ಪಿಯು ಕಾಲೇಜುಗಳ ಸಮಸ್ಯೆ ಬಗೆಹರಿಸುವಂತೆ ಮಾಧ್ಯಮಿಕ ಶಿಕ್ಷಕ ಸಂಘ ಮನವಿ

pu Director meet
Published on

ಬೆಂಗಳೂರು ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕ ಸಂಘದ ನಿಯೋಗವು ಮಂಗಳವಾರ ಪದವಿ ಪೂರ್ವ ಶಿಕ್ಷಣ ಇಲಾಖೆ ನಿರ್ದೇಶಕಿ ಸಿಂಧು ರೂಪೇಶ್ ಅವರನ್ನು ಭೇಟಿಯಾಗಿ ಪಿಯು ಕಾಲೇಜುಗಳ ಸಮಸ್ಯೆಗಳನ್ನು ಚರ್ಚಿಸಿದರು.

ಮಾನ್ಯತೆ ನವೀಕರಣ, ಅನುದಾನಿತ ಉಪನ್ಯಾಸಕರ ಕಾರ್ಯಭಾರ ಸರಿಪಡಿಸುವುದು, ಖಾಲಿ ಹುದ್ದೆಗಳ ಭರ್ತಿಗೆ ಅನುಮತಿ ನೀಡುವ ಬಗ್ಗೆ, ಅನುದಾನರಹಿತ ಕಾಲೇಜು ಗಳ ಸ್ಯಾಟ್ಸ್ ಪೋರ್ಟಲ್ ಚಾಲ್ತಿ ಮಾಡುವುದು, ದ್ವಿತೀಯ ಪಿಯುಸಿ 1,2,3 ಪರೀಕ್ಷೆ ನಡೆಯುವ ಪರೀಕ್ಷಾ ಕೇಂದ್ರಗಳಲ್ಲಿ ಪಾಠ ಬೋಧನೆಗೆ ಒತ್ತಡವಾಗುತ್ತಿದೆ. ತರಗತಿ ಗಳು ಸರಿಯಾಗಿ ನಡೆಯದಿದ್ದರೆ ಫಲಿತಾಂಶ ಕುಸಿತವಾಗಿವ ಸಮಸ್ಯೆಗಳ ಬಗ್ಗೆ ಸುದೀರ್ಘ ಸಭೆ ನಡೆಸಿ ಮನವಿ ಸಲ್ಲಿಸಲಾಯಿತು.

ಸಂಘದ ಅಖಿಲ ಭಾರತ ಸಹ ಸಂಘಟನಾ ಮಂತ್ರಿ ಲಕ್ಷ್ಮಣ್, ಕಾರ್ಯಾಧ್ಯಕ್ಷ ಅರುಣ್ ಶಹಾಪುರ, ಅಧ್ಯಕ್ಷ ಸಂದೀಪ ಬೂದಿಹಾಳ, ಉಪಾದ್ಯಕ್ಷ ಡಾ. ಶಿವಪೂಜಿ ಕೋಟಿ ನಿಯೋಗದಲ್ಲಿ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net