ಗ್ರಾಮೀಣರಿಗೆ ಉಳಿತಾಯದ ಅರಿವು ಅಗತ್ಯ

hhr
ಆನವೇರಿಯಲ್ಲಿ ಕರ್ಣಾಟಕ ಬ್ಯಾಂಕ್ ಶಾಖೆಯನ್ನು ರ‌್ಯಾಮ್ಕೊ ನಿರ್ದೇಶಕ ಜಗದೀಶಪ್ಪ ಗೌಡ ಉದ್ಘಾಟಿಸಿದರು. ನಾಗರಾಜ್, ಸುರೇಶ್ ಗೌಡ, ನಾಗರಾಜ್ ಉಪಾಧ್ಯಾಯ, ಚೇತನ ಇತರರಿದ್ದರು.
Published on

ಹೊಳೆಹೊನ್ನೂರು: ಗ್ರಾಮೀಣ ಜನರು ದುಡಿಮೆಯ ಅಲ್ಪ ಭಾಗವನ್ನಾದರೂ ಉಳಿತಾಯ ಮಾಡುವತ್ತ ಗಮನ ಹರಿಸಬೇಕು ಎಂದು ರ‌್ಯಾಮ್ಕೊ ನಿರ್ದೇಶಕ ಜಗದೀಶಪ್ಪ ಗೌಡ ಹೇಳಿದರು.

ಆನವೇರಿಯಲ್ಲಿ ಶುಕ್ರವಾರ ಕರ್ಣಾಟಕ ಬ್ಯಾಂಕಿನ 961ನೇ ಶಾಖೆ ಉದ್ಘಾಟಿಸಿ ಮಾತನಾಡಿದ ಅವರು, ಪ್ರತಿಯೊಬ್ಬರೂ ಸ್ಥಳೀಯ ಬ್ಯಾಂಕಿನಲ್ಲಿ ಖಾತೆಗಳನ್ನು ತೆರೆದು ವ್ಯವಹಾರ ಮಾಡಬೇಕು. ಸಿಬ್ಬಂದಿ ಸಹ ಗ್ರಾಮೀಣ ಗ್ರಾಹಕರೊಂದಿಗೆ ಸೌಜನ್ಯದಿಂದ ವರ್ತಿಸಬೇಕು. ಜನಸಾಮಾನ್ಯರಿಗೆ ಅನೂಕೂಲವಾಗುವಂತೆ ಸೇವೆಗಳು ಲಭಿಸಬೇಕು. ಉಳಿತಾಯ ಯೋಜನೆಗಳು ಕುಟುಂಬವನ್ನು ಸದೃಢವಾಗಿ ಇಡುವುದರಲ್ಲಿ ಎರಡು ಮಾತಿಲ್ಲ ಎಂದರು.

ಜನರಲ್ ಮ್ಯಾನೇಜರ್ ನಾಗರಾಜ್ ಉಪಾಧ್ಯಾಯ ಮಾತನಾಡಿ, ರಾಜ್ಯಾದ್ಯಂತ ಒಂದು ಸಾವಿರ ಶಾಖೆ ತೆರೆಯುವ ಉದ್ದೇಶವಿದೆ. 14 ರಾಜ್ಯಗಳಲ್ಲಿ ಕರ್ಣಾಟಕ ಬ್ಯಾಂಕಿನ 962 ಶಾಖೆ ತೆರೆದಿದ್ದು, ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿವೆ. ಸಾಮಾಜಿಕ ಕಾರ್ಯಗಳಿಗೆ ಕೈ ಜೋಡಿಸಲಾಗುತ್ತಿದೆ ಎಂದರು.

ವಲಯ ವ್ಯವಸ್ಥಾಪಕ ನಾಗರಾಜ್ ಮಾತನಾಡಿ, ಗ್ರಾಮಗಳಲ್ಲಿ ಶಿಕ್ಷಣ, ಆರೋಗ್ಯ ಸೇವೆಗಳು ಸೇರಿ ಬ್ಯಾಂಕ್‌ಗಳು ಅಗತ್ಯವಾಗಿ ಇರಬೇಕು. 101 ವರ್ಷ ಪೂರೈಸಿ ಮುನ್ನಡೆಯುತ್ತಿರುವ ಕರ್ಣಾಟಕ ಬ್ಯಾಂಕಿನಲ್ಲಿ 1.13 ಕೋಟಿ ಖಾತೆಗಳಿವೆ. ಬ್ಯಾಂಕ್ ಪ್ರಸ್ತುತ 1,020 ಕೋಟಿ ರೂ. ಲಾಭದಲ್ಲಿದೆ. ಶಿವಮೊಗ್ಗ ವಲಯದ 83 ಶಾಖೆಗಳಲ್ಲಿ 10 ಸಾವಿರ ಕೋಟಿ ರೂ. ವಹಿವಾಟು ನಡೆಯುತ್ತಿದೆ. ಎಂದರು.

ಶಾಖಾ ವ್ಯವಸ್ಥಾಪಕ ಚೇತನ, ಸುರೇಶ್ ಗೌಡ, ಎಸ್.ಸಿದ್ದಲಿಂಗಪ್ಪ, ಜನಕರಾಜಪ್ಪ ಗೌಡ, ಲೋಹಿತಣ್ಣ, ಶಿವನ ಗೌಡ, ಎಂ.ಕುಬೆಂದ್ರಪ್ಪ, ಜೀವಿತ್ ಹೆಗ್ಡೆ, ಬಿ.ಟಿ.ಹನುಮಂತಪ್ಪ, ಶಿವಾನಂದಪ್ಪ, ತೀರ್ಥಪ್ಪ, ಪುಟ್ಟಪ್ಪ, ಎಸ್.ಪಿ.ದಿನೇಶ್, ತಿಪ್ಪೇಶ್, ಮುರುಳೀಧರ, ನಾಗಭೂಷಣ್ ಭಟ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net