ದೇವಿಯೂ ನಾಡಿನ ಎಲ್ಲ ಸಮುದಾಯದ ಭಕ್ತರಿಗೂ ಒಳಿತು ಮಾಡಲಿ; ಬೊಮ್ಮಾಯಿ

12-RNR-10
Published on

ಹಾವೇರಿ: ಸವಣೂರು ಮಹಾಲಕ್ಷಿ$್ಮ ದೇವಿ ಆಶೀರ್ವಾದದಿಂದ ನಾಡು ಸಮೃದ್ದಿಯಾಗಲಿ, ತಾಯಿ ಎಲ್ಲ ಸಮುದಾಯದ ಭಕ್ತಿರಿಗೂ ಆಶೀರ್ವಾದ ಮಾಡಲಿ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.

ಜಿಲ್ಲೆಯ ಸವಣೂರು ಪಟ್ಟಣದ ಬುಧವಾರಪೇಟೆಯ ಶ್ರೀ ಮಹಾಲಕ್ಷಿ$್ಮ ದೇವಿ ( ತುಳಜಾ ಭವಾನಿ) ದೇವಸ್ಥಾನದ ನೂತನ ಕಟ್ಟಡದ ಲೋಕಾರ್ಪಣೆ ಹಾಗೂ ಮೂತಿರ್ಯ ಪ್ರಾಣ ಪ್ರತಿಷ್ಠಾಪನೆ ಮತ್ತು ಕಳಸಾರೋಹಣ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ನಿಮ್ಮನ್ನೆಲ್ಲ ನೋಡಿ ನನಗೆ ಬಹಳ ಸಂತೋಷ ಆಗಿದೆ. ದೇವಸ್ಥಾನದಲ್ಲಿ ಮಹಾಲಕ್ಷಿ$್ಮ ದರ್ಶನ ಆಗಿದೆ. ಇಷ್ಟೊಂದು ತಾಯಂದಿರ ನೋಡಿ ಮಹಾಲಕ್ಷೀ ್ಮಯರ ದರ್ಶನ ಆಗುತ್ತದೆ ಎಂದು ಕೊಂಡಿರಲಿಲ್ಲ. ಈ ದೇಶಸ್ಥಾನದ ಜೀರ್ಣೊಧಾರಕ್ಕಾಗಿ ಎಲ್ಲರೂ ಕಷ್ಟ ಪಟ್ಟೀದ್ದಿರಿ, ದೇಣಿಗೆ ಕೊಟ್ಟೀದ್ಸಿರಿ, ತಾಯಿ ಮಹಾಲಕ್ಷೀ ್ಮ ಇನ್ನು ನೂರಾರು ವರ್ಷ. ವೈಭವದಿಂದ ಮೆರೆಯುತ್ತಾಳೆ. ಇದರಿಂದ ಸವಣೂರು, ಕರ್ನಾಟಕ ನಾಡಿನ ಅಭಿವೃದ್ದಿಯಾಗಲಿ ಎಂದು ಪ್ರಾಥಿರ್ಸುತ್ತೇನೆ ಎಂದರು.

ಯುವ ಮುಖಂಡರಾದ ಭರತ ಬೊಮ್ಮಾಯಿ, ಸವಣೂರ ಮಂಡಳದ ಅಧ್ಯಕ್ಷ ಶಿವಪುತ್ರಪ್ಪ ಕಲಕೋಟಿ, ಕಮೀಟಿಯ ಸದಸ್ಯರು ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net