

ರಾಣೆಬೆನ್ನೂರ: ಇಲ್ಲಿಯ ದೆಹಲಿ ಸೆಂಟ್ರಲ್ ಶಾಲೆಯ 2023-24ನೇ ಸಾಲಿನ ಶಾಲಾ ಸಂಸತ್ ಉದ್ಘಾಟನೆ ಕಾರ್ಯಕ್ರಮ ಮಂಗಳವಾರ ನಡೆಯಿತು.
ಪ್ರಾಚಾರ್ಯೆ ಆನಂದಿ ಭಟ್ ಕಾರ್ಯಕ್ರಮ ಉದ್ಘಾಟಿಸಿದರು. ಶಹರ ಠಾಣೆ ಪಿಎಸ್‌ಐ ವಿಜಯಕುಮಾರ ಬಳಿಗಾರ, ಗಡ್ಡೆಪ್ಪ ಗುಂಜುಟಗಿ ಅತಿಥಿಗಳಾಗಿ ಪಾಲ್ಗೊಂಡಿದ್ದರು. ಶಾಲೆಯ ಆಡಳಿತ ಮಂಡಳಿ ಅಧ್ಯಕ್ಷ ವೆಂಕಟೇಶ ತೊಗಟವೀರ, ಕಾರ್ಯದರ್ಶಿ ಮಂಜುನಾಥ ತೊಗಟವೀರ, ವಿಜಯಲಕ್ಷ್ಮೀ ಪೂಜಾರ ಹಾಗೂ ಸಿಬ್ಬಂದಿ ಇದ್ದರು.