ಈ ಫೇಸ್​ ಪ್ಯಾಕ್ ಬಳಸಿ ಸನ್​ಬರ್ನ್​ಗೆ ಗುಡ್​ ಬೈ ಹೇಳಿ!| Beauty tips

untitled-design-2025-09-25t175649156-68d53523ee43a
Published on

Beauty tips: ಇಂದಿನ ಜನರು ಎಥೇಚ್ಛವಾಗಿ ಪಾರ್ಲರ್‌ಗಳಿಗೆ ಹೋಗಿ ಮುಖವನ್ನು ಕಾಂತಿಯುತಗೊಳಿಸಲು ಕ್ಲೆನ್ಸಿಂಗ್ ಮತ್ತು ಫೇಶಿಯಲ್‌ಗಳಂತಹ ಕ್ರಿಯೆಗಳನ್ನು ಮಾಡಿಸಿಕೊಳ್ಳುತ್ತಾರೆ. ಆದರೆ ಇದು ಚರ್ಮಕ್ಕೆ ತಾತ್ಕಾಲಿಕ ಪ್ರಯೋಜನಗಳನ್ನು ನೀಡುತ್ತವೆ. ಹಾಗಾಗಿ ಯಾವುದೇ ಅಡ್ಡಪರಿಣಾಮಗಳಿಲ್ಲದೆ ದೀರ್ಘಕಾಲೀನ ಫಲಿತಾಂಶಗಳನ್ನು ಬಯಸಿದರೆ, ನೀವು ಈ ಮನೆಮದ್ದನ್ನು ಪ್ರಯತ್ನಿಸಿ...

* ಕಡಲೆಹಿಟ್ಟು

ಪ್ರಾಚೀನ ಕಾಲದಿಂದಲೂ ಚರ್ಮದ ಆರೈಕೆಗಾಗಿ ಕಡ್ಲೆಹಿಟ್ಟನ್ನು ಬಳಸುತ್ತಾರೆ. ಇದು ಚರ್ಮದಲ್ಲಿರುವ ಹೆಚ್ಚುವರಿ ಎಣ್ಣೆಯನ್ನು ನೈಸರ್ಗಿಕವಾಗಿ ಹೀರಿಕೊಳ್ಳುವಂತ ಸಾಮರ್ಥ್ಯವನ್ನು ಹೊಂದಿದೆ. ಆದರಿಂದ ಈ ಕಡಲೆ ಹಿಟ್ಟನ್ನು ಮುಖಕ್ಕೆ ಹಚ್ಚುವುದರಿಂದ ಮುಖದಲ್ಲಿರುವ , ಧೂಳು ಮತ್ತು ಸತ್ತ ಜೀವಕೋಶಗಳನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ. ಇದರ ನಿಯಮಿತ ಬಳಕೆಯಿಂದ, ಚರ್ಮವು ಸ್ವಚ್ಛ, ಹೊಳಪು ಮತ್ತು ಮೃದುವಾಗುತ್ತದೆ. ಇದು ನೈಸರ್ಗಿಕ ಸಿಪ್ಪೆ ಸುಲಿಯುವಿಕೆಯನ್ನು ಒದಗಿಸುತ್ತದೆ ಮತ್ತು ಚರ್ಮವನ್ನು ಸುಂದರವಾಗಿ ಕಾಣುವಂತೆ ಮಾಡುತ್ತದೆ.

* ಶ್ರೀಗಂಧದ ಪುಡಿ

ಶ್ರೀಗಂಧದ ಪುಡಿಯನ್ನು ಪೂಜೆಯಲ್ಲಿ ಮಾತ್ರವಲ್ಲದೆ ಚರ್ಮದ ಆರೋಗ್ಯಕ್ಕೂ ಅಮೂಲ್ಯವೆಂದು ಪರಿಗಣಿಸಲಾಗುತ್ತದೆ. ಇದು ನೈಸರ್ಗಿಕ ತಂಪಾಗಿಸುವ ಪರಿಣಾಮವನ್ನು ಹೊಂದಿದೆ. ಇದು ಚರ್ಮದಲ್ಲಾಗುವ ಆಯಾಸ, ಉರಿಯೂತ, ಚರ್ಮದ ಟೋನ್​ನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

* ಜೇನುತುಪ್ಪ

ಜೇನುತುಪ್ಪವು ಚರ್ಮಕ್ಕೆ ನೈಸರ್ಗಿಕವಾದ ಔಷಧವಾಗಿದೆ. ಇದು ತೇವಾಂಶವನ್ನು ಉಳಿಸಿಕೊಳ್ಳುವ ಶಕ್ತಿಯನ್ನು ಹೊಂದಿದ್ದರಿಂದ ನಿಮ್ಮ ಚರ್ಮವನ್ನು ಒಣಗಲು ಬಿಡುವುದಿಲ್ಲ. ಜೇನುತುಪ್ಪವು ನಂಜುನಿರೋಧಕ ಗುಣಗಳನ್ನು ಹೊಂದಿದೆ. ಆದ್ದರಿಂದ ಇದು ಮೊಡವೆ ಮತ್ತು ದದ್ದುಗಳಿಂದ ರಕ್ಷಿಸುತ್ತದೆ. ಇದು ಚರ್ಮವನ್ನು ಮೃದು, ಕಾಂತಿಯುತ ಮತ್ತು ಆರೋಗ್ಯಕರವಾಗಿರಿಸುತ್ತದೆ. ಇದನ್ನು ನಿಮ್ಮ ಮುಖಕ್ಕೆ ಹಚ್ಚುವುದರಿಂದ ನಿಮ್ಮ ಮುಖವು ಕಾಂತಿಯುತವಾಗಿ ಕಾಣಲು ಸಹಾಯವಾಗುತ್ತದೆ.

* ನಿಂಬೆಹಣ್ಣು

ನಿಂಬೆಹಣ್ಣಿನಲ್ಲಿ ವಿಟಮಿನ್ ಸಿ ಸಮೃದ್ಧವಾಗಿದ್ದು, ಇದು ಚರ್ಮವನ್ನು ಕಾಂತಿಯುತಗೊಳಿಸಲು ಸಹಾಯ ಮಾಡುತ್ತದೆ. ನಿಂಬೆ ರಸವನ್ನು ಮುಖಕ್ಕೆ ಸಿಂಪಡಿಸಿವುದರಿಂದ ಟ್ಯಾನಿಂಗ್ ಮತ್ತು ಪಿಗ್ಮೆಂಟೇಶನ್ ಅನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಸರಿಯಾದ ಪ್ರಮಾಣದಲ್ಲಿ ನಿಮ್ಮ ಮುಖಕ್ಕೆ ಹಚ್ಚಬೇಕು. ಇಲ್ಲದಿದ್ದರೆ, ಇದು ನಿಮ್ಮ ಮುಖಕ್ಕೆ ಕಿರಿ ಕಿರಿ ಉಂಟು ಮಾಡಬಹುದು. (ಏಜೆನ್ಸೀಸ್​)

ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಿಂದ ಸಂಗ್ರಹಿಸಲಾಗಿದೆ ಮತ್ತು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಸ್ತುತ ಪಡಿಸಲಾಗಿದೆ. ಇದನ್ನು “ವಿಜಯವಾಣಿ ಡಾಟ್ ನೆಟ್" ದೃಢಪಡಿಸುವುದಿಲ್ಲ. ಯಾವುದೇ ಸಲಹೆಯನ್ನು ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಯಾವಾಗಲೂ ಉತ್ತಮ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net