'ಹಾಲು ತಾರೋ ತಿಮ್ಮ..ಕಲೆಕ್ಷನ್ ಮಾಡೋ ತಿಮ್ಮ' ಎಂದು ಡಿಕೆಶಿ ಬಾಲಕನಂತಿರುವ ವಿಡಿಯೋ ರಿಲೀಸ್‘; ಬಿಜೆಪಿಯಿಂದ ವಿನೂತನ ಪ್ರತಿಭಟನೆ..DK Shivakumar

ಸಿಎಂ ಡಿಕೆ ಶಿವಕುಮಾರ್​ನನ್ನು ಶಾಲಾ ಬಾಲಕನಂತೆ ಎಐನಿಂದ ವಿಡಿಯೋ ಕ್ರಿಯೇಟ್ ಮಾಡಿದ ಬಿಜೆಪಿ
ಸಿಎಂ ಡಿಕೆ ಶಿವಕುಮಾರ್​ನನ್ನು ಶಾಲಾ ಬಾಲಕನಂತೆ ಎಐನಿಂದ ವಿಡಿಯೋ ಕ್ರಿಯೇಟ್ ಮಾಡಿದ ಬಿಜೆಪಿ
Published on: 
  • ಅಗತ್ಯ ವಸ್ತುಗಳ ಏರಿಕೆ ಬೆನ್ನಲ್ಲೇ ಹಾಲು, ತುಪ್ಪ, ಮೊಸರಿನ ಬೆಲೆಯಲ್ಲಿ ಏರಿಕೆ.

  • ಬಸ್​ ಪ್ರಯಾಣದ ಟಿಕೆಟ್​ ಮೇಲೂ ದರ ಏರಿಸಿದ ಕಾಂಗ್ರಸ್​ ಸರ್ಕಾರ.

  • ಗಾಯದ ಮೇಲೆ ಬರೆ ಹಾಕುತ್ತಿರುವ ಸರ್ಕಾರದ ವಿರುದ್ಧ ಬಿಜೆಪಿ ವಿನೂತನ ಪ್ರತಿಭಟನೆ.

ಬೆಂಗಳೂರು: ದೀಪಾವಳಿ ಹಬ್ಬದ ಸಂಭ್ರಮದಲ್ಲೇ ಕರ್ನಾಟಕ ಕಾಂಗ್ರೆಸ್ ಸರ್ಕಾರ ಹಾಲು ಮತ್ತು ಬಸ್​​ ಪ್ರಯಾಣದ ಟಿಕೆಟ್​ ದರ ಏರಿಕೆ ಮಾಡಿದೆ. ಒಂದೆಡೆ ಜನರು ಗ್ಯಾರಂಟಿ ಆಸೆ ತೋರಿಸಿದ ಸರ್ಕಾರಕ್ಕೆ ಹಿಡಿ ಶಾಪ ಹಾಕುತ್ತಿದ್ದರೆ, ಮತ್ತೊಂದು ಕಡೆ, ಬಿಜೆಪಿಯು ಸೋಶಿಯಲ್​​ ಮೀಡಿಯಾದಲ್ಲಿ ಸಿಎಂ ಡಿಕೆ ಶಿವಕುಮಾರ್ ಅವರನ್ನು ಗುರಿಯಾಗಿಟ್ಟುಕೊಂಡು, ಎಐ ಸಹಾಯದಿಂದ ವಿಡಂಬನಾತ್ಮಕ ವಿಡಿಯೋ ಹಂಚಿಕೊಂಡಿರುವುದು ವೈರಲ್ ಆಗಿದೆ.

ಸದ್ಯ ಇನ್​ಸ್ಟಾಗ್ರಾಮ್​ ಹಾಗೂ ವಿವಿಧ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ 38 ಸೆಕೆಂಡುಗಳ ವಿಡಿಯೋ ಪ್ರಕಾರ, ಸಿಎಂ ಡಿಕೆ ಶಿವಕುಮಾರ್ ಶಾಲೆಗೆ ಹೋಗುವ ತಿಮ್ಮನಾಗಿದ್ದಾರೆ. ಶಾಲಾ ಬಟ್ಟೆ ಧರಿಸಿ. ಅಮ್ಮ ಏನೇ ಹೇಳಿದರೂ ಅದಕ್ಕೊಂದು ಸಬೂಬು ಹೇಳುವ ತಿಮ್ಮನಂತೆ ನಟಿಸಿರುವ ವಿಡಿಯೋ ಸದ್ದು ಮಾಡುತ್ತಿದೆ.

Also Read
ರಾಜ್ಯದ ಜನತೆಗೆ ಬೆಲೆ ಏರಿಕೆ ಶಾಕ್​: ನಂದಿನಿ ಹಾಲಿನ ದರ ಲೀಟರ್‌ಗೆ 8 ರೂ. ಹೆಚ್ಚಳ, ನ. 1ರಿಂದಲೇ ಜಾರಿ! Nandini Milk Price Hiked
ಸಿಎಂ ಡಿಕೆ ಶಿವಕುಮಾರ್​ನನ್ನು ಶಾಲಾ ಬಾಲಕನಂತೆ ಎಐನಿಂದ ವಿಡಿಯೋ ಕ್ರಿಯೇಟ್ ಮಾಡಿದ ಬಿಜೆಪಿ

ಏನಿದೆ ವಿಡಿಯೋದಲ್ಲಿ?

ತೋಟಕೆ ಹೋಗೋ ತಿಮ್ಮ ಎನ್ನುವ ಜಾನಪದ ಶಿಶು ಗೀತೆಯನ್ನು ಬಳಕೆ ಮಾಡಿಕೊಂಡು ಬಿಜೆಪಿ ಎಐ ವಿಡಿಯೋ ಕ್ರಿಯೇಟ್ ಮಾಡಿದೆ. ತೋಟಕೆ ಹೋಗೋ ತಿಮ್ಮ, ನೀರು ಸೇದೋ ತಿಮ್ಮನ ಬದಲಾಗಿ, ಹಾಲು, ಬಸ್ ಟಿಕೆಟ್, ವಿದ್ಯುತ್ ಬಿಲ್ ಸೇರಿದಂತೆ ಇನ್ನಿತರ ಸಮಸ್ಯೆ ಬಗ್ಗೆ ಉಲ್ಲೇಖಿಸಿದೆ.

' ಹಾಲು ತಾರೋ ತಿಮ್ಮ' ಎಂದರೆ, 'ಹಾಲಿನ ರೇಟ್ ಜಾಸ್ತಿ' ಎಂದು, 'ಫ್ಯಾನು ಹಾಕೋ ತಿಮ್ಮ'..'ಕರೆಂಟ್ ಬಿಲ್ ಜಾಸ್ತಿ ಅಮ್ಮ'. 'ಬಸ್ ಹತ್ತೋ ತಿಮ್ಮ', 'ಬಸ್ ರೇಟ್ ಜಾಸ್ತಿ', 'ಸೈಟ್ ತಗೋ' ಎಂದರೆ, 'ರಿಜಿಸ್ಟ್ರೇಷನ್​ ಫೀಜ್ ಜಾಸ್ತಿ' ಎನ್ನುವುದನ್ನು ಇಲ್ಲಿ ಉಲ್ಲೇಖಿಸಲಾಗಿದೆ. ಇದರೊಂದಿಗೆ, ನೀರಿನ ದರ ಹೆಚ್ಚು, ರಸ್ತೆ ದುರಸ್ತಿ ಎಂದರೆ ಖಜಾನಿ ಖಾಲಿ ಎಂದು ವ್ಯಂಗ್ಯ ಮಾಡಿದೆ. ಕೊನೆಯಲ್ಲಿ ಕಲೆಕ್ಷನ್​ ಮಾಡೋ ತಿಮ್ಮ ಎಂದಾಗ ಓಡಿ ಬರ್ತೀನಿ ಎಂದು ವ್ಯಂಗ್ಯವಾಗಿ ಚಿತ್ರೀಕರಿಸಲಾಗಿದೆ.

ಭಾರಿ ವೈರಲ್ ಆದ ಎಐ ವಿಡಿಯೋ

ಒಟ್ಟಾರೆಯಾಗಿ ಕರ್ನಾಟಕ ಬಿಜೆಪಿಯು, ಕಾಂಗ್ರೆಸ್ ಸರ್ಕಾರ ಆಡಳಿತ ಚುಕ್ಕಾಣಿ ಹಿಡಿದಾಗಿನಿಂದ ಜನ ಅನುಭವಿಸುತ್ತಿರುವ ಸಮಸ್ಯೆಗಳ ಬಗ್ಗೆ ಕ್ರಿಯೇಟಿವ್ ಆಗಿ ಅನಾವರಣಗೊಳಿಸಲಾಗಿದೆ. ಈ ವಿನೂತನ ವ್ಯಂಗ್ಯ ವಿಡಿಯೋಗೆ ಸಾಕಷ್ಟು ಕಾಮೆಂಟ್​ಗಳು ಬಂದಿವೆ. 1 ಲಕ್ಷದ 44 ಸಾವಿರ ವೀಕ್ಷಣೆಗಳಿಸಿದೆ. 1 ಲಕ್ಷದ 70 ಸಾವಿರ ಜನರು ಇದನ್ನು ಶೇರ್​ ಮಾಡಿಕೊಂಡಿದ್ದಾರೆ.

ನೆಟ್ಟಿಗರು ಏನಂದ್ರು?

ಬಿಜೆಪಿ ಹಂಚಿಕೊಂಡಿರುವ ಈ ವಿಡಿಯೋ ಸಾಕಷ್ಟು ಜನರು ಕಾಮೆಂಟ್ ಮಾಡಿದ್ದು, ಮುಂದಿನ ವರ್ಷ ಈ ಕಾಂಗ್ರೆಸ್ ಅಧಿಕಾರಕ್ಕೆ ಬರೋದು ಬೇಡ. ಕನ್ನಡ ನಾಡು ಹಾಳಾಗಿ ಹೋಗೋದು ಗ್ಯಾರಂಟಿ ಎಂದಿದ್ದಾರೆ. ಮತ್ತೊಬ್ಬರು ಲೂಟಿ ಮಾಡೋ ತಿಮ್ಮಾ..ಈಗಾಗಲೇ ಮಾಡ್ತಿದ್ದೀನಮ್ಮ ಎಂದು ಲೇವಡಿ ಮಾಡಿದ್ದಾರೆ. ಈ ವರ್ಷದ ಒಳ್ಳೆಯ ವಿಡಿಯೋ ಇದು ಎಂದು ಪ್ರಶಂಸಿಸಿದ್ದಾರೆ. ಇನ್ನೂ ಕೆಲವರು ಕೇಂದ್ರ ಸರ್ಕಾರದ ಬೆಲೆ ಏರಿಕೆ ಕುರಿತು ಆಕ್ಷೇಪ ವ್ಯಕ್ತಪಡಿಸಿದ್ದಾರೆ, (ಏಜೆನ್ಸೀಸ್).