

ವಾಷಿಂಗ್ಟನ್: ಆಯಿಲ್ ಟ್ಯಾಂಕರ್ವೊಂದು ಸ್ಫೋಟಗೊಂಡು ಚತುಷ್ಪಥ ಮೇಲ್ಸೇತುವೆಯ ಒಂದು ಭಾಗವೇ ಕುಸಿದು ಕೆಳಕ್ಕೆ ಬಿದ್ದ ಪ್ರಕರಣ ನಡೆದಿದೆ. ಅಮೆರಿಕದ ಫಿಲಡೆಲ್ಫಿಯಾದಲ್ಲಿ ಭಾನುವಾರ ಬೆಳಗ್ಗೆ ಈ ದುರ್ಘಟನೆ ಸಂಭವಿಸಿದೆ.
ಆಯಿಲ್ ಟ್ಯಾಂಕರ್ ಸ್ಫೋಟಗೊಂಡ ತೀವ್ರತೆಗೆ ಚತುಷ್ಪಥ ಮೇಲ್ಸೇತುವೆಯ ಲೇನ್ ಉದ್ದಕ್ಕೂ ಕುಸಿದು ಬಿದ್ದಿದೆ. ಆದರೆ ಈ ಸಂದರ್ಭದಲ್ಲಿ ಸಂಚಾರ ದಟ್ಟಣೆ ಇರದ್ದರಿಂದ ಅದೃಷ್ಟವಶಾತ್ ಯಾವುದೇ ಸಾವು-ನೋವು ಸಂಭವಿಸಿಲ್ಲ.
ಯುನೈಟೆಡ್ ಸ್ಟೇಟ್ಸ್ನ ಮೈನ್ ಮತ್ತು ಫ್ಲೋರಿಡಾಗೆ ಸಂಪರ್ಕಿಸುವ ನಾರ್ಥ್-ಸೌಥ್ ಹೆದ್ದಾರಿಯಲ್ಲಿ ಈ ದುರ್ಘಟನೆ ಸಂಭವಿಸಿದ್ದು, ಈ ಅವಘಡದ ಬಳಿಕ ರಸ್ತೆಯ ಎರಡೂ ಕಡೆಯಲ್ಲಿ ಸಂಚಾರ ಸ್ಥಗಿತಗೊಂಡಿತ್ತು. -ಏಜೆನ್ಸೀಸ್