

ಬೆಂಗಳೂರು
ಕರೊನಾ ಸೋಂಕಿನ ಪ್ರಮಾಣ ತಗ್ಗುತ್ತಿದ್ದು, ಎರಡನೇ ಅಲೆಯ ಯಾವುದೇ ಲಕ್ಷಣ ಕಂಡು ಬಾರದೇ ಇರುವುದರಿಂದ ಜನವರಿ 1ರಿಂದಲೇ ವಿದ್ಯಾಗಮ ಜತೆಗೆ 10 ಮತ್ತು ದ್ವೀತಿಯ ಪಿಯು ತರಗತಿಗಳು ಹಾಗೂ ಜ.15ರಿಂದ 9 ಹಾಗೂ ಪ್ರಥಮ ಪಿಯು ತರಗತಿಗಳು ಪ್ರಾರಂಭವಾಗಲಿವೆ.
10 ಮತ್ತು ದ್ವೀತಿಯ ಪಿಯು ವಿದ್ಯಾರ್ಥಿಗಳಿಗೆ ಬೋರ್ಡ್ ಪರೀೆಗಳು ಇರುವುದರಿಂದ ವಿದ್ಯಾರ್ಥಿಗಳ ಉನ್ನತ ಅಭ್ಯಾಸ ಹಾಗೂ ಭವಿಷ್ಯದ ದೃಷ್ಟಿಯಿಂದ ಈ ಎರಡು ತರಗತಿಗಳು ಪ್ರಮುಖ ಸ್ಥಾನವಹಿಸಿವೆ. ಆ ತರಗತಿಗಳು ಆರಂಭವಾದ 15 ದಿನಗಳ ನಂತರ 9 ಹಾಗೂ 11ನೇ ತರಗತಿಗಳು ಸಹ ಆರಂಭವಾಗಲಿವೆ. ಈ ಎಲ್ಲ ತರಗತಿಗಳನ್ನು ಆರಂಭಿಸುವುದಕ್ಕೆ ಅನುಮತಿ ನೀಡುವುದು ಸೂಕ್ತವೆಂದು ಕರೊನಾ ಸಲಹಾ ಸಮಿತಿ ಸರ್ಕಾರಕ್ಕೆ ವರದಿ ನೀಡಿದೆ.
ಇದರ ಬಗ್ಗೆ ಚರ್ಚಿಸಲು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ಅವರು ಮುಖ್ಯಮಂತ್ರಿಗಳ ಸಮಯ ಕೇಳಿದ್ದು, ಆನಂತರ ಸಿಎಂ ನಿರ್ಧಾರವನ್ನು ಪ್ರಕಟಿಸಲಿದ್ದಾರೆ. ಶಾಲೆ ಆರಂಭಕ್ಕೆ ಸಿಎಂ ಒಪ್ಪಿಗೆ ಸೂಚಿಸುವುದು ಬಹುತೇಕ ಖಚಿತವಾಗಿದೆ.
ಸಮಿತಿ ಸಭೆ: ಕರೊನಾ ತಾಂತ್ರಿಕ ಮತ್ತು ಸಲಹಾ ಸಮಿತಿಯ ಸದಸ್ಯರು ಮತ್ತು ಆರೋಗ್ಯ ಇಲಾಖೆ ಅಧಿಕಾರಿಗಳ ಜತೆಗೆ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ಅವರು ಗುರುವಾರ ಸಭೆ ನಡೆಸಿದರು. ಈ ಸಭೆಯಲ್ಲಿ ಶಾಲೆ ಆರಂಭದ ಬಗ್ಗೆ ಸುಧೀರ್ ಚರ್ಚೆ ನಡೆಯಿತು.
ರಾಜ್ಯದಲ್ಲಿ ಪ್ರಸ್ತುತ ಕರೊನಾ ಸೋಂಕು ಹರಡುವಿಕೆ, ಪ್ರಕರಣಗಳ ದಾಖಲು, ಮರಣದ ಪ್ರಮಾಣ
ತಗ್ಗಿರುವುದರಿಂದ ಶಾಲೆ ಆರಂಭಿಸುವ ಬಗ್ಗೆ ಚರ್ಚಿಸಿದರು.
ಪರಿಸ್ಥಿತಿ ಅವಲೋಕಿಸಿ ತಾಂತ್ರಿಕ ಸಲಹಾ ಸಮಿತಿ ಯಾವ ತರಗತಿಗಳನ್ನು ಯಾವ ದಿನಗಳಲ್ಲಿ ಪ್ರಾರಂಭಿಸಬೇಕು, ಈ ವೇಳೆಯಲ್ಲಿ ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆ ಕ್ರಮಗಳ ಕುರಿತು ಪ್ರಮಾಣಿತ ಕಾರ್ಯಚರಣಾ ವಿಧಾನ(ಎಸ್ಒಪಿ)ವನ್ನು ಸಿದ್ಧಪಡಿಸಿಕೊಟ್ಟಿದ್ದು, ಇದರ ಆಧಾರದ ಮೇಲೆ ಮುಖ್ಯಮಂತ್ರಿ ಜತೆಗೆ ಚರ್ಚಿಸಿ ಶಾಲೆ ಆರಂಭಿಸುವ ಬಗ್ಗೆ ನಿರ್ಧಾರ ಪ್ರಕಟಿಸಲಾಗುವುದು ಎಂದು ಸುರೇಶ್ ಕುಮಾರ್ ತಿಳಿಸಿದ್ದಾರೆ.
ಮುಂದಿನ ವ್ಯಾಸಂಗ ಮತ್ತು ಸ್ಪರ್ಧಾತ್ಮಕ ಪರೀೆಗಳ ದೃಷ್ಟಿಯಿಂದ ಎಸ್ಸೆಸ್ಸೆಲ್ಸಿ ಮತ್ತು ದ್ವೀತಿಯ ಪಿಯು ತರಗತಿಗಳನ್ನು ಮತ್ತು ಪರಿಷತ ವಿದ್ಯಾಗಮ ಆರಂಭಿಸುವ ಸಂಬಂಧ ಕ್ರಮಗಳ ಕುರಿತು ಸಲಹಾ ಸಮಿತಿ ಸಲಹೆ ನೀಡಿದೆ. ನಂತರ ಉಳಿದ ತರಗತಿಗಳ ಆರಂಭಕ್ಕೂ ಕ್ರಮವಹಿಸುವಂತೆ ಸೂಚನೆ ನೀಡಿದೆ.
ಪಾಲಕರ ಅನುಮತಿ ಕಡ್ಡಾಯ: ಶಾಲೆ ಆರಂಭಕ್ಕೂ ಮುನ್ನ ಶಾಲೆಗಳು ಕಟ್ಟುನಿಟ್ಟಾಗಿ ಸುರಕ್ಷತಾ ಕ್ರಮಗಳನ್ನು ಅನುಸರಿಸುವ ಬಗ್ಗೆ ಖಾತರಿ ಮಾಹಿತಿ ಪಡೆದ ನಂತರವೇ ತರಗತಿಗಳನ್ನು ಆರಂಭಿಸುತ್ತೇವೆ. ಶಾಲೆಗೆ ಬರಲು ಇಚ್ಛಿಸುವ ವಿದ್ಯಾರ್ಥಿಗಳು ಹಾಜರಾತಿಗೆ ಪಾಲಕರಿಂದ ಕಡ್ಡಾಯವಾಗಿ ಅನುಮತಿ ಪತ್ರ ತರಬೇಕಿದೆ. ಆರೋಗ್ಯದ ತೊಂದರೆ ಶೀತ, ನೆಗಡಿ, ಕೆಮ್ಮು ಹಾಗೆಯೇ ಕರೊನಾ ಲಕ್ಷಣಗಳಿರುವ ಮಕ್ಕಳು ಶಾಲೆಗೆ ಬರುವಂತಿಲ್ಲ. ಅಲ್ಲದೆ, ಅವರು ಪರೀೆ ಮಾಡಿಸಿಕೊಂಡು ವೈದ್ಯಕಿಯ ವರದಿಯೊಂದಿಗೆ ಹಾಜರಾಗಬೇಕಿದೆ. ತಮ್ಮ ಮಕ್ಕಳಿಗೆ ರುಚಿ, ವಾಸನೆ ಕೊರತೆ, ಉಸಿರಾಟದ ತೊಂದರೆ, ಗಂಟಲು ನೋವು ಸೇರಿದಂತೆ ಯಾವುದೇ ಲಕ್ಷಣಗಳಿಲ್ಲ ಎಂಬುದನ್ನು ಖಾತರಿ ಪಡಿಸಿಕೊಂಡು ಪಾಲಕರು ಅನುಮತಿ ಪತ್ರದಲ್ಲಿ ಸಹಿ ಮಾಡಿ ಕಳುಹಿಸುವುದು ಕಡ್ಡಾಯವಾಗಿದೆ. ಈಗಾಗಲೇ ಈ ಎಲ್ಲ ಮಾರ್ಗಸೂಚಿಗಳನ್ನು ಪದವಿ ಮತ್ತು ಸ್ನಾತಕೋತ್ತರ ಪದವಿ ತರಗತಿಗಳು ಅನುಸರಿಸುತ್ತಿರುವುದರಿಂದ ಉತ್ತಮವಾಗಿ ತರಗತಿಗಳು ನಡೆಯುತ್ತಿವೆ. ಇದೇ ಮಾದರಿಯಲ್ಲಿ ಶಾಲೆಗಳು ಸಹ ಅನುಸರಿಸಬೇಕು ಎಂದು ಸಮಿತಿಯು ಸರ್ಕಾರಕ್ಕೆ ನೀಡಿರುವ ವರದಿಯಲ್ಲಿ ತಿಳಿಸಿದೆ ಎಂದು ಸಚಿವರು ತಿಳಿಸಿದರು.
ಪಾಲಕರ ಸಭೆ: ಎಸ್ಸೆಸ್ಸೆಲ್ಸಿ ಪರೀೆ ನಡೆಸಿದಾಗ ಕರೊನಾ ಪ್ರಸರಣವಾಗಿರಲಿಲ್ಲ. ಇನ್ನೂ ತರಗತಿಗಳನ್ನು ನಡೆಸುವಾಗ ಜಾಗೃತಿವಹಿಸಬೇಕು. ಈ ಬಗ್ಗೆ ಪಾಲಕರಿಗೆ ಅರಿವು ಮೂಡಿಸಲು ಶಾಲಾ ಆರಂಭಕ್ಕೂ ಮುನ್ನ ಅಂದರೆ ಡಿಸೆಂಬರ್ ಕೊನೆ ವಾರದಲ್ಲಿ ಶಾಲಾ ಆಡಳಿತ ಮಂಡಳಿಗಳು, ಎಸ್ಡಿಎಂಸಿ ಸಮಿತಿ, ಪಾಲಕರು, ಮಕ್ಕಳು ಸೇರಿದಂತೆ ಶೈಕ್ಷಣಿಕ ಪಾಲುದಾರರನ್ನು ಕರೆದು ಸಭೆ ನಡೆಸಿ ಶಾಲೆ ಆರಂಭದ ಬಗ್ಗೆ ವಿಶ್ವಾಸ ಮೂಡಿಸುವ ಪ್ರಯತ್ನ ಮಾಡುವುದು ಸೂಕ್ತವೆಂದು ಸಮಿತಿಲ್ಲಿದ್ದ ತಜ್ಞರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಕರೊನಾ ಪರೀೆ: ರೋಗ ಲಕ್ಷಣಗಳಿರುವ ವಿದ್ಯಾರ್ಥಿ, ಶಿಕ್ಷಕರು, ಸಿಬ್ಬಂದಿಗೆ ಕರೊನಾ ಪರೀೆಗೆ ಮೊದಲ ಆದ್ಯತೆ ನೀಡಿ ಪರೀೆಗೆ ಒಳಪಡಿಸಬೇಕು. ಈ ಎಲ್ಲ ವಿಚಾರಗಳನ್ನು ಮುಖ್ಯಮಂತ್ರಿ ಅವರ ಅಧ್ಯಕ್ಷತೆಯಲ್ಲಿ ನಡೆಯುವ ವಿವಿಧ ಇಲಾಖೆಗಳ ಮುಖ್ಯಸ್ಥರ ಸಭೆಯಲ್ಲಿ ಚರ್ಚಿಸಿ ಸಹಕಾರ ಪಡೆದು ಶಾಲೆ ಆರಂಭಕ್ಕೆ ಮುಂದಿನ ನಿರ್ಧಾರ ತೆಗೆದುಕೊಳ್ಳುವುದಾಗಿ ಸಚಿವರು ತಿಳಿಸಿದರು.
ಈ ಸಭೆಯಲ್ಲಿ ಕರೊನಾ ತಾಂತ್ರಿಕ ಸಲಹಾ ಸಮಿತಿ ಅಧ್ಯಕ್ಷ ಡಾ.ಸುದರ್ಶನ, ಸದಸ್ಯರಾದ ಡಾ.ವಿ.ರವಿ, ಡಾ.ಎಂ.ಶರೀ, ಡಾ.ಬಿ.ಎಲ್.ಶಶಿಭೂಷಣ, ಡಾ.ಲೋಕೇಶ ಅಲ್ಹಾರಿ ಸೇರಿದಂತೆ ಕರೊನಾ ಸಲಹಾ ಸಮಿತಿ ಸದಸ್ಯರು, ಆರೋಗ್ಯ ಇಲಾಖೆ ಆಯುಕ್ತ ಪಂಕಜ ಕುಮಾರ ಪಾಂಡೆ, ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ಎಸ್.ಆರ್.ಉಮಾಶಂಕರ್, ಆಯುಕ್ತ ವಿ.ಅನ್ಬುಕುಮಾರ್, ಪಿಯು ಮಂಡಳಿ ನಿರ್ದೇಶಕಿ ಸ್ನೇಹಲ್ ಇತರರು ಇದ್ದರು.
1ರಿಂದ 5ನೇ ತರಗತಿಗೆ ಬೇಡ ವಿದ್ಯಾಗಮ
ಬಾಕ್ಸ್
ರಾಜ್ಯ ಸರ್ಕಾರ ವಿದ್ಯಾಗಮವನ್ನು ಪರಿಷತ ರೀತಿಯಲ್ಲಿ ರೂಪಿಸಿ ಜ.1ರಿಂದ ಆರಂಭಿಸಲು ನಿರ್ಧರಿಸಿದೆ. ಆದರೆ, ಮಕ್ಕಳ ಆರೋಗ್ಯದ ಹಿತದೃಷ್ಟಿಯಿಂದ 1ರಿಂದ 5ನೇ ತರಗತಿ ವಿದ್ಯಾರ್ಥಿಗಳಿಗೆ ವಿದ್ಯಾಗಮ ನಡೆಸುವುದು ಬೇಡ ಎಂದು ಕರೊನಾ ತಾಂತ್ರಿಕ ಸಲಹಾ ಸಮಿತಿ ತಮ್ಮ ಅಭಿಪ್ರಾಯವನ್ನು ಶಿಕ್ಷಣ ಇಲಾಖೆಗೆ ತಿಳಿಸಿದೆ. ಬದಲಾಗಿ 6ರಿಂದ 8ನೇ ತರಗತಿ ವಿದ್ಯಾರ್ಥಿಗಳಿಗೆ ಸುರಕ್ಷತಾ ಕ್ರಮಗಳನ್ನು ಅನುಸರಿಸಿ ನಡೆಸುವುದು ಉತ್ತಮ ಎಂದು ಸಮಿತಿ ಸಲಹೆ ನೀಡಿದೆ.