ಬೈಲಕುಪ್ಪೆ : ಸರ್ಕಾರಿ ಶಾಲೆಗೆ ಮಕ್ಕಳನ್ನು ಸೇರಿಸಲು ಪಾಲಕರು ಮುಂದಾಗಬೇಕು ಎಂದು ತಿರುಮಲಾಪುರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮುಖ್ಯ ಶಿಕ್ಷಕ ಮಂಜು ಹೇಳಿದರು. ಪಿರಿಯಾಪಟ್ಟಣ ತಾಲೂಕಿನ ಬೈಲಕುಪ್ಪೆ. ಗ್ರಾಮ ಪಂಚಾಯಿತಿ ವ್ಯಾಪ್ತಿಯ ತಿರುಮಲಪುರ ಗ್ರಾಮದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ದಾಖಲಾತಿ ಆಂದೋಲನ ಜಾಥಾದಲ್ಲಿ ಅವರು ಮಾತನಾಡಿದರು. ಸರ್ಕಾರಿ ಶಾಲೆಯಲ್ಲಿ ಮಕ್ಕಳಿಗೆ ಗುಣಾತ್ಮಕ ಶಿಕ್ಷಣ ದೊರಕುತ್ತಿದೆ. ಜ್ಞಾನ ಸಂಪಾದನೆಗೆ ಇದು ಉತ್ತಮವಾದ ಆಯ್ಕೆ ಎಂದರು. ಸರ್ಕಾರಿ ಶಾಲೆ ಬಗ್ಗೆ ಪಾಲಕರು ಉತ್ತಮ ಭಾವನೆ ರೂಢಿಸಿಕೊಂಡು, ಅಕ್ಕಪಕ್ಕದ ಮನೆಗಳ ಪಾಲಕರಿಗೂ ಪ್ರೇರಣೆ ನೀಡಬೇಕು. ನಮ್ಮ ವ್ಯವಸ್ಥೆಯಲ್ಲಿ ಉತ್ತಮ ಶಿಕ್ಷಕರಿದ್ದಾರೆ. ಮಕ್ಕಳಿಗೆ ಅನೇಕ ಸವಲತ್ತುಗಳೂ ದೊರಕಲಿವೆ ಎಂದರು. ರೋಟರಿ ಮಿಡ್ ಟೌನ್ ಸಂಸ್ಥೆ ಅಧ್ಯಕ್ಷ ತಿರುಮಲಾಪುರ ರಾಜೇಗೌಡ. ಜಿಲ್ಲಾ ವಲಯ ಸಹಾಯಕ ಪ್ರಾಂತಪಾಲ ಸತ್ಯನಾರಾಯಣ ಹೆಗಡೆ, ಬೈಲಕುಪ್ಪೆ ಗ್ರಾಮ ಪಂಚಾಯತಿ ಸದಸ್ಯ ರಾಜು, ಮುಖಂಡರಾದ ವೆಂಕಟೇಶ್, ಪರಮೇಶ ಗೌಡ, ಜಗನ್, ತಿಲಕ್, ಪ್ರತಾಪ ಗೌಡ, ರಂಜಿತ್, ರೂಪಾ ಇತರರು ಇದ್ದರು.