ಶಾಲೆ ಆರಂಭ ಸ್ವಾಗತ, ಶೈಕ್ಷಣಿಕ ವೇಳಾಪಟ್ಟಿ, ಪಠ್ಯಕ್ರಮ ಬಿಡುಗಡೆ ಒತ್ತಾಯ

kids in classroom
Published on

ಬೆಂಗಳೂರು

ಎಸ್ಸೆಸ್ಸೆಲ್ಸಿ ಮತ್ತು ದ್ವೀತಿಯ ಪಿಯುಸಿ ತರಗತಿಗಳನ್ನು ಆರಂಭಿಸಲು ಸರ್ಕಾರ ನಿರ್ಧಾರ ಮಾಡಿರುವುದನ್ನು ಖಾಸಗಿ ಶಾಲಾ ಆಡಳಿತ ಮಂಡಳಿ ಮತ್ತು ಸರ್ಕಾರದ ಉಪನ್ಯಾಸಕರ ಸಂ ಸ್ವಾಗತಿಸಿದೆ.

ಆದರೆ, ಸಾಧ್ಯವಾದಷ್ಟು ಬೇಗ ಪಠ್ಯಕ್ರಮ, ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿಯ ಮಾದರಿ ಪ್ರಶ್ನೆ ಪತ್ರಿಕೆಗಳನ್ನು ಬಿಡುಗಡೆ ಮಾಡಿ ಬೋಧಿಸುವ ಶಿಕ್ಷಕರು, ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿಕೊಡಬೇಕೆಂದು ಮನವಿ ಮಾಡಿವೆ.

ನಾವು ಈಗಾಗಲೇ ಸರ್ಕಾರಿ, ಅನುದಾನಿತ ಮತ್ತು ಖಾಸಗಿ ಶಾಲೆಗಳಿಗೆ ಪ್ರತ್ಯೇಕವಾದ ಪ್ರಮಾಣಿತ ಕಾರ್ಯಚರಣಾ ವಿಧಾನ(ಎಸ್​ಒಪಿ) ಬಿಡುಗಡೆ ಮಾಡುವಂತೆ ಮನವಿ ಮಾಡಿದ್ದೇವೆ. ಹೆಚ್ಚು ಮಕ್ಕಳಿರುವ ಶಾಲೆ, ಕಡಿಮೆ ಮಕ್ಕಳಿರುವ ಶಾಲೆಗಳಲ್ಲಿ ಏನೆಲ್ಲಾ ನಿಯಮಗಳನ್ನು ಅನಸರಿಸಬೇಕು?, ಸಾರಿಗೆ ವ್ಯವಸ್ಥೆ ಹೇಗೆ ಎಂಬ ವಿಚಾರವನ್ನು ಸ್ಪಷ್ಟಪಡಿಸಬೇಕೆಂದು ಖಾಸಗಿ ಪ್ರಾಥಮಿಕ ಮತ್ತು ಪ್ರೌಢಶಾಲಾ ಆಡಳಿತ ಮಂಡಳಿಗಳ ಒಕ್ಕೂಟ(ಕ್ಯಾಮ್ಸ್​) ಪ್ರಧಾನ ಕಾರ್ಯದರ್ಶಿ ಡಿ.ಶಶಿಕುಮಾರ್​ ಸರ್ಕಾರವನ್ನು ಆಗ್ರಹಿಸಿದ್ದಾರೆ.

ಶಾಲೆ ಆರಂಭಿಸುತ್ತಿರುವುದು ಒಳ್ಳೆಯ ವಿಚಾರ. ಆದರೆ, ಮಕ್ಕಳ ಹಿತದೃಷ್ಟಿಯಿಂದ ಪಠ್ಯಕ್ರಮವನ್ನು ಕಡಿತ ಮಾಡಿ ಪರಿಷ್ಕರಿಸಿದ ಪಠ್ಯಕ್ರಮದ ಮಾಹಿತಿಯನ್ನು ಸಾಧ್ಯವಾದಷ್ಟು ಬೇಗ ಬಿಡುಗಡೆ ಮಾಡಬೇಕು. ಶಾಲೆ ಆರಂಭದ ದಿನಾಂಕವನ್ನು ಮಾತ್ರ ಘೋಷಿಸಿರುವ ಸರ್ಕಾರ ಇದರ ಜಗೆಗೆ ಶೈಕ್ಷಣಿಕ ವೇಳಾಪಟ್ಟಿ, ಮಾದರಿ ಪ್ರಶ್ನೆ ಪತ್ರಿಕೆಯನ್ನು ಬಿಡುಗಡೆ ಮಾಡಬೇಕು ಎಂದು

ಮಾನ್ಯತೆ ಪಡೆದ ಅನುದಾನ ರಹಿತ ಖಾಸಗಿ ಶಾಲೆಗಳ ಸಂ(ರುಪ್ಸಾ) ಅಧ್ಯಕ್ಷ ಲೋಕೇಶ್​ ತಾಳಿಕೋಟೆ ಒತ್ತಾಯಿಸಿದ್ದಾರೆ.

ಅಲ್ಲದೆ, ಶಿಕ್ಷಕರ ಬೇಡಿಕೆಗಳನ್ನು ಚರ್ಚಿಸಿ ಮುಂದಿನ ಹೋರಾಟದ ಬಗ್ಗೆ ನಿರ್ಧಾರ ಮಾಡಲು ಡಿ.20ರಂದು ಸಭೆ ಕರೆದಿದೆ. "ಶಾಲೆಗಳ ಸವಾಲುಗಳು ಮತ್ತು ಪರಿಹಾರ' ಎಂಬ ಒಂದು ದಿನದ ಸ್ನೇಹ ಸಮ್ಮಿಲನ ಕಾರ್ಯಕ್ರಮ ಆಯೋಜಿಸಿದ್ದೇವೆ. ಶಾಲೆ ಆರಂಭವಾಗುವ ಮೊದಲೇ ನಮ್ಮ ಸಮಸ್ಯೆಗೆ ಪರಿಹಾರ ಕಲ್ಪಿಸಬೇಕೆಂದು ತಾಳಿಕೋಟೆ ತಿಳಿಸಿದ್ದಾರೆ.

ಕೋಟ್​..

ಶಾಲಾ&ಕಾಲೇಜು ಆರಂಭವಾಗುವುದು ಸ್ವಾಗತರ್ಹ. ಇಲ್ಲವಾದರೆ, ಬಾಲ್ಯ ವಿವಾಹ, ಬಾಲ ಕಾರ್ಮಿಕರ ಸಮಸ್ಯೆ ಹೆಚ್ಚಾಗುತ್ತದೆ. ಉಪನ್ಯಾಸಕರು ವಿದ್ಯಾರ್ಥಿಗಳನ್ನು ಪರೀೆ ಸಿದ್ಧಪಡಿಸಬೇಕು.

>ಎ.ಎಚ್​.ನಿಂಗೇಗೌಡ, ಅಧ್ಯಕ್ಷ, ರಾಜ್ಯ ಸರ್ಕಾರಿ ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರ ಸಂ

ಇಂದು ಪ್ರತಿಭಟನೆ

ಬಾಕ್ಸ್​

ಖಾಸಗಿ ಶಾಲೆಗಳು ಆನ್​ಲೈನ್​ ತರಗತಿ ಬಂದ್​ ಮಾಡುತ್ತಿರುವುದು ಮತ್ತು ಶುಲ್ಕ ಕೇಳುತ್ತಿರುವುದನ್ನು ವಿರೋಧಿಸಿ ವಾಯ್ಸ್​ ಆ್​ ಪೇರೆಂಟ್ಸ್​ ಹಾಗೂ ಆರ್​ಟಿಇ ಸ್ಥೂಪ ಸಂಟನೆ ಡಿ.20 ಬೆಳಗ್ಗೆ 10ಗಂಟೆಗೆ ಮೈಸೂರು ಬ್ಯಾಂಕ್​ ವೃತ್ತದಲ್ಲಿ ಪ್ರತಿಭಟನೆ ನಡೆಸಲು ನಿರ್ಧರಿಸಿವೆ.

ಹೆಚ್ಚಿನ ಸಂಖ್ಯೆಯಲ್ಲಿ ಪಾಲಕರು ಭಾಗವಹಿಸುವ ಮೂಲಕ ಪ್ರತಿಭಟನೆ ಯಶಸ್ಸಿಗೊಳಿಸಿ ಸರ್ಕಾರದ ಗಮನ ಸೆಳೆಯಲು ಅನುಕೂಲ ಮಾಡಿಕೊಡುವಂತೆ ಸಂವು ಮನವಿ ಮಾಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net