಷಗಳ ಕಾಲ ಸದನದಲ್ಲಿ ಕುಳಿತುಕೊಂಡಿದ್ದಾರೆ.
ದೇವದುರ್ಗ ಶಾಸಕಿ ಕರೆಯಮ್ಮ ಜಾಗದಲ್ಲಿ ಈ ಅನಾಮಿಕ ವ್ಯಕ್ತಿ ಕೂತಿದ್ದು, ಇದನ್ನು ಗಮನಿಸಿದ ಗುರುಮಟ್ಕಲ್ ಶಾಸಕ ಶರಣ ಗೌಡ ಕುಂದಕೂರು ಸ್ಪೀಕರ್ ಗಮನಕ್ಕೆ ತಂದಿದ್ದಾರೆ. ಆದರೆ ಅಷ್ಟರ ಒಳಗೆ ಆ ಅನಾಮಿಕ ವ್ಯಕ್ತಿ ನಾಪತ್ತೆಯಾಗಿದ್ದಾರೆ.