

Bengaluru : ಬೆಂಗಳೂರಿನಲ್ಲಿ ಮೂವರ ಪುಂಡರ ಗುಂಪೊಂದು ಯುವತಿಯರನ್ನು ಹಿಂಬಾಲಿಸಿಕೊಂಡು ಬಂದಿದ್ದಾರೆ. ಈ ವಿಡಿಯೋವನ್ನು ಯುವತಿಯೊಬ್ಬಳು ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡು ತಮಗೆ ಆಗಿರುವ ಅನುಭವದ ಕುರಿತಾಗಿ ಕಳವಳ ವ್ಯಕ್ತಪಡಿಸಿದ್ದಾರೆ.
ಮೂವರು ಯುವತಿಯರು ಬೆಂಗಳೂರಿನ ರಾಮೇಶ್ವರಂ ಕೆಫೆ ಬಳಿ ಮೂವರು ಯುವತಿಯರು ತಿಂಡಿ ತಿನ್ನಲು ಹೋಗಿದ್ದಾರೆ. ಈ ವೇಳೆಯಲ್ಲಿ ಅಲ್ಲೇ ಇದ್ದ ಮೂವರು ವ್ಯಕ್ತಿಗಳು ಇವರನ್ನು ಹಿಂಬಾಲಿಸಿದ್ದಾರೆ.ಅಲ್ಲಿಂದ ಹೊರಟ ಬಳಿಕವೂ ಈ ಗ್ಯಾಂಗ್ ಕಾರಿನಲ್ಲಿ ಯುವತಿಯರನ್ನು ಹಿಂಬಾಲಿಸಿದೆ. ಆಟೋ ಬುಕ್ ಮಾಡಿಕೊಂಡು ತಮ್ಮ ಪಿಜಿಗೆ ತೆರಳುತ್ತಿದ್ದ ವೇಳೆಯಲ್ಲಿ ಮತ್ತೆ ಅದೇ ವ್ಯಕ್ತಿಗಳು ಕಾರಿನಲ್ಲಿ ತಮ್ಮನ್ನು ಹಿಂಬಾಲಿಸುವುದನ್ನು ನೋಡಿದ್ದಾರೆ. ಈ ವೇಳೆಯಲ್ಲಿ ಈ ಕಾರು ತಮ್ಮ ಆಟೋವನ್ನು ಹಿಂಬಾಲಿಸುತ್ತಿದೆ. ಜೆಪಿ ನಗರದಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ತಮ್ಮನ್ನು ಹಿಂಬಾಲಿಸುವುದು ಪ್ರಾರಂಭವಾಗಿದ್ದು, ರಾಪಿಡೋ ಹತ್ತಿದ ಬಳಿಕವೂ ಇದು ಮುಂದುವರೆಯಿತು. ನಂತರ ಟ್ರಾಫಿಕ್ನಿಂದಾಗಿ ನಾವು ಅವರಿಗೆ ಕಾಣಿಸಿಕೊಳ್ಳಲಿಲ್ಲ ಎಂದು ಯುವತಿಯೊಬ್ಬಳು ಹೇಳುತ್ತಾ ಈ ಬಗ್ಗೆ ವಿವರಿಸಿದ್ದಾಳೆ. ಈ ಕಹಿ ಅನುಭವವು ನಮ್ಮನ್ನು ಒಂದು ಕ್ಷಣ ಭಯಗೊಳ್ಳುವಂತೆ ಮಾಡಿದೆ. ಆಟೋ ಚಾಲಕನು ತಮಗೆ ಸಹಾಯ ಮಾಡಲು ಮುಂದಾಗಲಿಲ್ಲ, ಈ ವಿಡಿಯೋದ ಕೊನೆಗೆ ತಾವು ಸೇಫ್ ಆಗಿ ಪಿಜಿ ತಲುಪಿದೆವು ಎಂದು ಯುವತಿ ಹೇಳಿದ್ದಾಳೆ.
ಈ ಘಟನೆಯಿಂದ ತಮಗೆ "ಭಯ ಮತ್ತು ಆಘಾತವಾಗಿದೆ" ಎಂದು ಮಹಿಳೆಯರು ವ್ಯಕ್ತಪಡಿಸಿದ್ದಾರೆ ಮತ್ತು ಇತರರು ಜಾಗರೂಕರಾಗಿರಲು ಒತ್ತಾಯಿಸಿದರು. ನೆಟ್ಟಿಗರು ಪೊಲೀಸರಲ್ಲಿ ದೂರು ದಾಖಲಿಸುವಂತೆ ಸಲಹೆ ನೀಡಿದ್ದಾರೆ.
ಈ ಮೂವರಲ್ಲಿ ಒಬ್ಬಾಕೆ ಇವರ ವಿಡಿಯೋ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದಾಳೆ. suha_hana88 ಎಂಬ ಇನ್ ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾಳೆ. ಆ ಪುಂಡರ ಕಾರಿನ ನಂಬರ್ ನ್ನು ಹಂಚಿಕೊಳ್ಳಲು ಹಿಂದೇಟು ಹಾಕಬೇಡಿ ಎಂದು ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ.