

ಮೈಸೂರು: ವಿಶ್ರಾಂತ ಕುಲಪತಿ ಹಾಗೂ ಹೆಸರಾಂತ ರಸಾಯನಶಾಸ್ತ್ರ ವಿಜ್ಞಾನಿ ಪ್ರೊ.ಕೆ.ಎಸ್.ರಂಗಪ್ಪ ಅವರನ್ನು ಜಪಾನ್ ದೇಶಕ್ಕೆ ಆಹ್ವಾನಿಸಲಾಗಿದ್ದು, ಅಲ್ಲಿ ವಿವಿಧ ಯೂನಿವರ್ಸಿಟಿಗಳಲ್ಲಿ ಮುಖ್ಯ ಭಾಷಣಕಾರರಾಗಿ ಭಾಗವಹಿಸಲಿದ್ದಾರೆ.
ಸೆ.7 ರಂದು ಜಪಾನಿನ ಫ್ರಾಂಟಿಯರ್ ರಿಸರ್ಚ್ ಸೆಂಟರ್ ಫಾರ್ ಅಡ್ವಾನ್ಸ್ಡ್ ಮೆಟೀರಿಯಲ್ ಮತ್ತು ಲೈಫ್ ಹೊಕ್ಕೈಡೋ ವಿವಿ ಯಲ್ಲಿನ ಅಡ್ವಾನ್ಸ್ಡ್ ಕೆಮಿಕಲ್ ಬಯಾಲಜಿ ಪ್ರಯೋಗಾಲಯದಲ್ಲಿ ‘ಕ್ಯಾನ್ಸರ್ ಚಿಕಿತ್ಸೆಯಲ್ಲಿ ಸಣ್ಣ ಅಣುಗಳು: ಡ್ರಗ್ ಅನ್ವೇಷಣೆಯಲ್ಲಿನ ಪ್ರಗತಿ’ ಕುರಿತು ರಂಗಪ್ಪ ಮುಖ್ಯ ಭಾಷಣ ಮಾಡಲಿದ್ದಾರೆ. ಸೆ. 9 ರಂದು ನಗೋಯಾದ ಮೆಜೊ ವಿವಿ ಫಾರ್ಮಸಿ ವಿಭಾಗದ ಪ್ಯಾಥೋ ಬಯೋಕೆಮಿಸ್ಟ್ರಿ ವಿಭಾಗದಲ್ಲಿ ವಿಶೇಷ ಉಪನ್ಯಾಸ ನೀಡಲಿದ್ದಾರೆ. ಬಳಿಕ ವಿವಿಧ ವಿಭಾಗದ ಡೀನ್, ಪ್ರಾಧ್ಯಾಪಕರು ಮತ್ತು ನಿರ್ದೇಶಕರೊಂದಿಗೆ ಸಂವಾದ ನಡೆಸಲಿದ್ದಾರೆ.