

ಸವಣೂರ: ತಾಲೂಕಿನ ಜೇಕಿನಕಟ್ಟಿ ಗ್ರಾಮದ ಶ್ರೀ ಹುತ್ತಮಲ್ಲೇಶ್ವರ ದೇವರ ಜಾತ್ರಾ ಮಹೋತ್ಸವ ಏ. 12 ಹಾಗೂ 13ರಂದು ಎರಡು ದಿನಗಳ ಕಾಲ ನಡೆಯಲಿದೆ. 12ರಂದು ಬೆಳಗ್ಗೆ ಮಂತ್ರೋಡಿ ಸಿದ್ದರಾಮೇಶ್ವರ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯದಲ್ಲಿ ಧಾಮಿರ್ಕ ಕಾರ್ಯ ಆರಂಭವಾಗಲಿದ್ದು, ರುದ್ರಾಭಿಷೇಕ, ನಂತರ ಹಿರೇಹರಕುಣಿ ಪುರವಂತರಿಂದ ಗುಗ್ಗಳ ಮತ್ತು ಗಣಾರಾಧನೆ, ಗ್ರಾಮ ದೇವಿಗೆ ಉಡಿತುಂಬುವ ಕಾರ್ಯಕ್ರಮ ಜರುಗಲಿದೆ.
ಸಂಜೆ 6ಕ್ಕೆ ಹುತ್ತಮಲ್ಲೇಶ್ವರ ದೇವರ ಮಹಾರಥೋತ್ಸವ ಜರುಗಲಿದ್ದು, ರಾತ್ರಿ 10.30ಕ್ಕೆ ಶ್ರೀ ಹುತ್ತಮಲ್ಲೇಶ್ವರ ನವತರುಣ ನಾಟ್ಯ ಸಂಘದಿಂದ ರೈತನ ಹೆಸರು ನಾಡಿನ ಉಸಿರು ಎಂಬ ಸಾಮಾಜಿಕ ನಾಟಕ ಪ್ರದರ್ಶನವಾಗಲಿದೆ. 13ರಂದು ಬೆಳಗ್ಗೆ ಮಹಾ ರುದ್ರಾಭಿಷೇಕ ಸಂಜೆ 5ಕ್ಕೆ ಅಕ್ಕಳ ಬಳಗದಿಂದ ಅಕ್ಕಮಹಾದೇವಿ ರಥೋತ್ಸವ (ಮಹಿಳೆಯರು ರಥೋತ್ಸವ ಎಳೆಯುವರು) ಜರುಗಲಿದೆ. ರಾತ್ರಿ 10ಕ್ಕೆ ಶ್ರೀ ಹುತ್ತಮಲ್ಲೇಶ್ವರ ಆಟದ ಮಂಡಳಿ ವತಿಯಿಂದ ಕುರುಕ್ಷೇತ್ರ ಎಂಬ ನಾಟಕ ಪ್ರದರ್ಶನವಾಗಲಿದೆ ಎಂದು ದೇವಸ್ಥಾನ ಸಮಿತಿ ಪ್ರಕಟಣೆ ತಿಳಿಸಿದೆ.