ಪೇಟಿಯಂ ಅಪ್‌ಡೇಟ್ ಮಾಡುವ ಸೋಗಿನಲ್ಲಿ ವಂಚನೆ

Crime Logo
Published on

ಬೆಂಗಳೂರು: ಪೇಟಿಯಂ ಅಪ್‌ಡೇಟ್ ಮಾಡುವ ಸೋಗಿನಲ್ಲಿ ಅಪರಿಚಿತ ವ್ಯಕ್ತಿಯೊಬ್ಬ ಹೋಟೆಲ್ ಮಾಲೀಕರಿಗೆ ೪೮ ಸಾವಿರ ರೂ. ವಂಚಿಸಿದ್ದಾನೆ.
ಈ ಸಂಬಂಧ ಕಲ್ಯಾಣ ನಗರದ ಮಂಜುನಾಥ ಟಿಫನ್ ಸೆಂಟರ್ ಮಾಲೀಕ ಹಾಗೂ ಮಾಳಗಾಲ ನಿವಾಸಿ ಭಾಸ್ಕರ್ ಎಂಬುವರು ನೀಡಿದ ದೂರಿನ ಮೇರೆಗೆ ಚಂದ್ರಾಲೇಔಟ್ ಠಾಣೆ ಪೊಲೀಸರು ಅಪರಿಚಿತ ವ್ಯಕ್ತಿ ವಿರುದ್ಧ ಪ್ರಕರಣ ದಾಖಲಿಸಿಕೊಂಡು, ಆತನಿಗಾಗಿ ಶೋಧ ಕಾರ್ಯ ನಡೆಸುತ್ತಿದ್ದಾರೆ.
ಏ.೪ರಂದು ಮಧ್ಯಾಹ್ನ ೧೨ ಗಂಟೆ ಸುಮಾರಿಗೆ ಹೋಟೆಲ್‌ಗೆ ಬಂದ ಅಪರಿಚಿತ ವ್ಯಕ್ತಿಯೊಬ್ಬ ಪೇಟಿಯಂ ಕಂಪನಿಯ ಪ್ರತಿನಿಧಿ ಎಂದು ಹೇಳಿಕೊಂಡು ದೂರುದಾರರನ್ನು ಪರಿಚಯಿಸಿಕೊಂಡಿದ್ದಾನೆ. ಬಳಿಕ ನಿಮ್ಮ ಪೇಟಿಯಂ ಕ್ಯೂಆರ್ ಕೋಡ್ ಸ್ಕಾೃನರ್ ಅಪ್‌ಡೇಟ್ ಮಾಡಬೇಕೆಂದು ನಂಬಿಸಿ, ಮೊಬೈಲ್ ನಂಬರ್ ಪಡೆದುಕೊಂಡಿದ್ದಾನೆ. ನಂತರ ದೂರುದಾರರ ಯುಪಿಐ ಮೂಲಕ ತನ್ನ ಖಾತೆಗೆ ೧ ರೂ. ವರ್ಗಾವಣೆ ಮಾಡಿಕೊಂಡಿದ್ದಾನೆ. ಕೆಲ ಹೊತ್ತಿನ ಬಳಿಕ ಆರೋಪಿ ಕ್ಯೂರ್ ಕೋಡ್ ಸ್ಕಾೃನರ್ ಅಪ್‌ಡೇಟ್ ಆಗಿದೆ ಎಂದು ಹೇಳಿ, ಅಲ್ಲಿಂದ ಕಾಲ್ಕಿತ್ತಿದ್ದಾನೆ.
ಆ ನಂತರ ದೂರುದಾರರ ಎರಡು ಬ್ಯಾಂಕ್ ಖಾತೆಗಳಲ್ಲಿದ್ದ ೪೮ ಸಾವಿರ ರೂ. ಕಡಿತವಾಗಿದೆ. ಹೀಗಾಗಿ ಆರೋಪಿಯೇ ಯುಪಿಐ ಕ್ಯೂಆರ್ ಕೋಡ್ ಅಪ್‌ಡೇಟ್ ಹೆಸರಿನಲ್ಲಿ ವಂಚನೆ ಮಾಡಿರುವುದು ಮೇಲ್ನೋಟಕ್ಕೆ ಗೊತ್ತಾಗಿದೆ. ಆದರಿಂದ ಅಪರಿಚಿತ ವ್ಯಕ್ತಿಯ ವಿರುದ್ಧ ಕಾನೂನು ಕ್ರಮಕೈಗೊಳ್ಳುವಂತೆ ಭಾಸ್ಕರ್ ದೂರಿನಲ್ಲಿ ಕೋರಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ಅಪರಿಚಿತ ವ್ಯಕ್ತಿಗಾಗಿ ಶೋಧ ಕಾರ್ಯ ನಡೆಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net