ಭರದಿಂದ ಸಾಗುತ್ತಿದೆ 'ಅಯಾಲನ್'; ಮತ್ತೊಂದು ಸೈನ್ಸ್​-ಫಿಕ್ಷನ್​ ಚಿತ್ರ ತೆರೆಗೆ ಬರಲು ಸಿದ್ಧ!

Untitled design - 2023-10-02T192307.705
Published on

ಆಂಧ್ರಪ್ರದೇಶ: ತಮಿಳು ನಟ ಶಿವ ಕಾರ್ತಿಕೇಯನ್ ಅಭಿನಯದ ಸೈನ್ಸ್​-ಫಿಕ್ಷನ್​ ಜಾನರ್​ನ 'ಅಯಾಲನ್' ಸಿನಿಮಾವನ್ನು​ ಶೀಘ್ರವೇ ತೆರೆ ಮೇಲೆ ತರಲು ಸಕಲ ಸಿದ್ಧತೆಗಳು ನಡೆಯುತ್ತಿದ್ದು, ಸದ್ಯ ಚಿತ್ರದ ಟೀಸರ್​ ಮೇಲೆ ಸಿನಿಪ್ರೇಕ್ಷಕರ ಚಿತ್ತ ಮೂಡಿದೆ.

ನಿರ್ದೇಶಕ ರವಿಕುಮಾರ್ ನಿರ್ದೇಶನದಲ್ಲಿ ಮೂಡಿಬಂದಿರುವ ಈ ಚಿತ್ರವು 2024ರ ಸಂಕ್ರಾಂತಿ ಹಬ್ಬದಂದು ಬಿಡುಗಡೆಗೊಳ್ಳಲಿದೆ ಎಂದು ಈಗಾಗಲೇ ಮಾಹಿತಿ ನೀಡಿರುವ ಚಿತ್ರದ ನಿರ್ಮಾಪಕರು, ಶಿವ ಕಾರ್ತಿಕೆಯನ್​ ಅವರೊಟ್ಟಿಗೆ ಸಿನಿಮಾದ ವಿಎಫ್​ಎಕ್ಸ್​ ಕೆಲಸಗಳಲ್ಲಿ ಬ್ಯುಸಿಯಾಗಿದ್ದಾರೆ.

ಸಂಗೀತ ಮಾಂತ್ರಿಕ ಎ.ಆರ್. ರೆಹಮಾನ್ ಅವರ ಸ್ಟುಡಿಯೋದಲ್ಲಿ ಸಿನಿಮಾದ ಕೆಲಸಗಳು ಭರದಿಂದ ಸಾಗುತ್ತಿರುವ ಫೋಟೋವೊಂದನ್ನು ನಟ ತಮ್ಮ ಸಾಮಾಜಿಕ ಜಾಲತಾಣದ ಖಾತೆಯಲ್ಲಿ ಪೋಸ್ಟ್​ ಮಾಡಿ, ಚಿತ್ರದ ಟೀಸರ್​ ಅಕ್ಟೋಬರ್​ 06 ರಂದು ಬಿಡುಗಡೆಯಾಗಲಿದೆ ಎಂದು ಬರೆದುಕೊಂಡಿದ್ದಾರೆ.

ಸೈನ್ಸ್​-ಫಿಕ್ಷನ್​ ಎಂದು ಹೇಳಲಾದ ಈ ಚಿತ್ರದಲ್ಲಿ ಅನ್ಯಗ್ರಹ ಜೀವಿಯಾದ ಏಲಿಯನ್​ ಕೂಡ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿರುವುದು ಗಮನಾರ್ಹ. ಚಿತ್ರದಲ್ಲಿ ಶಿವಕಾರ್ತಿಕೇಯನ್, ರಾಕುಲ್ ಪ್ರೀತ್ ಸಿಂಗ್, ಶರದ್ ಕೇಳ್ಕರ್, ಇಶಾ ಕೊಪ್ಪಿಕರ್, ಭಾನು ಪ್ರಿಯಾ, ಯೋಗಿ ಬಾಬು ಮುಂತಾದವರ ತಾರಾಗಣವಿದೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net