ಸ್ಕೂಲ್​ ಬಸ್​ಗೆ 3 ವರ್ಷದ ಬಾಲಕಿ ಬಲಿ! ತಾತನ ಮನೆ ಮುಂದೆ ಆಟವಾಡುತ್ತಿರುವಾಗಲೇ ದುರಂತ

death
Published on

ಯಾದಗಿರಿ: ತಾತನ ಮನೆ ಮುಂದೆ ಆಟವಾಡುತ್ತಿದ್ದ 3 ವರ್ಷದ ಬಾಲಕಿ ಮೇಲೆ ಶಾಲಾ ಬಸ್ ಹರಿದಿದ್ದು, ಸ್ಥಳದಲ್ಲೇ ಬಾಲಕಿ ಮೃತಪಟ್ಟಿದ್ದಾಳೆ.

ಇಂತಹ ದುರ್ಘಟನೆ ಯಾದಗಿರಿ ಜಿಲ್ಲೆ ಗುರುಮಠಕಲ್ ಪಟ್ಟಣದಲ್ಲಿ ಸಂಭವಿಸಿದೆ. ವೆಂಕಟಪ್ಪ ಅವರ ಪುತ್ರಿ ಮನಸ್ವಿನಿ(3) ಮೃತ ದುರ್ದೈವಿ. ಪೋಷಕರ ಜೊತೆ ಅಜ್ಜನ ಮನೆಗೆ ಬಂದಿದ್ದ ಮನಸ್ವಿನಿ, ಮನೆ ಮುಂದೆ ಶುಕ್ರವಾರ ಬೆಳಗ್ಗೆ ಆಟವಾಡುತ್ತಿದ್ದಳು. ಈ ವೇಳೆ ಬಾಲಕಿ ಆಯತಪ್ಪಿ ರಸ್ತೆ ಮೇಲೆ ಬಿದ್ದಿದ್ದಾಳೆ. ಈ ವೇಳೆ ಬಾಲಕಿಯ ತಲೆ ಮೇಲೆ ಶಾಲಾ ಬಸ್ ಹರಿದಿದ್ದು, ಸ್ಥಳದಲ್ಲೇ ಮೃತಪಟ್ಟಿದ್ದಾಳೆ.

ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಪುಟ್ಟ ಹೆಜ್ಜೆಯನ್ನಿಟ್ಟು ಮುದ್ದು ಉಕ್ಕಿಸುಂತೆ ನಗೆ ಬೀರುತ್ತಾ ಆಟವಾಡುತ್ತಿದ್ದ ಬಾಲಕಿ ಇನ್ನಿಲ್ಲ ಎಂಬ ಸುದ್ದಿ ಕೇಳಿ ಸ್ಥಳೀಯರಿಗೂ ಆಘಾತವಾಗಿದೆ. ಗುರುಮಠಕಲ್ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net